Post has attachment

Post has attachment

Post has attachment

Post has attachment

ಕಾರವಾರ ಬಂದರು ವರಮಾನ ವೃದ್ಧಿ

ಕಾರವಾರ: ಇಲ್ಲಿನ ವಾಣಿಜ್ಯ ಬಂದರು 2015–16ನೇ ಸಾಲಿನಲ್ಲಿ ₹ 10.51 ಕೋಟಿ ವರಮಾನ ಗಳಿಸಿದ್ದು, ಕಳೆದ ವರ್ಷಕ್ಕಿಂತ ₹ 3.49 ಕೋಟಿಗಳಷ್ಟು ಹೆಚ್ಚಾಗಿದೆ. ಬಂದರು ಚಟುವಟಿಕೆಯಿಂದ ಪರೋಕ್ಷವಾಗಿ ಸುಂಕ ಇಲಾಖೆಗೆ ₹ 118 ಕೋಟಿ ಹಾಗೂ ಸೇವಾ ತೆರಿಗೆ ಇಲಾಖೆಗೆ 1.47 ಕೋಟಿ ವರಮಾನ ಬಂದಿದೆ. 2014–15ರಲ್ಲಿ ಇಲ್ಲಿಗೆ 97 ಸರಕು ಹಡಗುಗಳು ಬಂದಿದ್ದವು. ಈ ಬಾರಿ 119 ಹಡಗುಗಳು ಬಂದಿವೆ.

‘ಐದಾರು ವರ್ಷಗಳ ಹಿಂದೆ ಇಲ್ಲಿಂದ ಪ್ರಮುಖವಾಗಿ ಅದಿರು ರಫ್ತಾಗುತ್ತಿತ್ತು. ಅದಿರು ಸಾಗಾಟ ಸ್ತಬ್ಧಗೊಂಡ ಬಳಿಕ ವರಮಾನ ಗಣನೀಯವಾಗಿ ಇಳಿಮುಖವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದೆ’ ಎನ್ನುತ್ತಾರೆ ಬಂದರು ಆಡಳಿತಾಧಿಕಾರಿ ಸುರೇಶ್ ಶೆಟ್ಟಿ.

ರಫ್ತಿಗಿಂತ ಆಮದು ಹೆಚ್ಚಳ:
* ಕಳೆದ ನಾಲ್ಕೈದು ವರ್ಷಗಳಿಂದ ರಫ್ತಿಗಿಂತ ಆಮದು ವಹಿವಾಟು ಹೆಚ್ಚಿದೆ. ಡಾಂಬರು, ಹೈ ಸ್ಪೀಡ್‌ ಡೀಸೆಲ್‌ (ಎಚ್‌ಎಸ್‌ಡಿ), ಇಂಡಸ್ಟ್ರಿಯಲ್‌ ಸಾಲ್ಟ್‌, ರಾಕ್‌ ಫಾಸ್ಫೇಟ್‌, ತಾಳೆ ಎಣ್ಣೆ (ಪಾಮ್‌ ಆಯಿಲ್‌), ಕಾಸ್ಟಿಕ್‌ ಸೋಡಾ ಸಲ್ಯೂಷನ್‌ ಹಾಗೂ ಕಾಸ್ಟಿಕ್‌ ಸೋಡಾ ಲಿಕ್ವಿಡ್‌ ಇಲ್ಲಿನ ಬಂದರಿಗೆ ಆಮದುಗೊಂಡ ಸರಕುಗಳು. ಕಾಕಂಬಿ (ಮೊಲಸಿಸ್) ಮಾತ್ರ ಈ ಬಂದರಿನಿಂದ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌, ಹಾಲೆಂಡ್‌, ನೆದರ್‌ಲೆಂಡ್‌ ರಾಷ್ಟ್ರಗಳಿಗೆ ರಫ್ತಾಗಿದೆ.

ಬಂದರು ಸಮೀಪದಲ್ಲೇ ಇರುವ ಸೀಬರ್ಡ್‌ ನೌಕಾನೆಲೆಯು ವಿಮಾನ ವಾಹಕ ಐಎನ್‌ಎಸ್‌ ವಿಕ್ರಮಾದಿತ್ಯ ಸೇರಿದಂತೆ ಹಲವು ಯುದ್ಧನೌಕೆಗಳ ತಂಗುದಾಣ. ಇವುಗಳಿಗೆ ಪ್ರಮುಖವಾಗಿ ಬೇಕಾಗುವ ಡೀಸೆಲ್‌ ಗುಜರಾತಿನ ಕಾಡ್ಲದಿಂದ ಇಲ್ಲಿಗೆ ಬಂದು, ಆನಂತರ ನೌಕಾನೆಲೆಗೆ ರವಾನೆಯಾಗುತ್ತದೆ.

ಹೂಳು ತೆಗೆಯಲು ₹ 33 ಕೋಟಿ: ಬಂದರು ಜಟ್ಟಿಯಲ್ಲಿ ಹೂಳು ತುಂಬಿದ್ದರಿಂದ ಇಲ್ಲಿಗೆ ದೊಡ್ಡ ಹಡಗುಗಳಿಗೆ ಬರಲು ಕಷ್ಟವಾಗುತ್ತಿದೆ. ಸದ್ಯ 5.5 ಮೀಟರ್‌ ಆಳದ ಜಟ್ಟಿಯ ಹೂಳು ತೆಗೆದು 8.5 ಮೀಟರ್‌ ಆಳ ಮಾಡಬೇಕಿದೆ. ಇದಕ್ಕಾಗಿ ₹ 33 ಕೋಟಿ ವೆಚ್ಚದ ಯೋಜನೆ ಸಿದ್ಧವಾಗಿದ್ದು, ಟೆಂಡರ್‌ ಪ್ರಕ್ರಿಯೆ ಕೂಡ ಮುಗಿದಿದೆ. ಮಳೆಗಾಲ ಮುಗಿಯುತ್ತಿದ್ದಂತೆ ಈ ಕಾಮಗಾರಿ ಆರಂಭವಾಗಲಿದೆ ಎಂದು ಸುರೇಶ್‌ ಶೆಟ್ಟಿ ಮಾಹಿತಿ ನೀಡಿದರು.

ಅಲೆ ತಡೆಗೋಡೆ ನಿರ್ಮಾಣ: ಬಂದರು ಚಟುವಟಿಕೆಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಅಲೆ ತಡೆಗೋಡೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಈ ಬಾರಿ ಬಜೆಟ್‌ನಲ್ಲಿ ₹ 125 ಕೋಟಿ ಘೋಷಿಸಿದೆ. ಇಲ್ಲಿನ ಬಾವುಟ ಕಟ್ಟೆಯಿಂದ 1 ಕಿ.ಮೀ. ಉದ್ದದ ತಡೆಗೋಡೆ ನಿರ್ಮಾಣ ಆಗಲಿದ್ದು, ಇದು 2ನೇ ಹಂತದ ಬಂದರು ಅಭಿವೃದ್ಧಿಗೆ ಪೂರಕವಾಗಲಿದೆ ಎನ್ನಲಾಗಿದೆ.

‘ಕೇಂದ್ರ ಸರ್ಕಾರದ ಆರ್ಥಿಕ ಮತ್ತು ತಾಂತ್ರಿಕ ನೆರವಿನಡಿ ₹ 1.25 ಕೋಟಿ ಮೌಲ್ಯದ ತೈಲ ಮಾಲಿನ್ಯ ನಿಯಂತ್ರಿಸುವ ಉಪಕರಣಗಳು ಈ ಬಂದರಿಗೆ ದೊರೆತಿವೆ. ಅಲ್ಲದೇ ಹಡಗುಗಳ ಚಲನವಲನದ ನಿಗಾ ವಹಿಸಲು ಹಡಗು ಸಂಚಾರ ನಿರ್ವಹಣಾ ವ್ಯವಸ್ಥೆಗೆ (ವಿಟಿಎಂಎಸ್‌) ಕೇಂದ್ರ ಸರ್ಕಾರ ₹ 11.08 ಕೋಟಿ ಅನುದಾನ ನೀಡಿದ್ದು,

Post has attachment
Wait while more posts are being loaded