Profile cover photo
Profile photo
Basavaraj Handi
73 followers -
Bangalore
Bangalore

73 followers
About
Basavaraj's posts

Post has attachment

ಸ್ವಾಮಿಗಳಲ್ಲ ಇವರು.
----------------------
ಸ್ವಾಮಿಗಳಲ್ಲ ಇವರು.
ಕೆಚ್ಚಲಿನ ಉಣ್ಣೆಗಳು .
ರಕ್ತ ಹೀರುವ ದ್ವಾಮಿಗಳು .
ಹಾಕುವರು ವೇಷಕ್ಕೆ
ಬಣ್ಣದ ಕಾವಿ.
ಕೈಯಲ್ಲಿ ಬೆತ್ತ
ಬಗಲಿಗೆ ಜೋಳಿಗೆ .
ಧನ ಕನಕ ಬೇಡುವ
ಜಂಗಮರ ಹೋಳಿಗೆ.
ಭಕ್ತರ ಮೌಢ್ಯತೆ  
ಅಂಬಾರಿ ಮೆರವಣಿಗೆ.
ಪ್ರವಚನದ ಅಬ್ಬರವು.
ಸಂತೆ ಜಾತ್ರೆಯ ಮಾತು.
ಮಠಗಳಲ್ಲವು ವ್ಯಾಪಾರಿ ಕೇಂದ್ರವು.
ಧರ್ಮಶಿಕ್ಷಣದ  ಮಾರು ಕಟ್ಟೆ..
ಹಸಿದ ಹೊಟ್ಟೆಗೆ ,
ಗಂಜಿ ಹಿಟ್ಟಿಲ್ಲದ ಘೋರು
ಅಕ್ಕ ಮಾತೆ ಸ್ವಾಮಿಗಳ
ಜಾತ್ರೆಗಳು ಜೋರು.
ಅಪ್ಪ ಬಸವನ ಮಾತು
ಮರೆತಿಹರು ಬಾಳಿಗೆ.
ಕಲ್ಯಾಣ ಸಿಗುವುದೇ ?
ನಮಗೆಂದು ನಾಳಿಗೆ.
--------------------------
ಡಾ.ಶಶಿಕಾಂತ.ಪಟ್ಟಣ.ಪೂನಾ

(ಕವನವು ಇಷ್ಟವಾದರೆ ನಿಮ್ಮ ಸ್ನೇಹಿತರಿಗೆ ಆಪ್ತರಿಗೆ ಕಳುಹಿಸಿ. ಆದರೆ ಕವನ ಕದ್ದು ಬರೆದವರ ಹೆಸರು ತೆಗೆದು ತಮ್ಮ ಹೆಸರು ಹಾಕುವ ಅಥವಾ ಬರೆದ ಕವನವನ್ನು ಸ್ವರ ಹಾಕಿ ಹಾಡಿ ಬರೆದವರ ಹೆಸರು ಹೇಳುವ ಸೌಜನ್ಯವನ್ನು ಮರೆಯಬಾರದು. ಕವನ ಓದಿ ಆನಂದಿಸಿ ಆದರೆ ಕಳುವು ಮಾಡಬೇಡಿರಿ -ಕಳಬೇಡ ಕೊಲಬೇಡ  )

Post has attachment
Photo

ಡಾ .ಕಲ್ಬುರ್ಗಿ ಅವರ ಬಲಿದಾನ ಮರೆತ ಕನ್ನಡಿಗರು.
-----------------------------------------------------
ಅಂದು ಆಗಸ್ಟ್ 30 ಬೆಳಗಿನ 8.30 ಸಿಡಿಲು ಬಡೆದ ಸುದ್ಧಿ .ಡಾ ಎಂ ಎಂ ಕಲ್ಬುರ್ಗಿಯವರ ಹತ್ಯೆ . ಟಿವಿ ಮಾಧ್ಯಮದಲ್ಲಿ ದಿನವಿಡಿ ಚರ್ಚೆ ಗೊಂದಲ ಆತಂಕಗಳು
ದೊಡ್ಡ ಸ್ವಾಮಿಗಳ ಸಂದರ್ಶನ ರಾಜ ಕಾರಣಿಗಳ ಸಾಹಿತಿಗಳ ಪ್ರತಿಭಟನೆ ನಡೆದವು . ವಾರ ತಿಂಗಳು ಇಂತಹ ಪ್ರದರ್ಶನ ನಡೆದವು.
ಡಾ ಎಂ ಎಂ ಕಲ್ಬುರ್ಗಿ ಅವರ ಹತ್ಯೆ ಮೌಢ್ಯ ಕಂದಾಚಾರಣೆ ವಿರುದ್ಧ ಅವರ ನಿರಂತರ ಹೋರಾಟ .ಮೂಢ ನಂಬಿಕೆ ಮತ್ತು ಕಂದಾಚಾರಣೆ ನಿಷೇಧ ಕಾಯಿದೆಗೆ ಅವರ ಆಗ್ರಹ ಇಂದು ಮರೆತು ಹೋಯಿತೇನೋ ಎನ್ನುವಷ್ಟು ನಾವು ಮೌನವಾಗಿದ್ದೇವೆ.
ಅಲ್ಲದೆ ಲಿಂಗಾಯತ ಒಂದು ಹಿಂದುಯೇತರ ವೈದಿಕವಲ್ಲದ ಸ್ವತಂತ್ರ ಧರ್ಮ ಎಂದು ಪ್ರತಿಪಾಸಿದ ಕನ್ನಡದ ಮೊಟ್ಟ ಮೊದಲೆನೆಯ ಮತ್ತು ಕೊನೆಯ ಸಂಶೋಧಕ ಸಾಹಿತಿ ಚಿಂತಕ ಡಾ ಎಂ ಎಂ ಕಲ್ಬುರ್ಗಿ ಅವರು.
ಡಾ ಕಲ್ಬುರ್ಗಿ ಅವರಿಗೆ ಅವರೆ ಸಾಟಿ ಎನ್ನುವಷ್ಟು ಅನೇಕ ವಿಷಯಗಳನ್ನು ಕನ್ನಡಿಗರಿಗೆ ಬಿಟ್ಟು ಹೋದ ಮೇರು ವ್ಯಕ್ತಿ.ಇಂದು ಅವರು ನಮ್ಮ ಮಧ್ಯೆ ಇಲ್ಲ.
ಅವರ ಹತ್ಯೆ ಜಾಡು ಹಿಡಿಯುವಲ್ಲಿ ಕರ್ನಾಟಕ ಸರಕಾರ ವಿಫಲವಾಗಿದೆ.
ಮೂಢ ನಂಬಿಕೆ ಮತ್ತು ಕಂದಾಚಾರಣೆ ನಿಷೇಧ ಕಾಯಿದೆಗೆ ಸರಕಾರ ಬದ್ಧ ಅಂತಾ ಹೇಳಿ ಜನರಿಗೆ ದಿಕ್ಕು ತಪ್ಪಿಸಿದ ಸರಕಾರ ಆ ದಿಶೆಯಲ್ಲಿ ಎಳ್ಳಷ್ಟೂ ಕೆಲಸ ಮಾಡಿಲ್ಲ ಮತ್ತು ಆಸ್ಥೆ ವಹಿಸಿಲ್ಲ.
20ಆಗಸ್ಟ 2013 ರಂದು ಮಹಾರಾಷ್ಟ್ರದಲ್ಲಿ ಚಿಂತಕ ಡಾ ನರೇಂದ್ರ ದಾಭೋಲಕರ್ ಅವರ ಹತ್ಯೆ ನಡೆದಿತ್ತು .ಸನಾತನ ಸಂಸ್ಥೆಯ ಸದಸ್ಯ ಡಾ ವೀರೇಂದ್ರ ಸಿಂಹ ತಾವಡೆ ಇದರ ಮುಖ್ಯ ಪ್ರಮುಖ ಆರೋಪಿ ,ಅವನನ್ನು ಈಗ ಸಿ ಬಿ ಐ ಅವರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. 15 ಫೆಬ್ರುವರಿ ,2015 ರಂದು ಇನ್ನೊಬ್ಬ ಕಮ್ಯುನಿಸ್ಟ್ ನಾಯಕ ಮೇಧಾವಿ ಚಿಂತಕ ಗೋವಿಂದ ಪನ್ಸಾರೆ ಅವರ ಹತ್ಯೆ ನಡೆದಿತ್ತು. ಅದರಲ್ಲೂ ಹಿಂದೂ ಜಾಗೃತಿ ಮತ್ತು ಸನಾತನ ಸಂಸ್ಥೆಯ ಕೈವಾಡ ಇರುವ ಸ್ಪಷ್ಟ ಲಕ್ಷಣಗಳು ಕಂಡು ಬಂದಿವೆ . ಮಹಾರಾಷ್ಟ್ರ ಸರಕಾರ ಸಂಪೂರ್ಣ ಮಾಹಿತಿ ಕಲೆ ಹಾಕಿ ,ಈ ಜಾಲವನ್ನು ಬೇಧಿಸಿ ಸಿ ಬಿ ಐ ಸಂಸ್ಥೆಗೆ ಸಹಾಯ ಮಾಡುವಲ್ಲಿ ನಿರತವಾಗಿದೆ.
ಅದೇ ರೀತಿಯಲ್ಲಿ ಹತ್ಯೆಯಾದ ಡಾ ಎಂ ಎಂ ಕಲ್ಬುರ್ಗಿ ಅವರ ವಿಚಾರಣೆ ಸಿ ಐ ಡಿ ಗೆ ಒಪ್ಪಿಸಿ ಕರ್ನಾಟಕ ಸರಕಾರ ಕಣ್ಣು ಮುಚ್ಚಿ ಕುಳಿತು ಕೊಳ್ಳಬಾರದು.
ಆದಷ್ಟು ಬೇಗ ತನಿಖೆ ಚುರುಕುಗೊಳಿಸಿ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಇನ್ನೂ ಭದ್ರತೆ ಇದೆ ಎಂದು ಕೇಂದ್ರ ಮತ್ತು ಆಯಾ ರಾಜ್ಯ ಸರಕಾರಗಳು ಸಾಬೀತು ಪಡಿಸಬೇಕಿವೆ.
ಡಾ .ಎಂ ಎಂ ಕಲ್ಬುರ್ಗಿ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಕೊಟ್ಟ ಕೊಡುಗೆ ಅಪಾರ ಅಂಥ ಧೀಮಂತ ಸಾಹಿತಿಯ ಕಗ್ಗೊಲೆಯಾಗಿ ಹತ್ತು ತಿಂಗಳು ಕಳೆದರೂ ಕೊಲೆಯ ಆರೋಪಿಯ ಪತ್ತೆಯಿಲ್ಲ. ಕಾರಣ ಈ ಕೂಡಲೇ ಕರ್ನಾಟಕ ಘನ ಸರಕಾರವು ಈ ತನಿಖೆಯ ಜವಾಬ್ದಾರಿಯನ್ನು ಸಿಬಿಐ ಯಾರಿಗೆ ವಹಿಸಿದರೆ ಖಂಡಿತ ಸಧ್ಯ ಸಿ ಬಿ ಐ ನಡೆಸುವ ತನಿಖೆ ಚುರುಕು ಗೊಂಡು ಆರೋಪಿ ಸಿಗುವ ಸಾಧ್ಯತೆಯಿದೆ. ಇಲ್ಲದಿದ್ದರೆ ಡಾ ಎಂ ಎಂ ಕಲ್ಬುರ್ಗಿ ಅವರ ಬಲಿದಾನ ತ್ಯಾಗ ವ್ಯರ್ಥವಾಗುತ್ತದೆ. ಕರ್ನಾಟಕ ಸರಕಾರವು ಮೂಢ ನಂಬಿಕೆ ಮತ್ತು ಕಂಧಾಚರಣೆ ನಿಷೇಧ ಕಾಯಿಧೆಯನ್ನು ಡಾ ಎಂ ಎಂ ಕಲ್ಬುರ್ಗಿ ಅವರ ಪ್ರಥಮ ಪುಣ್ಯ ಸ್ಮರಣೆ ಒಳಗಾಗಿ ಜಾರಿಗೆ ಗೊಳಿಸಿ ಡಾ ಎಂ ಎಂ ಕಲ್ಬುರ್ಗಿ ಅವರಿಗೆ ಶೃದ್ಧಾಂಜಲಿ ಸಲ್ಲಿಸಲಿ.
ಈ ದಿಶೆಯಲ್ಲಿ ನಾಡಿನ ಚಿಂತಕರು ರಾಜಕಾರಣಿಗಳು ,ಸಾಹಿತಿಗಳು ಸ್ವಾಮಿಗಳು ಗಂಭೀರವಾಗಿ ಚರ್ಚಿಸಿ ಚಿಂತನೆ ನಡೆಸಿ ರಾಜ್ಯ ಸರಕಾರವನ್ನು ಮತ್ತು ಕೇಂದ್ರ ಸರಕಾರವನ್ನು ಎಚ್ಚರಿಸುವಲ್ಲಿ ಮುಂದಾಗಲಿ ಎಂದು ಆಶಿಸುತ್ತೇವೆ.
--------------------------------------------------------------
ಡಾ .ಶಶಿಕಾಂತ.ಪಟ್ಟಣ.ಪೂನಾ

Post has attachment
ಅಥಣಿಯಲ್ಲಿ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳವರ ಆಧ್ಯಾತ್ಮಿಕ ಪ್ರವಚನ ಪ್ರಾರಂಭ ದಿನಾಂಕ 3 12 2015ರಿಂದ ಬೆಳ್ಳಿಗ್ಗೆ 6:30~7:30ರವರೆಗೆ
ಸ್ಥಳ :ವೀರಶೈವ ವಿದ್ಯಾಪೀಠ,ಅಥಣಿನ ಪಟ್ಟನದಲ್ಲಿ
ಸರ್ವರಿಗೂ ಹಾರ್ದಿಕ ಸುಸ್ವಾಗತ,
Photo

Post has attachment
ಅಥಣಿಯಲ್ಲಿ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳವರ ಆಧ್ಯಾತ್ಮಿಕ ಪ್ರವಚನ ಪ್ರಾರಂಭ ದಿನಾಂಕ 3 12 2015ರಿಂದ ಬೆಳ್ಳಿಗ್ಗೆ 6:30~7:30ರವರೆಗೆ
ಸ್ಥಳ :ವೀರಶೈವ ವಿದ್ಯಾಪೀಠ,ಅಥಣಿನ ಪಟ್ಟನದಲ್ಲಿ
ಸರ್ವರಿಗೂ ಹಾರ್ದಿಕ ಸುಸ್ವಾಗತ,
Photo

No post on this community. Please contribute more on Lingayat community. 

This group is inactive. Please contribute more on Lingayat

Post has attachment
Photo

Post has attachment
Android Lollipop update for Moto E taking more time.
347 votes
-
votes visible to Public
88%
Yes
12%
No
Wait while more posts are being loaded