Profile cover photo
Profile photo
Chamaraj Savadi
375 followers -
ಪತ್ರಕರ್ತ
ಪತ್ರಕರ್ತ

375 followers
About
Posts

Post has attachment
Chamaraj Savadi commented on a post on Blogger.
ಆರೋಗ್ಯ ಇಲಾಖೆ ಸುಳ್ಳು ಹೇಳುತ್ತಿದೆ. ಇದು ಕಣ್ಣೊರೆಸುವ ತಂತ್ರ. ತಾವೇ ಸೃಷ್ಟಿಸಿಕೊಂಡಿರುವ ಅಂಕಿಅಂಶಗಳನ್ನು ನೀಡುವ ಮೂಲಕ ದಾರಿ ತಪ್ಪಿಸುವ ಪ್ರಯತ್ನ ನಡೆಸಿದೆ. ಹಾಗಾದರೆ, ಇವೆಲ್ಲ ಅಂಶಗಳು, ವರದಿಗಳು ಸುಳ್ಳಾ?

2013ರಲ್ಲಿ ಕನ್ನಡಮ್ಮ ದಿನಪತ್ರಿಕೆಯಲ್ಲಿ ಬಂದ ಈ ವರದಿಯೂ ವಾಸ್ತವ ಚಿತ್ರಣ ನೀಡುತ್ತದೆ. http://kannadamma.net/?p=66517

http://kannadanet.blogspot.in/2013/10/blog-post_26.html ಈ ತನಿಖೆಯ ಗತಿ ಏನಾಯ್ತು?

http://vijaykarnataka.indiatimes.com/district/koppala/-/articleshow/56717417.cms ಗಂಗಾಧರ ಈ ಕುರಿತು ಜನವರಿಯಲ್ಲೇ ಬರೆದಿದ್ದಾರೆ.

http://koppalvarthe.blogspot.in/2016/11/blog-post_70.html ಇದಕ್ಕೆ ಏನು ಕ್ರಮ ಕೈಗೊಂಡರು ಎಂಬುದಕ್ಕೆ ವಿವರಣೆ ನೀಡಿದರೂ ಸಾಕು.

http://ec2-54-69-9-161.us-west-2.compute.amazonaws.com/kannada/news/32039/ಕೊಪ್ಪಳದಲ್ಲಿ-ಶಿಶು-ತಾಯಿ-ಮರಣ-ಪ್ರಮಾಣ-ಹೆಚ್ಚು

Post has attachment
Chamaraj Savadi commented on a post on Blogger.
ವಾರ್ತಾ ಇಲಾಖೆ ಎರಡನೇ ಸಲ ಈ ತಪ್ಪು ಮಾಡಬಾರದಿತ್ತು
ಸುದ್ದಿ ತಿರುಚುವುದೆಂದರೆ ಸುಳ್ಳು ಹೇಳಿದಂತೆ.
ಮಾಹಿತಿ ಹಕ್ಕಿನ ವಿವರಗಳಿಗೆ ಸಂಬಂಧಿಸಿದಂತೆ ಕೊಪ್ಪಳ ವಾರ್ತಾ ಇಲಾಖೆ ಗುರುವಾರ ಮತ್ತೊಮ್ಮೆ ಅಂತಹ ತಿರುಚಿದ ವರದಿಯನ್ನು ಪತ್ರಕರ್ತರಿಗೆ ನೀಡಿದೆ. ಸರಕಾರಿ ನೌಕರರಿಗೆ ಸಂಬಂಧಿಸಿದಂತೆ ಹಿಂದೊಮ್ಮೆ ಇದೇ ರೀತಿ ತಿರುಚಿದ ವರದಿ ಬಂದಿತ್ತು. ಆಗ ನಾನು ಸುದ್ದಿಯನ್ನು, ಮಾಹಿತಿ ಹಕ್ಕಿನಲ್ಲಿರುವ ನಿಯಮಗಳಿಗೆ ಅನುಸಾರವಾಗಿ ಸರಿಪಡಿಸಿಕೊಂಡು ಬರೆದಿದ್ದೆ. ಗುರುವಾರ ಮತ್ತೊಮ್ಮೆ ಆ ರೀತಿ ಬರೆಯಬೇಕಾದ ಅನಿವಾರ್ಯತೆ ಬಂದಿದ್ದರಿಂದ, ಬಹಿರಂಗವಾಗಿ ಈ ವಿಷಯವನ್ನು ಇಲ್ಲಿ ಹಾಕುತ್ತಿದ್ದೇನೆ.
ಸರಕಾರಿ ನೌಕರರ ಕುರಿತಾಗಿ ಮಾಹಿತಿ ಕೇಳುವುದಕ್ಕೆ ಸಂಬಂಧಿಸಿದಂತೆ, ಮಾಹಿತಿ ಹಕ್ಕು ಕಾಯಿದೆ ಏನು ಹೇಳುತ್ತದೆ ಎಂಬುದನ್ನು ಅಂತರ್ಜಾಲದಲ್ಲೇ ಇರುವ ಪ್ರಕರಣವೊಂದನ್ನು ಉದಾಹರಣೆಯಾಗಿ ನೀಡಬಹುದು.
RTI Foundation of India, 12 Jun, 2013
Does service book of government employees fall under RTI?
An application was filed under the Right to Information (RTI) Act seeking to know about the actions taken against a ticket examiner (TE) by the railways on a complaint earlier filed by a friend of the applicant. The application also sought a copy of the service book and confidential report of the concerned TE.
The application was rejected by the public information officer at the office of the divisional railway manager, Western Railways, citing Section 8 (1) (J) of the RTI Act.
The applicant then approached the central information commission (CIC) contending that as the TE was in public service, the PIO’s denial of providing his service book and confidential report was against the spirit of the RTI Act. The TE, during the hearing, said that sharing of his service book might endanger his and his family’s safety.
But the CIC held that the demanded information related to the service of the public servants was expected to be already in public domain under Section 4(1)(b) of the RTI Act. The CIC has ordered the railways to make available the copy of the service book of the employee to the appellant within four weeks. However, the railways need not disclose the confidential report of the employee, the CIC order stated.
A service book contains two type of information, one which is personal to the government employees and the other which relates to the service matters like the date of joining, increments, transfers, leaves availed etc. It is the latter which is liable for disclosure.
(http://www.rtifoundationofindia.com/does-service-book-gover…)
ಸರಕಾರಿ ನೌಕರರ ಯಾವ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯಿದೆಯಡಿ ನೀಡಬಹುದು ಎಂಬುದನ್ನು ಗುರುವಾರ ಕೊಪ್ಪಳಕ್ಕೆ ಆಗಮಿಸಿದ್ದ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತ ಕೆ.ಎ. ಚಂದ್ರೇಗೌಡ ಜಿಲ್ಲೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಅಂದರೆ, ಮಾಹಿತಿ ಹಕ್ಕಿನಡಿ ಸರಕಾರಿ ನೌಕರರ ಸಾರ್ವಜನಿಕ ವಿವರಗಳನ್ನು ಕೇಳಬಹುದು ಎಂಬುದು ಅವರ ಮಾತಿನ ಅರ್ಥ.
ಆದರೆ, ಇದೇ ವಿಷಯವನ್ನು ಕೊಪ್ಪಳ ಜಿಲ್ಲಾ ವಾರ್ತಾ ಇಲಾಖೆ ತಿರುಚಿ ಬರೆದು ಪತ್ರಕರ್ತರಿಗೆ ಕಳಿಸಿದೆ. ಇಲ್ಲಿ ತಿರುಚಿ ಎಂದರೆ, ಮಾಹಿತಿ ಹಕ್ಕು ಆಯೋಗದ ಆಯುಕ್ತ ಚಂದ್ರೇಗೌಡ ಹೇಳಿದ ಮುಖ್ಯ ವಿಷಯವನ್ನು ಗೌಣವಾಗಿಸಿ, ಗೌಣ ವಿಷಯವನ್ನು ಮುಖ್ಯವಾಗಿಸಿದ್ದಾರೆ. (ಸ್ಕ್ರೀನ್ ಶಾಟ್ ನೋಡಿ)
ಕೊಪ್ಪಳ ಜಿಲ್ಲಾ ವಾರ್ತಾ ಇಲಾಖೆ ಕಳಿಸಿದ ಪ್ರೆಸ್ ನೋಟ್ ಹೀಗಿದೆ:
ಮಾಹಿತಿ ಹಕ್ಕು ಕಾಯ್ದೆಯಡಿ ನೌಕರರ ವಯಕ್ತಿಕ ಮಾಹಿತಿ ನೀಡುವಂತಿಲ್ಲ- ಕೆ.ಎಂ. ಚಂದ್ರೇಗೌಡ
ಕೊಪ್ಪಳ ಮಾ. 23 (ಕರ್ನಾಟಕ ವಾರ್ತೆ): ಮಾಹಿತಿ ಹಕ್ಕು ಕಾಯ್ದೆಯಡಿ ಯಾವುದೇ ಸರ್ಕಾರಿ ಅಧಿಕಾರಿ, ನೌಕರರ ವಯಕ್ತಿಕ ಮಾಹಿತಿಯನ್ನು ಅರ್ಜಿದಾರರಿಗೆ ಕೊಡುವಂತಿಲ್ಲ ಎಂದು ಕರ್ನಾಟಕ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತ ಕೆ.ಎಂ. ಚಂದ್ರೇಗೌಡ ಅವರು ಹೇಳಿದರು.
ಕರ್ನಾಟಕ ಮಾಹಿತಿ ಆಯೋಗದ ವತಿಯಿಂದ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗಾಗಿ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರದಂದು ಹಮ್ಮಿಕೊಳ್ಳಲಾದ ಮಾಹಿತಿ ಹಕ್ಕು ಕಾಯ್ದೆ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸರ್ಕಾರಿ ಕಚೇರಿಗಳ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಉದ್ದೇಶಕ್ಕಾಗಿಯೇ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದಿದೆ. ಆದರೆ ಸರ್ಕಾರಿ ನೌಕರರ ವಯಕ್ತಿಕ ಮಾಹಿತಿಯನ್ನು ಕೇಳುವಂತಹ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಕೆಲವು ಇಲಾಖೆಗಳು ಮಾಹಿತಿಯನ್ನು ಕೂಡ ನೀಡುತ್ತಿವೆ. ಆದರೆ ಇದು ಸರಿಯಲ್ಲ. ಮಾಹಿತಿ ಹಕ್ಕು ಕಾಯ್ದೆಯಡಿ ನಿಯಮ 8(1)ಜೆ ಅನ್ವಯ ಸರ್ಕಾರಿ ನೌಕರರ ಯಾವುದೇ ವಯಕ್ತಿಕ ಮಾಹಿತಿಯನ್ನು ನೀಡುವಂತಿಲ್ಲ. ಚರ, ಸ್ಥಿರಾಸ್ತಿ ವಿವರ, ಬಯೋಡೇಟಾ, ವಯಕ್ತಿಕ ದಾಖಲೆಗಳು, ನೇಮಕಾತಿ ದಾಖಲೆಗಳು, ಸೇವಾಪುಸ್ತಕ, ಅಂಕಪಟ್ಟಿ, ವಿದ್ಯಾರ್ಹತೆ ಕುರಿತ ದಾಖಲೆಗಳು, ಜಾತಿ ಪ್ರಮಾಣಪತ್ರ, ಪಾಸ್ಪೋರ್ಟ್, ಭವಿಷ್ಯನಿಧಿ ವಿವರ, ಸರ್ಕಾರಿ ವಸತಿ ಗೃಹ ಹೊರತುಪಡಿಸಿ ಖಾಸಗಿ ಮನೆಯ ವಿಳಾಸ ಸೇರಿದಂತೆ ವಯಕ್ತಿಕ ಮಾಹಿತಿಯನ್ನು ನೀಡುವಂತಿಲ್ಲ...
ಹೀಗೆ ಸಾಗುತ್ತದೆ ವಾರ್ತಾ ಇಲಾಖೆಯ ಸುದ್ದಿ.
ಆಯುಕ್ತ ಚಂದ್ರೇಗೌಡರು ಹೇಳಿದ್ದೇನೆಂದರೆ, ಸರಕಾರಿ ನೌಕರರ ಖಾಸಗಿ ವಿಷಯಗಳ ಮಾಹಿತಿ ನೀಡಬೇಕಿಲ್ಲ. ಖಾಸಗಿ ಎಂದರೆ, ಅವರ ವೈಯಕ್ತಿಕ ಮನೆ ವಿಳಾಸ, ಸಾರ್ವಜನಿಕ ಉದ್ದೇಶ ಹೊಂದಿಲ್ಲದ ವಿವರಗಳನ್ನು ನೀಡಬಾರದು ಎಂಬುದಷ್ಟೇ.
ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್ 8(1) (ಜೆ) ಕೂಡಾ ಇದನ್ನೇ ಸ್ಪಷ್ಟವಾಗಿ ಹೇಳುತ್ತದೆ. ಉಳಿದಂತೆ, ಸರಕಾರಿ ನೌಕರ ಸಾರ್ವಜನಿಕ ಕೆಲಸವನ್ನೇ ಮಾಡುತ್ತಾನೆ. ಆತನ ವಿದ್ಯಾರ್ಹತೆ, ನೇಮಕಾತಿ, ಸಂಬಳ, ಸಾಧನೆ, ಆಸ್ತಿ ಮುಂತಾದ ವಿವರಗಳನ್ನು ಪಡೆಯುವ ಹಕ್ಕು ಸಾರ್ವಜನಿಕರಿಗಿದೆ. ತನ್ನ ಕೆಲಸದಲ್ಲಿ ಆತ ಪಡೆದುಕೊಂಡಿರುವ ಬಡ್ತಿ, ಹೊತ್ತಿರುವ ಆರೋಪಗಳು, ಎದುರಿಸಿರುವ ತನಿಖೆಗಳು, ಪಡೆದ ಶಿಕ್ಷೆಯಂತಹ ವಿವರಗಳು ಸಾರ್ವಜನಿಕವೇ. ಈ ಕುರಿತ ಮಾಹಿತಿಯನ್ನು ನಿರಾಕರಿಸುವಂತಿಲ್ಲ.
ಕೊಪ್ಪಳ ವಾರ್ತಾ ಇಲಾಖೆ ಎರಡನೇ ಸಲ ಮಾಹಿತಿ ಹಕ್ಕು ಕಾಯಿದೆಯ ಮೂಲ ಆಶಯವನ್ನೇ ತಿರುಚಿ ಬರೆದಿದೆ. ಬಹುತೇಕ ಪತ್ರಕರ್ತರು ವಾರ್ತಾ ಇಲಾಖೆಯ ಸುದ್ದಿಗಳನ್ನು ಹೆಚ್ಚು ಪರಾಂಬರಿಸದೇ ಹಾಕುವುದು ಸಾಮಾನ್ಯ. ತಿರುಚಿದ ವರದಿ ಸುಳ್ಳು ಹೇಳುವುದಕ್ಕೆ ಸಮ. ಅದು ಮರುಕಳಿಸದಿರಲಿ ಎಂಬುದಷ್ಟೇ ನನ್ನ ಈ ಪೋಸ್ಟ್ನ ಉದ್ದೇಶ.
- ಚಾಮರಾಜ ಸವಡಿ
(ಈ ಕುರಿತ ಚರ್ಚೆಯನ್ನು ಇಲ್ಲಿ ನೋಡಬಹುದು: https://www.facebook.com/chamaraj.savadi/posts/10208764813662294

Post has attachment
ಪತ್ರಿಕೆಯೊಂದರ ಹುಟ್ಟಿನ ಹಿಂದೆ ಹಲವಾರು ಕಾರಣಗಳೂ ಹಾಗೂ ಸಾಕಷ್ಟು ವಿನಾಕಾರಣಗಳೂ ಇರುತ್ತವೆ. ಕನಸುಗಳಿರುತ್ತವೆ. ಕನವರಿಕೆಗಳಿರುತ್ತವೆ. ನೋವಿರುತ್ತದೆ. ನಲಿವಿನ ಹಂಬಲವಿರುತ್ತದೆ. ಪ್ರತಿಯೊಂದರ ಹುಟ್ಟಿನ ಹಿಂದಿರುವ ಸಿಹಿ-ಕಹಿ, ನೋವು-ನಲಿವುಗಳೇ ಪತ್ರಿಕೆಯೊಂದರ ಹುಟ್ಟಿನ ಹಿಂದೆಯೂ ಉಂಟು. ಎಲ್ಲಿಯೋ ಹುಟ್ಟಿರಬಹುದಾದ ಕನಸೊಂದು, ಸಮಾನ ಮನಸ್ಸುಗಳ ನಡುವೆ ವಿಕಸವಾಗುತ್ತ, ಅಂತಿಮ ರೂಪುಗೊಂಡು ಕಣ್ಮುಂದೆ ನಿಂತ ಘಳಿಕೆಯೊಂದು ಕೊಡುವ ಸುಖವೇ ಬೇರೆ.

Post has attachment

Post has attachment
Wait while more posts are being loaded