Profile cover photo
Profile photo
jagadish koppa
ಹಳ್ಳಿ ಹೈದನ ಚರಿತ್ರೆ.
ಹಳ್ಳಿ ಹೈದನ ಚರಿತ್ರೆ.
About
Posts

Post has attachment
1992 ರಲ್ಲಿ ಭಾರತದಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಡೌನ್ ಟು ಅರ್ಥ್ ಎಂಬ ಇಂಗ್ಲೀಷ್ ಪಾಕ್ಷಿಕ ಪತ್ರಿಕೆಯನ್ನು ಆರಂಭಿಸಿದ ಅನಿಲ್ ಅಗರ್ವಾಲ್ ರವರು ( ಇವರು ಪಶ್ಚಿಮ ಬಂಗಾಳದ ಖರಗ್ ಪುರದ ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ನಮ್ಮ ಕರ್ನಾಟಕದ ಪರಿಸರ ತಜ್ಞ ನಾಗೇಶ್ ಹೆಗ್ಡೆಯವರ ಸಹಪಾಠಿಯಾಗಿದ್ದವರು) ಭಾರತದ ಪರಿಸರ ಕುರಿತಂತೆ ಇಲ್ಲಿನ ನೀರು, ಗಾಳಿ, ಅರಣ್ಯಗಳ ಪರಿಸ್ಥಿತಿ ಕುರಿತಂತೆ ಇಂಡಿಯನ್ ಎನ್ವಿರಾನ್ ಮೆಂಟ್ ರಿಪೋರ್ಟ್ ಎಂಬ ಶೀರ್ಷಿಕೆಯಡಿ ಕೃತಿಗಳನ್ನು ಪ್ರಕಟಿಸಲು ಆರಂಭಿಸಿದರು. ( ಶಿವರಾಮಕಾರಂತರು ಭಾರತದ ಪರಿಸರದ ಪರಿಸ್ಥಿತಿ ಹೆಸರಿನಲ್ಲಿ ಮೊದಲ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ) ಆನಂತರ ಭಾರತದಲ್ಲಿ ಬತ್ತಿ ಹೋಗುತ್ತಿರುವ ಜಲಸಂಪನ್ಮೂಲಗಳ ಕುರಿತು ಆತಂಕ ವ್ಯಕ್ತಪಡಿಸಿ, ಬದಲಾವಣೆಗೆ ಇದು ಸೂಕ್ತವಾದ ಕಾಲ ಎಂಬ ಘೋಷಣೆಯೊಂದಿಗೆ “ ಡೈಯಿಂಗ್ ವಿಸ್ಡಂ” ಎಂಬ ಅಪರೂಪದ ಭಾರತದ ಜಲಸಂಪನ್ಮೂಲಗಳ ಇತಿಹಾಸ ಮತ್ತು ಅವುಗಳ ರಕ್ಷಣೆ ಕುರಿತಂತೆ ನಮ್ಮ ಪೂರ್ವಿಕರು ಅಳವಡಿಸಿಕೊಂಡಿದ್ದ ದೇಸಿ ಜ್ಞಾನಶಿಸ್ತು ಕುರಿತ ಕೃತಿಯನ್ನು ಪ್ರಕಟಿಸಿದರು. ಭಾರತದ ಮೂಲೆ ಮೂಲೆಯಿಂದ ನೀರಾವರಿ ತಜ್ಞರು, ಜಲತಜ್ಞರು, ಇತಿಹಾಸಕಾರ ಮೂಲಕ ರಾಜಸ್ಥಾನ್, ಗುಜರಾತ್ ನಂತಹ ಮರಳುಗಾಡಿನಲ್ಲಿ ಕಡಿಮೆ ಮಳೆ ಬೀಳುವ ಪ್ರದೇಶಗಳ ಮಾಹಿತಿಯಿಂದ ಹಿಡಿದು, ಅತಿ ಹೆಚ್ಚು ಮಳೆಯಾಗುವ ಈಶಾನ್ಯ ಭಾರತದ ಅಸ್ಸಾಂ, ದಕ್ಷಿಣ ಭಾರತದ ತಮಿಳುನಾಡಿನ ಕಾವೇರಿ ಕಣಿವೆ ಪ್ರದೇಶದ ನೀರಾವರಿ ವ್ಯವಸ್ಥೆ ಹಾಗೂ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಕರ್ನಾಟಕ, ಆಂಧ್ರ ಮತ್ತು ತಮಿಳುನಾಡಿನಲ್ಲಿ ನಿರ್ಮಾಣವಾಗಿರುವ ಕೆರೆ ಕಟ್ಟೆಗಳು, ದೇಗುಲಗಳ ಸಮೀಪವರುವ ಕಲ್ಯಾಣಿಗಳು ಮತ್ತು ಅವುಗಳಲ್ಲಿ ಸಂಗ್ರಹವಾಗುವ ಮಳೆ ನೀರು ಮತ್ತು ಬಳಕೆ ಹೀಗೆ ಅಪರೂಪದ ಭಾರತದ ಜಲ ಸಂರಕ್ಷಣೆಯ ಇತಿಹಾಸವನ್ನು ನಮ್ಮ ಮುಂದೆ ತೆರದಿಟ್ಟು, ಭಾರತದಲ್ಲಿ ನೆಲ, ಜಲ ಮತ್ತು ಪರಿಸರದ ಬಗ್ಗೆ ಪ್ರಜ್ಞೆಯನ್ನು ಹುಟ್ಟುಹಾಕಿದ ಅನಿಲ್ ಅಗರ್ ವಾಲ್ ಕೇವಲ ತಮ್ಮ ನಲವತ್ತೆರೆಡನೆಯ ವಯಸ್ಸಿಗೆ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಅಸು ನೀಗಿದರು.
ಅನಿಲ್ ಅಗರ್ ವಾಲ್ ಅವರು ಈ ಕೃತಿಯನ್ನು ಪ್ರಕಟಿಸಿ ಇಪ್ಪತ್ತಾರು ವರ್ಷಗಳಾದವು. ಕಾಲು ಶತಮಾನ ಕಳೆದು ಹೋದರೂ ಸಹ ಈ ದೇಶವಾಗಲಿ ಅಥವಾ ಇಲ್ಲಿನ ನಾಗರೀಕರಾಗಲಿ ನೀರಿನ ಮಹತ್ವವನ್ನು ಅರಿಯಲಾರದೆ ಹೋದದ್ದು ನಿಜಕ್ಕೂ ದುರಂತವೇ ಸರಿ. ಡೌನ್ ಟು ಅರ್ಥ್ ಪತ್ರಿಕೆಯಲ್ಲಿ ಅವರ ಸಹೋದ್ಯೋಗಿಯಾಗಿದ್ದು ಇದೀಗ ಪತ್ರಿಕೆಯನ್ನು ಮುನ್ನೆಡೆಸುತ್ತಿರುವ ಸುನೀತ ನಾರಾಯಣ್ ಕಳೆದ ವರ್ಷ ಪತ್ರಿಕೆ ಹಾಗೂ ಆ ಕೃತಿಗೆ ಇಪ್ಪತ್ತೈದು ವರ್ಷ ತುಂಬಿದ ಸಂದರ್ಭದಲ್ಲಿ ಭಾರತ ಮಾತ್ರವಲ್ಲದೆ ಆಧುನಿಕ ಜಗತ್ತಿಗೆ ಆವರಿಕೊಂಡಿರುವ ಅಹಂಕಾರದ ಬಗ್ಗೆ ಬರೆಯುತ್ತಾ “ ಇಂದಿನ ಮಾರುಕಟ್ಟೆ ಪ್ರಭುತ್ವದ ಜಗತ್ತು ಹಾಗೂ ಗ್ರಾಹಕ ಸಮಾಜ ನಿಧಾನವಾಗಿ ವಿಲೀನವಾಗತೊಡಗಿವೆ. ಇದರ ಪರಿಣಾಮವಾಗಿ ಇವುಗಳ ಸುತ್ತ ಬಲಿಷ್ಠ ಕೋಟೆಯೊಂದು ನಿರ್ಮಾಣಗೊಳ್ಳುತ್ತಿದ್ದು ಕೊಳ್ಳು ಬಾಕ ಸಂಸ್ಸøತಿಯ ಈ ಜಗತ್ತಿನಲ್ಲಿ ಇಲ್ಲಿನ ಗಾಳಿ, ನೀರು, ಭೂಮಿ ಇವುಗಳ ಮೇಲಿನ ಕಾಳಜಿ ನಿಧಾನವಾಗಿ ಕರಗತೊಡಗಿದೆ. ಜೊತೆಗೆ ಇವುಗಳ ರಕ್ಷಣೆಯ ಕುರಿತು ಹೇಳಬಹುದಾಗ ಕಿವಿಮಾತುಗಳನ್ನು ಕೇಳಿಸಿಕೊಳ್ಳದ ಸ್ಥಿತಿಯಲ್ಲಿ ಈಗಿನ ಜಗತ್ತು ರೂಪುಗೊಳ್ಳುತ್ತಿದೆ” ಎಂದು ದಾಖಲಿಸಿರುವ ಮಾತುಗಳು ಭವಿಷ್ಯದ ಕರಾಳ ಜಗತ್ತಿಗೆ ಬರೆದ ಮುನ್ನಡಿ ಎಂದು ನಾವು ಭಾವಿಸಬಹುದಾಗಿದೆ. ಈಗಾಗಲೇ ಇದರ ಪರಿಣಾಮಗಳನ್ನು ಹಾಗೂ ಜಾಗತಿಕ ಮಟ್ಟದಲ್ಲಿ ಬರಿದಾಗುತ್ತಿರುವ ನೀರಿನ ಸೆಲೆಗಳು, ಕುಡಿಯುವ ನೀರಿಗಾಗಿ ನಗರಗಳಲ್ಲಿ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಉಚಿಟಾಗಿರುವ ಹಾಹಾಕಾರಕ್ಕೆ ನಾವೀಗ ಸಾಕ್ಷಿಯಾಗುತ್ತಿದ್ದೇವೆ
Add a comment...

Post has attachment
ಮಳೆ ಮತ್ತು ಬರದ ನಡುವೆ ಬರಿದಾಗುತ್ತಿರುವ ಬದುಕು
ಮಳೆ ಮತ್ತು ಇಳೆಯ ನಡುವೆ ಅವಿನಾಭಾವ ಸಂಬಂಧವಿದೆ . ಅದೇ ರೀತಿ ಇಳೆಯ ಪುಳಕಕ್ಕೆ ಕಾರಣವಾಗುವ ಮಳೆಗೆ ಜಗತ್ತಿನ ಜೀವರಾಶಿಗಳಿಗೆ ಪುನಶ್ಚೇತನ ನೀಡುವ ಶಕ್ತಿಯಿದೆ . ಇದು ಪ್ರಕೃತಿಯ ವಿಸ್ಮಯದ ಜೊತೆಗೆ   ವೈಭೋಗವೂ ಕೂಡ ಹೌದು . ಇದನ್ನು ಅರಿತಿದ್ದ ನಮ್ಮ ಪೂರ್ವಿಕರಿಗೆ ಮಳೆ ಮತ್ತು ಇಳೆಯ ನಡುವಿನ ಸಂಬಂಧಕ್ಕೆ ಚ್ಯುತಿ ಬಾರದಂತ...
Add a comment...

Post has attachment
ಜಗತ್ತಿನ ಐದು ಖಂಡಗಳ ಹಲವು ರಾಷ್ಟ್ರಗಳಲ್ಲಿ ಹರಡಿಕೊಂಡಿರುವ ಈ ಮಾರ್ಗಗಳ ಕುರಿತು ನೀಡಿರುವ ಇತಿಹಾಸವನ್ನು ಓದಿದಾಗ, ಮಾನವ ತನ್ನ ಇತಿಹಾಸದಲ್ಲಿ ಅಳವಡಿಸಿಕೊಂಡ ಅನ್ವೇಷಣಾ ಮತ್ತು ಸಾಹಸದ ಪ್ರವೃತಿ, ತಾನಿರುವ ನೆಲೆಯಾಚೆ ಇರಬಹುದಾದ ಇನ್ನೊಂದು ಜಗತ್ತಿನ ಕುರಿತು ತಿಳಿಯಲು ಅವನು ತುಳಿದ ಹಾದಿ, ಪ್ರತಿ ಹೆಜ್ಜೆಯಲ್ಲೂ ದಕ್ಕಿಸಿಕೊಂಡ ಅನುಭವ ನಿಜಕ್ಕೂ ರೋಮಾಂಚನಕಾರಿಯಾದುದು.
ಸಾಮ್ರಾಜ್ಯ ವಿಸ್ತರಣೆಗಾಗಿ ಸಾಮ್ರಾಟರು, ವ್ಯಾಪಾರದ ವಿಸ್ತರಣೆಗಾಗಿ ವ್ಯಾಪಾರಿಗಳು, ಸಂಸ್ಕೃತಿ ಹಾಗೂ ಧರ್ಮದ ವಿಸ್ತರಣೆಗಾಗಿ ಮಿಷನರಿಗಳು, ಇವರುಗಳ ಜೊತೆ ಇಂತಹ ಯಾವುದೇ ಮಹತ್ವಾಕಾಂಕ್ಷೆಯಿಲ್ಲದ ಅನುಭಾವಿ ಜಗತ್ತಿನ ಸಾದು ಸಂತರು ನಡೆಸಿದ ಹುಡುಕಾಟದ ಫಲವಾಗಿ ಇಂದು ಜಗತ್ತಿನ ಹಲವು ಧರ್ಮ, ಸಂಸ್ಕೃತಿಗಳು ಹಾಗೂ ಭಾಷೆ, ಆಹಾರ ಪದ್ಧತಿ ಇವುಗಳೆಲ್ಲವೂ ಪರಸ್ಪರ ಮುಖಾಮುಖಿಯಾಗಿವೆ. ಜೊತೆಗೆ ಕೊಡು ಕೊಳೆಯಲ್ಲಿ ನಿರತವಾಗಿವೆ.
Add a comment...

Post has attachment
ಅಪರೂಪದ ಅನ್ವೇಷಣೆಯ ಕೃತಿಯ ಕುರಿತು
ಮೊದಲಿನ ಹಾಗೆ ಪುಸ್ತಕ
ಕೊಳ್ಳುವ ಹಾಗೂ ಓದುವ ಶಕ್ತಿ ಕುಂದು ಹೋಗುತ್ತಿದೆ.   ಆರ್ಥಿಕ ಕೊರತೆಯ ನಡುವೆಯೂ ತಿಂಗಳಿಗೆ ಒಂದು ಪುಸ್ತಕವನ್ನು ಕೊಳ್ಳುವ   ಮತ್ತುಓದುವ ಪ್ರೀತಿ ಉಳಿಸಿಕೊಂಡಿದ್ದೀನಿ.   ಕಳೆದ   ಹದಿನೈದು
ದಿನಗಳ   ದ ಹಿಂದು ಪತ್ರಿಕೆಯಲ್ಲಿ   ಪ್ರಕಟವಾಗಿದ್ದ   ವಿಮರ್ಶೆಯನ್ನು   ಓದಿದ ನಂತರ     ಸ್ಟೀವರ್ಟ್...
Add a comment...

Post has attachment
ಹರಿಲಾಲ್ ಗೆ ದಕ್ಷಿಣ ಆಫ್ರಿಕಾದಲ್ಲಿ ಪ್ರಥಮವಾಗಿ ಜೈಲಿಗೆ ಹೋದಾಗ ಅವರಿಗೆ ಇಪ್ಪತ್ತು ವರ್ಷ ವಯಸ್ಸಾಗಿತ್ತು. ತಮ್ಮ ಪುತ್ರನನ್ನು ಹೋರಾಟಕ್ಕೆ ಪ್ರೆರೇಪಿಸಿ ಜೈಲಿಗೆ ಕಳುಹಿಸುತ್ತಿರುವ ಹಿನ್ನಲೆ ಕುರಿತಂತೆ ಹಲವಾರು ಮಂದಿ ಗಾಂಧೀಜಿಯನ್ನು ಪ್ರಶ್ನಿಸಿದ್ದರು. ಅವರೆಲ್ಲರಿಗೂ ಗಾಂಧೀಜಿಯವರು ನೀಡಿದ ಉತ್ತರ ಹೀಗಿತ್ತು” ದಕ್ಷಿಣ ಆಫ್ರಿಕಾದಲ್ಲಿರುವ ವರ್ಣಬೇಧ ನೀತಿಯ ಕಾನೂನನ್ನು ಉಲ್ಲಂಘಿಸಬೇಕೆಂದು ನಾನು ಪ್ರತಿಯೊಬ್ಬ ಭಾರತೀಯನಿಗೂ ಕರೆ ನೀಡುತ್ತೀದ್ದೇನೆ, ಏಕೆಂದರೆ, ಓರ್ವ ನ್ಯಾಯವಾದಿಯಾಗಿ ನಾನು ಉಲ್ಲಂಘಿಸಲು ಸಾಧ್ಯವಾಗುತ್ತಿಲ್ಲ. ಇದೀಗ ನನ್ನ ಪುತ್ರ ಹರಿಲಾಲ್ ನನ್ನ ಪ್ರತಿನಿಧಿಯಾಗಿ ಇಲ್ಲಿನ ಕಾನೂನನ್ನು ಪ್ರತಿಭಟಿಸಿ ಸೆರೆಮನೆವಾಸ ಅನುಭವಿಸುತ್ತಿರುವುದು ವೈಯಕ್ತಿಕವಾಗಿ ನನಗೆ ಸಂತೋಷ ತಂದಿದೆ. ಈ ರೀತಿಯ ಹೋರಾಟದ ಅನುಭವ ಹರಿಲಾಲ್ ಗೆ ಮುಂದಿನ ದಿನಗಳಲ್ಲಿ ಅಮೂಲ್ಯ ಶಿಕ್ಷಣವಾಗಲಿದೆ” ಎಂದಿದ್ದ ಅವರು, ಸೆರೆಮನೆಯಲ್ಲಿದ್ದ ತಮ್ಮ ಪುತ್ರನಿಗೆ ಪತ್ರವೊಂದನ್ನು ಬರೆದು ತುಂಬು ಹೃದಯದಿಂದ ಅಭಿನಂದಿಸಿದ್ದರು.
Add a comment...

Post has attachment
ಹರಿಲಾಲ್ ಗಾಂಧಿ ಕಥನ:-- ದಕ್ಷಿಣಾ ಆಫ್ರಿಕಾದಲ್ಲಿ ಸತ್ಯಾಗ್ರಹಿಯಾಗಿ ಹರಿಲಾಲ್
1906 ರ ಮೇ ತಿಂಗಳಿನಲ್ಲಿ ವಿವಾಹವಾದ ನಂತರ ಮೂರು ತಿಂಗಳು ಮಾತ್ರ ಹರಿಲಾಲ್ ಗಾಂಧಿ ಭಾರತದಲ್ಲಿದ್ದರು . ನಂತರ ತಂದೆಯ ಕರೆಗೆ ಓಗೊಟ್ಟು , ತಮ್ಮ ಪತ್ನಿ ಗುಲಾಬ್ ಬೆಹನ್ ಅವರನ್ನು ಅವರ ತವರು ಮನೆಯಲ್ಲಿರಿಸಿ ದಕ್ಷಿಣ ಆಫ್ರಿಕಾದತ್ತ ಪ್ರಯಾಣ ಬೆಳಸಿದರು . ತಮ್ಮ ಪುತ್ರನ ಪ್ರಯಾಣದ ವೆಚ್ಚಕ್ಕಾಗಿ ಗಾಂಧೀಜಿಯವರು ಯಾವುದೇ ಹಣ ...
Add a comment...

Post has attachment
ಹರಿಲಾಲ್ ಗಾಂಧಿ ಕಥನ-ಎರಡು
ಹರಿಲಾಲ್ ಜನಿಸಿದಾಗ ಮಹಾತ್ಮ ಗಾಂಧಿ ಮತ್ತು ಕಸ್ತೂರಬಾ ದಂಪತಿಗಳಿಗೆ ಕೇವಲ ಹತ್ತೊಂಬತ್ತು ವರ್ಷಗಳಾಗಿತ್ತು . ಇದಕ್ಕೂ ಮುನ್ನ ಕಸ್ತೂರಬಾ ಗೆ ಒಂದು ಮಗು ಜನಿಸಿ ಹುಟ್ಟಿದ ಮೂರು ದಿನಗಳಲ್ಲಿ ಅಸು ನೀಗಿತ್ತು . ಆದರೆ , ಅದು ಹೆಣ್ಣು ಅಥವಾ ಗಂಡು ಮಗು ಎಂಬುದು ಎಲ್ಲಿಯೂ ದಾಖಲಾಗಿಲ್ಲ . ಹಾಗಾಗಿ ಹರಿಲಾಲ್ ಗಾಂಧಿ ದಂಪತಿಗಳಿಗ...
Add a comment...

Post has attachment
ರೈತರ ಪ್ರಗತಿಗೆ ಸಾಲ ಮನ್ನಾ ಯೋಜನೆ ಪರ್ಯಾಯವಲ್ಲ
ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಚುನಾವಣೆ ಹಾಗೂ ಆನಂತರ ನಡೆದ ರಾಜಕೀಯ ಬೆಳವಣಿಗೆಗಳು ಅನೇಕ ಅನಿರೀಕ್ಷಿತ ತಿರುವು ಪಡೆದುಕೊಂಡಿವೆ . ಇಷ್ಟು ಮಾತ್ರವಲ್ಲದೆ , ಚುನಾವಣಾ ಪ್ರಚಾರದ ಸಂದರ್ಭದಲ್ಲಿಪಕ್ಷ ಬೇಧವಿಲ್ಲದೆ ಎಲ್ಲಾ ರಾಜಕೀಯ ಪಕ್ಷಗಳು ಯಾವುದೇ ವಿವೇಚನೆ ಮತ್ತು ದೂರದೃಷ್ಟಿಯಿಲ್ಲದೆ   ಹೊರಡಿಸಿದ ಪ್ರಣಾಳಿಕೆಗಳು ಈಗ...
Add a comment...

Post has attachment
ಕರ್ನಾಟಕದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆಯ ಭರಾಟೆಯಲ್ಲಿ ಮುಳುಗಿರುವಾಗ ಉತ್ತರ ಹಾಗೂ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ರೈತರು ತಾವು ಬೆಳೆದ ಈರುಳ್ಳಿ ಕೃಷಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್ಗೆ 250 ರೂಪಾಯಿಗೆ ಮಾರಾಟ ಮಾಡಿ ಕಣ್ಣೀರಿರು ಹಾಕಿದರು. ರೈತರಿಂದ 250 ರೂಪಾಯಿಗೆ ಖರೀದಿಸಿದ ವರ್ತಕರು ಮತ್ತು ದಳ್ಳಾಳಿಗಳು ಅದೇ ಈರುಳಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಗೆ ಸಾವಿರ ರೂಪಾಯಿ ಅಂದರೆ, ಕೆ.ಜಿ. ಒಂದಕ್ಕೆ ಹತ್ತು ರೂಪಾಯಿನಂತೆ ಮಾರಾಟ ಮಾಡಿದರು. ಒಂದು ಕ್ವಿಂಟಾಲ್ ಈರುಳ್ಳಿ ಬೆಳೆಯಲು ರೈತರು ಸರಾಸರಿ 400 ರೂಪಾಯಿನಿಂದ 500 ರೂಪಾಯಿ ಖರ್ಚು ಮಾಡಿ, 250ಕ್ಕೆ ಮಾರಾಟ ಮಾಡಿ ಕಣ್ಣೀರು ಸುರಿಸುತ್ತಿದ್ದರೆ, ಅತ್ತ ದಳ್ಳಾಳಿ ಅಥವಾ ವರ್ತಕರು ಯಾವುದೇ ಶ್ರಮವಿಲ್ಲದೆ ಕೇವಲ 250 ರೂಪಾಯಿ ಬಂಡವಾಳ ಹಾಕಿ ಶೇಕಡ ಮುನ್ನೂರಷ್ಟು ಅಂದರೆ, 750 ರೂಪಾಯಿಗಳ ಲಾಭವನ್ನು ತನ್ನ ಜೇಬಿಗೆ ಇಳಿಸುತ್ತಿದ್ದರು.. ಇದೀಗ ಕೋಲಾರ, ಧಾರವಾಡ ಜಿಲ್ಲೆಗಳ ಮಾವು ಬೆಳೆಗಾರರು ಇಂತಹ ಸಂಕಷ್ಟಕ್ಕೆ ಸಿಲುಕಿದ್ದಾರೆ. 1993 ರ ಅಕ್ಷೋಬರ್ ತಿಂಗಳಿನಲ್ಲಿ ಆಲೂಗೆಡ್ಡೆಯನ್ನು ಬೆಳೆದ ಹಾಸನ ಜಿಲ್ಲೆಯ ರೈತನೊಬ್ಬ ಟ್ರಾಕ್ಟರ್ ನಲ್ಲಿ ತಂದು ಹಾಸನದ ಮಾರುಕಟ್ಟೆಯಲ್ಲಿ ಮಾರಾಠ ಮಾಡಿದಾಗ ಆತನಿಗೆ ಟ್ರಾಕ್ಟರ್ ಬಾಡಿಗೆ ಕೂಡ ದಕ್ಕಲಿಲ್ಲ. ಬಾಡಿಗೆ ನೀಡಲಾಗದ ಅಪಮಾನಕ್ಕೆ ಆ ರೈತನು ಮಾರುಕಟ್ಟೆಯ ಸಮೀಪದ ತಣ್ಣೀರು ಹಳ್ಳ ಎಂಬ ಪ್ರದೇಶದಲ್ಲಿ ಅದೇ ಹಣದಲ್ಲಿ ಕ್ರಿಮಿನಾಶಕ ಔಷಧಿ ಕೊಂಡು ಅದನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ನೆಲದ ರೈತನ ಸಂಕಷ್ಟದ ಸ್ಥಿತಿಗೆ ಸಾಕ್ಷಿಯಂತಿದೆ. ಆದರೆ, ಇಂದಿಗೂ ಕೂಡ ರೈತನ ನಸೀಬು ಬದಲಾಗಲಿಲ್ಲ
Add a comment...

Post has attachment
ರೈತರ ಪ್ರಗತಿಗೆ ಸಾಲ ಮನ್ನಾ ಯೋಜನೆ ಪರ್ಯಾಯವಲ್ಲ
ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಚುನಾವಣೆ ಹಾಗೂ ಆನಂತರ ನಡೆದ ರಾಜಕೀಯ ಬೆಳವಣಿಗೆಗಳು ಅನೇಕ ಅನಿರೀಕ್ಷಿತ ತಿರುವು ಪಡೆದುಕೊಂಡಿವೆ . ಇಷ್ಟು ಮಾತ್ರವಲ್ಲದೆ , ಚುನಾವಣಾ ಪ್ರಚಾರದ ಸಂದರ್ಭದಲ್ಲಿಪಕ್ಷ ಬೇಧವಿಲ್ಲದೆ ಎಲ್ಲಾ ರಾಜಕೀಯ ಪಕ್ಷಗಳು ಯಾವುದೇ ವಿವೇಚನೆ ಮತ್ತು ದೂರದೃಷ್ಟಿಯಿಲ್ಲದೆ   ಹೊರಡಿಸಿದ ಪ್ರಣಾಳಿಕೆಗಳು ಈಗ...
Add a comment...
Wait while more posts are being loaded