Profile cover photo
Profile photo
Sushrutha Dodderi
1,516 followers
1,516 followers
About
Sushrutha Dodderi's posts

Post has attachment
ಗೋಷ್ಠಿ
ಅದೆಲ್ಲ ಯಾರಿಗೂ ತಿಳಿಯದ್ದೇನಲ್ಲ ಒಂದು ಬಟ್ಟಲು ಕಾಫಿಯಲೆಷ್ಟು ನೊರೆಯಿರಬೇಕು ಅದು ಎಷ್ಟು ಬಿಸಿ, ಎಷ್ಟು ಸಿಹಿ, ಎಷ್ಟು ಕರಿ, ಎಷ್ಟು ಕಹಿ, ಮತ್ತು ಒಂದು ಕಪ್ಪಿನಲ್ಲೆಷ್ಟು ಕಾಫಿಯಿರಬೇಕೆಂಬ ಲೆಕ್ಕಾಚಾರ ಆದಿಪುರಾಣಗಳಿಗಿಂತ ಹಳೆಯದು ಯಾವ ಆಧುನಿಕ ಸಂಶೋಧನೆಯೂ ಕಾಫಿಯ ಕಪ್ಪು ಹಿಡಿದು ಬಾಗಿಲಿಗೊರಗಿ ನಿಂತು ಆವಿ ಬೆರೆತ ಹೊ...

Post has attachment
ಮಗಳು ನೋಡಿದ ಮಳೆ
ಹುಟ್ಟಿ ನಾಲ್ಕು ತಿಂಗಳಾಗಿ ತನ್ನಮ್ಮನ ಊರಿನಲ್ಲಿರುವ ನನ್ನ ಮಗಳಿಗೆ ಇದು ಮೊದಲ ಮಳೆಗಾಲ. ಕಡುನೀಲಿ ಸ್ವೆಟರು, ತಲೆ-ಕಿವಿ ಮುಚ್ಚುವಂತೆ ಟೋಪಿ, ಕೈ-ಕಾಲುಗಳಿಗೆ ಸಾಕ್ಸು ತೊಡಿಸಿ ಬಾಗಿಲ ಬಳಿ ಒಂದು ಮೆತ್ತನೆ ಹಾಸು ಹಾಸಿ ಅವಳನ್ನು ಮಲಗಿಸಿದರೆ, ಹೊರಗೆ ಹೊಯ್ಯುತ್ತಿರುವ ಮಳೆಯನ್ನು ತನ್ನ ಅಚ್ಚರಿಯ ಕಣ್ಣುಗಳಿಂದ ಪಿಳಿಪಿಳಿ ...

Post has attachment
ಸೀರಿಯಲ್ ಲೈಟ್ಸ್
ಹಳೆಯ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿಸುತ್ತಿ ಇಟ್ಟ ಮಿಣುಕುದೀಪಗಳ ಮಾಲೆ ಹುಷಾರಾಗಿ ಬಿಚ್ಚಬೇಕು ಸಾರ್ ಗಂಟಾಗಲು ಬಿಡಬಾರದು ಹೀಗೆ ಒಂದೊಂದೆ ವಯರು ಬಿಚ್ಚುತ್ತ ತುದಿಯ ಹುಡುಕುವುದೇ ಒಂದು ಸಾಹಸ ಇಕೋ ಸಿಕ್ಕಿತು ನೋಡಿ ಇನ್ನು ನೀವು ಆ ತುದಿ ಹಿಡಿದು ಅತ್ತ ಸಾಗಿರಿ ನಾನು ಈ ತುದಿ ಹಿಡಿದು ಇತ್ತ ಸಾಗುವೆ ಹೇಗೆ ಬಿಡಿಸಿಕೊಳ್...

Post has attachment
ಕವಿತೆಯಲ್ಲಿ ಎಲ್ಲವನ್ನೂ ಹೇಳಲಾಗುವುದಿಲ್ಲ
ಚಂದ್ರ ಬೆಳದಿಂಗಳಲ್ಲಿ ಓಡಾಡುತ್ತಾನೆ ಎಂದೆ ಚಂದ್ರನಿರುವುದರಿಂದಲೇ ಬೆಳದಿಂಗಳು ಎಂದಳು ಟೆರೇಸಿನಲ್ಲಿ ವಾದ ಬೇಡ, ಹುಣ್ಣಿಮೆಯ ರಾತ್ರಿ, ಉಬ್ಬರದ ದನಿ ಕಾದ ಕಿವಿಗಳಿಗೆ ತಂಗಾಳಿಯಲ್ಲಿ ತಲುಪುತ್ತದೆ ಎಂದು ಮನೆಯೊಳಗೆ ಕರೆತಂದೆ ಚಂದ್ರ ಬಾನಲ್ಲೆ ಉಳಿದ ನಮ್ಮ ಮನೆ ಹೆಂಚಿನ ಮನೆಯಾಗಿರಬೇಕಿತ್ತು ಅಲ್ಲೊಂದು ಬೆಳಕಿಂಡಿಯಿರಬೇಕಿತ...

Post has attachment
ನಿನ್ನಂತೆ ನಿದ್ರಿಸಲು
ನಿದ್ರಿಸಿದರೆ ನಿನ್ನ ಹಾಗೆ ನಿದ್ರಿಸಬೇಕು ಮಗಳೇ ಎಣ್ಣೆ ಹಚ್ಚಿ ಸ್ನಾನ ಮಾಡಿಸಿಕೊಂಡು ಲೋಬಾನಗಂಧಗ್ರಹಿಸಿ ಗೊಬ್ಬೆ ಕಟ್ಟಿಸಿಕೊಂಡು ಕೈಕಾಲಾಡದಂತೆ ಕತ್ತಲೆಕೋಣೆಯ ಬೆಚ್ಚನೆ ಹಾಸಿಗೆಯಲ್ಲಿ ಅಮ್ಮನ ಮಡಿಲಲ್ಲಿ ಮಲಗಿ ಎಚ್ಚರಾಗಬಾರದು ಮಗಳೇ ಅಡುಗೆಮನೆಯಲ್ಲಿ ಮಿಕ್ಸಿ ಸದ್ದು ದೇವರಮನೆಯಲ್ಲಿ ಘಂಟೆ ಸದ್ದು ಜಗಲಿಯಲ್ಲಿ ಪಟ್ಟಾಂಗದ...

Post has attachment
ಬುದ್ಧಪೂರ್ಣಿಮೆ
ಬೋರು ಕೊರೆಯುವ ಲಾರಿ ರಾತ್ರಿಯಾದದ್ದರಿತು ಸದ್ದು ನಿಲ್ಲಿಸಿದೆ ಇಡೀ ರಸ್ತೆಗೆ ಮೌನವಪ್ಪಳಿಸಿದೆ ಒಡನೆ ಕಬ್ಬಿಣದ ಭಾರಕೊಳವೆಗಳ ಜತೆ ದಿನಪೂರ್ತಿ ಕೆಲಸ ಮಾಡಿರುವ ಹುಡುಗರು ಮಲಗಿಬಿಟ್ಟಿದ್ದಾರೀಗ ಲಾರಿಯ ಬ್ಯಾನೆಟ್ಟೇರಿ ತೆಳ್ಳನೆ ಚಾದರ ಹೊದ್ದು. ದೂರದಲ್ಲೆಲ್ಲೋ ಮಿಂಚು ಮಳೆಯಾಗುತ್ತಿರಬಹುದು ಅವಳೂರಿನಲ್ಲಿ ಆಕಾಶಕ್ಕೆ ಕೈಚಾ...

Post has attachment
ಅಣ್ಣನೆಂಬ ಅಭಯರಾಗ
ಎಲ್ಲ ದಿಕ್ಕಿನಿಂದಲೂ ಸುತ್ತುವರೆದಿರುವ ಕೇಡಿಗಳು. ನಿಗೂಢವೆನಿಸುವ ಬಣ್ಣಬಣ್ಣದ ಗೋಡೆಗಳ ಕೋಣೆಯೊಳಗೆ ನುಗ್ಗಿರುವ ಹೀರೋ. ಸರಕ್ಕನೆ ತಂತಾನೆ ಮುಚ್ಚಿಕೊಳ್ಳುವ ಬಾಗಿಲುಗಳು. ಅಕ್ಕಪಕ್ಕ ಮೂಲೆಯನ್ನೆಲ್ಲ ನೋಡಿದರೂ ಯಾರೂ ಕಾಣದ ನಿರ್ವಾತ. ಫಕ್ಕನೆ ತುಸು ಮೇಲೆ ನೋಡಿದರೆ, ಅಲ್ಲಿ ತನ್ನನ್ನು ಕಟ್ಟಿದ ಹಗ್ಗಗಳಿಂದ ಬಿಡಿಸಿಕೊಳ್ಳಲ...

Post has attachment
ಭೇದನ
ಬಾಗಿಲಿಗೆ ಅಡ್ಡವಾಗಿ ಬಲೆಯೊಂದ ಕಟ್ಟಿದೆ ಜೇಡ ನಾನು ಹೋಗಲೇಬೇಕಿರುವ ದಾರಿ ಬಾಗಿಲಾಚೆ ಕಾಯುತ್ತಿರುವವರು ಬಹಳ ಸಮಯ ಪರಿಪಾಲನೆಗೆ ಈಗ ಎಂದಿಲ್ಲದ ಮಹತ್ವ ಹೊತ್ತಿಗೆ ಸರಿಯಾಗಿ ತಲುಪುವುದು ಅತ್ಯಗತ್ಯ ಜೇಡರಬಲೆಯನ್ನು ಭೇದಿಸಿ ನುಗ್ಗುವುದೇನು ಕಷ್ಟದ ಮಾತಲ್ಲ ಮೈಗೆ ತಾಕಿಸಿಕೊಳ್ಳದಂತೆ ಒಮ್ಮೆ ಕೈಯಾಡಿಸಿದರೆ ಸಾಕು, ಬಿಳಿಬಿಳಿ...

Post has attachment
ಇರಿಕೆ
ಕಂಕುಳ ಕೂಸಿನೊಡದೆ ದೂರದ ಸರ್ಕಾರಿ ಬಾವಿಯಿಂದ ದಿನಕೆ ಹತ್ತು ಬಾರಿ ಪ್ಲಾಸ್ಟಿಕ್ ಕೊಡದಲಿ ನೀರೊಯ್ಯುವಾಗ ಕೊಡ ವಾಲಿ ಬೀಳದಂತೆ, ಜೀವಜಲ ಭೂಮಿಪಾಲಾಗದಂತೆ, ಶ್ರಮ ವ್ಯರ್ಥವಾಗದಂತೆ ನೀಲವ್ವನಿಗೆ ನೆರವಾಗುವ ಇರಿಕೆ ಸಿಲಾವರದ ಪಾತ್ರೆ ಮಾರಲು ಬರುವ ದೊಡ್ಡದನಿಯ ಆ ಹೆಂಗಸು ಒಂದರ ಮೇಲೊಂದರಂತೆ ಪೇರಿಸಿದ ಪಾತ್ರೆ-ಪಡಗಗಳನು ತಲೆಮ...

Post has attachment
ಗಿಲಗಿಚ್ಚಿ
ಅತಿಸಣ್ಣ ಸದ್ದಿಗೂ ಬೆಚ್ಚಿಬೀಳುವ ಮಗಳು ಅತಿಸಣ್ಣ ಚಲನೆಗೂ ಸ್ಪಂದಿಸುವ ಗಿಲಗಿಚ್ಚಿ ಮಗಳಿಗೂ ಗಿಲಗಿಚ್ಚಿಗೂ ಸಖತ್ ದೋಸ್ತಿ ಆಕೆ ಅತ್ತಾಗಲೆಲ್ಲ ಸದ್ದು ಹೊಮ್ಮಿಸಿ ಸುಮ್ಮನಾಗಿಸುವುದು ಆಕೆ ನಕ್ಕಾಗಲೆಲ್ಲ ತಾನೇ ಕಾರಣವೆಂದು ಕುಣಿಯುವುದು ಆಕೆ ಕೈಚಾಚಿದಾಗ ಪುಟ್ಟ ಬೆರಳುಗಳೊಳಗೆ ಸೇರಿಕೊಳ್ಳುವುದು ಹಗಲು ನಿದ್ರಿಸಿ ರಾತ್ರಿ ಅ...
Wait while more posts are being loaded