Profile cover photo
Profile photo
Partha sarathy n
40 followers
40 followers
About
Posts

Post has attachment

Post has attachment

Post has attachment
"ನಿಮ್ಮ ಮನೆಯಲ್ಲಿ ಪ್ರಮಥಿನಿ ಎಂಬುವರ ಜೊತೆ ಮಾತಾಡಬೇಕಿತ್ತು".
ಅವರ ಮುಖ ಗಂಭೀರವಾಯಿತು.
"ಈಗ ಹೊರಹೋದಳಲ್ಲ ನನ್ನ ಮಗಳು ಅವಳೇ ಪ್ರಮಥಿನಿ ಅವಳ ಹತ್ತಿರ ನಿಮಗೇನು ಮಾತು?" ಅಂದರು.
ನಾನು ಕಕ್ಕಾವಿಕ್ಕಿಯಾದೆ ಇದು ಹೇಗೆ ನಾನು ನಿರೀಕ್ಷಿಸಿದ ಪ್ರಮಥಿನಿ ಸುಮಾರು 48-49 ವಯಸ್ಸಿನವಳು...... ಇವಳಾದರೊ 20-21 ಇರಬಹುದು ಅಷ್ಟೆ. ಹಾಗಾಗಿ ನಾನು ಮತ್ತೆ ಕೇಳಿದೆ
"ಇವರೊಬ್ಬರೇನಾ ಪ್ರಮಥಿನಿ ಅಂದರೆ , ಇನ್ಯಾರಾರು ಇದ್ದಾರ ಸುಮಾರು 49ರ ಪ್ರಾಯದವರು"
ಅವರು ಸ್ವಲ್ಪ ಆಶ್ಚರ್ಯಪಟ್ಟು ಏಕೆ ಎಂದರು. ಆಗ ನಾನು ಎಲ್ಲ ತಿಳಿಸಿ ನನ್ನ ಹತ್ತಿರವಿದ್ದ ಪತ್ರ ಅವರಿಗೆ ನೀಡಿದೆ. ಅವರು ಅದನ್ನು ಓದುತ್ತ ವಿಷಾದಭಾವ ತಾಳಿದರು. ನಮ್ಮನ್ನು ಒಳಗೆ ಬನ್ನಿ ಎನ್ನುತ್ತ ಒಳಗಿನ ಹಜಾರಕ್ಕೆ ಕರೆದೋಯ್ದು ಸೋಫ ತೋರಿಸಿ ಕುಳಿತುಕೊಳ್ಳಿ ಎನ್ನುತ್ತ ,
"ಕುಡಿಯಲು ಕಾಫಿ ಆದೀತ" ಎಂದರು.
ನನ್ನಲ್ಲಿ ಕುತೂಹಲ ಜಾಸ್ತಿಯಾಗುತ್ತಿತ್ತು. ಅವರು ನುಡಿದರು
"ನೀವು ಹುಡುಕುತ್ತ ಬಂದಿರುವ ಪ್ರಮಥಿನಿ ಬಹುಷಃ ನನ್ನ ಅಕ್ಕ, ಆಕೆ ಮರಣ ಹೊಂದಿ ಸುಮಾರು 22 ವರ್ಷಗಳೇ ಆದವು".

Post has attachment
’ನಿಮ್ಮದು ಯಾವ ಧರ್ಮ? ’
’…. ಧರ್ಮವೆ? ಹಿಂದೂ ಇರಬಹುದು’
ಆಕೆ ನನ್ನ ಮುಖವನ್ನು ವಿಚಿತ್ರವಾಗಿ ನೋಡಿದಳು.
’ಇರಬಹುದು , ಅಂದರೆ ಏನು ಸಾರ್ ಸರಿಯಾಗಿ ಹೇಳಿ’
ಆಕೆಯ ಮುಖದಲ್ಲಿ ಅಸಹನೆ.
’ಸರಿ, ಹಿಂದೂ ಎಂದು ಬರೆದುಕೊಳ್ಳಿ’
’ಮತ್ತೆ ಜಾತಿ ಯಾವುದು ಸಾರ್, ಅದರಲ್ಲಿ ಪಂಗಡ ಯಾವುದು ತಿಳಿಸಿ’
’ಜಾತಿಯೆ ? ಯಾವುದೆಂದು ಸರಿಯಾಗಿ ತಿಳಿಯದು. ಪಂಗಡವು ಗೊತ್ತಿಲ್ಲ’
ಆಕೆಗೆ ನನ್ನ ಉತ್ತರದಿಂದ ರೇಗಿಹೋಯಿತು, ಆಕೆಯ ಸಹನೆಯೂ ಮೀರಿಹೋಗಿತ್ತು.
ಬಿಸಿಲಿನಲ್ಲಿ ಅಲೆಯುತ್ತ ಮನೆಯಿಂದ ಮನೆಗೆ ಸುತ್ತುತ್ತ ಇದ್ದ ಆಕೆಗೆ ಸಹನೆ ಇರಲು ಹೇಗೆ ಸಾದ್ಯ?

Post has attachment

Post has attachment

Post has attachment
ನನಗೆ ಸಿಗುತ್ತಿರುವ ರಾಜಾತಿತ್ಯದಿಂದ ನನ್ನ ಮನಸ್ಸು ಮುದಗೊಂಡಿತ್ತು, ಹೀಗೆ ಆದರೆ ನಾನು ಕತೆಯನ್ನು ಬರೆದಹಾಗೆ ಇದೆ ಹೊಟ್ಟೆ ತುಂಬಾ ತಿನ್ನುವುದು, ಕತ್ತೆಯಂತೆ ಮಲಗಿ ನಿದ್ದೆ ಮಾಡುವುದು. ಅಂದುಕೊಳ್ಳುತ್ತ ಪಕ್ಕದಲ್ಲೆಲ್ಲ ಕಣ್ಣು ಆಡಿಸಿದೆ. ಅಲ್ಲಿಯೆ ಆತ ಆಸಕ್ತಿಯಿಂದ ಓದುತ್ತಿದ್ದ ಅಂದಿನ ದಿನಪತ್ರಿಕೆ ಬಿದ್ದಿತ್ತು. ತೆಗೆದು ಕಣ್ಣಾಡಿಸಿದೆ.

ಎಂತದೊ ಹೊಸತು ಅನ್ನಿಸಿತು. ಎಲ್ಲ ಸುದ್ದಿಗಳೆ ಹೊಸತೆ, ಯಡಿಯೂರಪ್ಪನಾಗಲಿ, ಜನರ್ದಾನ ರೆಡ್ಡಿ ಯಾಗಲಿ ಮತ್ತೆ ಜೈಲು ಸೇರಿರುವ ದರ್ಶನ್ ಆಗಲಿ ಯಾರದೆ ಸುದ್ದಿ ಇರದೆ ಎಂತದೊ ಈಷ್ಟ್ ಇಂಡಿಯ ಕಂಪನಿಯದು, ಸೈನಿಕರ ದಂಗೆಯ ಎಂತದೊ ಕೆಲವು ವಿವರಗಳು ಏನೇನೊ ಕಾಣಿಸಿದವು. ನನಗೆ ಏನೊ ಅನುಮಾನ ಬಂದು ಯಾವತ್ತಿನ ಪತ್ರಿಕೆ ಅಂತ ಮೇಲೆ ನೋಡಿದೆ,

ಮೈ ಗಾಡ್!
೧೮೫೭ ರ ಆಗಷ್ಟ್ ೧೨ ರ ಟೈಮ್ಸ್ ಆಪ್ ಇಂಡಿಯ

Post has attachment
ಎಷ್ಟಾದರು ದೆವ್ವ ದೆವ್ವವೆ ಅದರ ಬುದ್ದಿಯನ್ನು ತೋರಿಸಿಬಿಟ್ಟಿತು. ಹೀಗೆ ಮಳೆಗಾಲ ಪ್ರಾರಂಬವಾಯಿತು. ಆಗೆಲ್ಲ ಕರೆಂಟ್ ದೀಪವಿಲ್ಲ ಸೀಮೆ ಎಣ್ಣೆ ಬುಡ್ಡಿಯಲ್ಲಿ ಕಾಲ ಕಳೆಯಬೇಕು. ಒಂದು ದಿನ ಸಂಜೆ ಪ್ರಾರಂಬವಾದ ಮಳೆ ರಾತ್ರಿಯೆಲ್ಲ ಸುರಿಯುತ್ತಲೆ ಇತ್ತು. ನನಗೆ ಸರಿಯಾಗಿ ನಿದ್ರೆಯಿಲ್ಲ. ಬರೀ ಬಿಡದೆ ಸುರಿಯುತ್ತಿರುವ ಶಬ್ದ. ಕಣ್ಣು ಮುಚ್ಚಿದ್ದೆ, ಸರಿ ರಾತ್ರಿಯಲ್ಲಿ ಮಗು ಅಳುತ್ತಿರುವ ಶಬ್ದ ಕೇಳುತಿತ್ತು. ಎಲ್ಲೋ ದೂರದಲ್ಲಿ ಅಳುತ್ತಿರುವಂತೆ. ಕಣ್ಣು ಬಿಟ್ಟು ಪಕ್ಕದಲ್ಲಿ ಕೈ ಆಡಿಸಿದೆ, ಮಗುವಿಲ್ಲ!. ಎದೆ ದಸಕ್ ಎಂದಿತು. ಜೋರಾಗಿ 'ಅಮ್ಮ ಅಮ್ಮ' ಅಂತ ಕೂಗಿದೆ. ಸೀಮೆಎಣ್ಣೆ ಲಾಟಿನ್ ದೊಡ್ಡದು ಮಾಡಿ ಅಪ್ಪ ಅಮ್ಮ ರೂಮಿನೊಳಗೆ ಓಡಿಬಂದರು. 'ಅಮ್ಮ ಪಕ್ಕದಲ್ಲಿ ಮಗುವಿಲ್ಲ' ಎಂದೆ ಗಾಬರಿಯಿಂದ ಪಕ್ಕಕ್ಕೆ ನೋಡಿದರೆ ತೊಟ್ಟಿಲು ಇಲ್ಲ!. ಮನೆಯ ಹೊರಗೆ ಮಗು ಜೋರಾಗಿ ಅಳುತ್ತಿದೆ!

Post has attachment

Post has attachment
Wait while more posts are being loaded