Profile cover photo
Profile photo
Kavi Nagaraj
268 followers -
ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ, ಭಾವಜೀವಿ.
ಕೆಳದಿ ಕವಿಮನೆತನದ ಪತ್ರಿಕೆ 'ಕವಿಕಿರಣ'ದ ಸಂಪಾದಕ, ಭಾವಜೀವಿ.

268 followers
About
Kavi's posts

Post has attachment
ಮೂಢ ಉವಾಚ - 264
ತಪ್ಪಿಗಿರಬಹುದು ಕಾರಣವು ನೂರು ಪರರು ಕಾರಣರಲ್ಲ ಹೊರಿಸದಿರು ದೂರು| ಹುಂಬತನ ಭಂಡತನ ಮೊಂಡುತನ ಬೇಡ ಅಡಿಗಡಿಗೆ ಅಳುಕುವ ಪಾಡೇಕೆ ಮೂಢ||  

Post has attachment

Post has attachment
ಮೂಢ ಉವಾಚ - 263
ಎದೆಯಲ್ಲಿ ದುಃಖ ಮಡುಗಟ್ಟಿದಾಕ್ರೋಷ ಬರಡು ಮನದಲಿ ತೋರಿಕೆಯ ಸಂತೋಷ| ಹೀನ ದೈನ್ಯತೆಯ ಆಶ್ರಯದ ಪಾಶ ಮೂದಲಿಕೆ ತಪ್ಪೀತೆ ಮುದಿತನದಿ ಮೂಢ||

Post has attachment

Post has attachment
ಮೂಢ ಉವಾಚ - 262
ಮರಣಕಿಂತಲು ಘೋರ ಮುಪ್ಪೆಂಬ ಶಾಪ ದೇಹ ದುರ್ಬಲವು ರೋಗ ರುಜಿನಗಳ ಕೂಪ| ಅನ್ಯರನು ನೆಚ್ಚುವ ದೈನ್ಯತೆಯೆ ತಾಪ ನರರ ಮಸ್ತಕದ ಲಿಖಿತವಿದು ಮೂಢ||

Post has attachment
ಮೂಢ ಉವಾಚ - 261
ನಂಬಿದ್ದೆ ಸರಿಯೆಂಬ ಜಿಗುಟುತನವೇಕೆ ನಿಜವ ನಂಬಲು ಹಿಂಜರಿಕೆಯೇಕೆ| ಜಿಜ್ಞಾಸೆಯಿರಲಿ ಹೇಗೆ ಏನು ಏಕೆ  ಹಿರಿಯ ನಿಜವರಿತು ನಡೆವ ಮೂಢ|| 

Post has attachment
ಮೂಢ ಉವಾಚ - 260
ಪರಮಾತ್ಮ ರಚಿಸಿಹನು ಭವ್ಯ ಬ್ರಹ್ಮಾಂಡ ಬ್ರಹ್ಮಾಂಡಕಿಂ ಹಿರಿದಲ್ತೆ ಅಂತರಂಗದ ಹರವು| ಪರಮಾತ್ಮ ಕಾಣನೆ ಒಳಗೆ ನಿನ್ನೊಳಗೆ ಅಣೋರಣೀಯನ ಮಹತಿಯಿದು ಮೂಢ||

Post has attachment
ಮೂಢ ಉವಾಚ - 259
ವಾಸನೆಯು ಬಿರುಗಾಳಿ ವಿಚಾರ ತರಗೆಲೆಯು ಆಸೆ ನಗುವುದು ವಿಚಾರ ಸೋಲುವುದು| ಜಾರುವುದನರಿತರೂ ನಾಶವಾಗದು ಚಪಲ ಸಕಲ ಸಂಕಟಕೆ ಮೂಲವಿದು ಮೂಢ||

Post has attachment
ಮೂಢ ಉವಾಚ - 258
ದೇಹ ದೇವರಾಗಿ ಭೋಗ ಪೂಜೆಯಾಗಿ ಇಂದ್ರಿಯದಾಸನಾಗಿ ವಿಷಯದ ಬೇಟೆಯಲಿ| ಹುಲು ತೃಪ್ತಿ ಗುರಿಯಾಗಿ ಅರಿಗೆ ಶರಣಾಗಿ ಕೂಪದಲಿ ಬಿದ್ದರೇಳುವರೆ ಮೂಢ||

Post has attachment
ಮೂಢ ಉವಾಚ - 257
ದೇಹವೆಂಬುದು ರಥವು ಬುದ್ಧಿಯೇ ಸಾರಥಿಯು ಇಂದ್ರಿಯಾಶ್ವವನು ಚಿತ್ತ ಹಿಡಿದಿಹುದು|  ಒಡೆಯ ಹೇಳ್ದಂತೆ ಸಾಗುವನು ಸಾರಥಿಯು ಒಡೆಯನಾರೆಂದು ತಿಳಿದಿಹೆಯ ಮೂಢ||
Wait while more posts are being loaded