Profile cover photo
Profile photo
Jagannath R N
54 followers
54 followers
About
Posts

Post has attachment
ಕಾಲ ಗರ್ಭದಲಿ...

ಊರ ತೊರೆದ ಮಗನ
ಕಡೆವರೆಗೂ ಅದೇ ಪ್ರೀತಿಯಲಿ
ಕಾಯೋ ಕಣ್ಣು ಅಮ್ಮನದು..
ತೊರೆದ ಮಗನ ಹಿತವ ಬಯಸಿ
ನೂರಾರು ದೇವರುಗಳ ಹರಕೆ
ತೀರಿಸುತಲೇ, ಸಾಗುತಿರುವ ಬದುಕು ಅವಳದು..
ಆದರೂ ಇದ ಅರಿಯದ ಮಗ ಸಾಗುತಿರುವನೋ
ಅರಿತು ಕೂಡ ಮರೆತು ಸಾಗುತಿಹನೊ
ತಿಳಿಯದು ಬದುಕಲಿ..

ಸಿಗದ ಒಲವ ಇನ್ನೆಲ್ಲೋ
ಕಾಣುವ ಜಿಜ್ಞಾಸೆ ಪ್ರತಿ ಪ್ರೇಮಿಗಳದ್ದು..
ತೊರೆದ ಕ್ಷಣಕೆ ಏನೇನೋ ಕಾರಣ
ತಾವೆ ಕಟ್ಟಿಕೊಳ್ಳುತ ,ಎಂದಿಗೂ
ದೂಷಿಸದ ಪ್ರೇಮ ಇವರದು..
ಆದರೂ, ಇದ ಅರಿಯದೆ
ಹುಡುಗಿ ಕಳೆದುಕೊಂಡಳೊ,.?
ಸಿಗದ ಹುಡುಗ ಕಳೆದುಕೊಂಡನೊ,
ಒಟ್ಟಾರೆ ಸಿಗದಿದ್ದೆ ಜಾಸ್ತಿ ಬದುಕಲಿ...

ಏನೆನೋ ಹುಡುಕುವ
ಏನೆನೋ ಪಡೆದುಕೊಳ್ಳುವ ಧಾವಂತದಿ
ಕಳೆದುಕೊಳ್ಳುತಲೇ ಸಾಗುವ
ಏನೋ ಪಡೆದವೆಂದು ಹಿಗ್ಗುವ
ಲೆಕ್ಕಾಚಾರದ ಬದುಕಿಗೆ
ತಿಳಿಯದು ಸಾಗುವ ಹಾದಿಯಲಿ
ಕಳೆದುಕೊಂಡುದರ ಲೆಕ್ಕ...

ಇಳಿ ಸಂಜೆಯಲಿ ಕೂತು
ಕಳೆದುಕೊಂಡ ಒಲವಿನ ಅವಲೋಕನ..
ಗೋಡೆ ಮೇಲಿನ ಅಮ್ಮನ ಫೋಟೋ ನೋಡಿ
ಅವಳ ಬದುಕ ಸ್ಮರಿಸುವ ಆತ್ಮಾವಲೋಕನ
ಎರಡು ಶೂನ್ಯ ಕಾಲ ಗರ್ಭದಲಿ....


......ರಾಮೇನಹಳ್ಳಿ ಜಗನ್ನಾಥ

Post has attachment
**
ಕಾಲ ಗರ್ಭದಲಿ... ಊರ ತೊರೆದ ಮಗನ ಕಡೆವರೆಗೂ ಅದೇ ಪ್ರೀತಿಯಲಿ ಕಾಯೋ ಕಣ್ಣು ಅಮ್ಮನದು.. ತೊರೆದ ಮಗನ ಹಿತವ ಬಯಸಿ ನೂರಾರು ದೇವರುಗಳ ಹರಕೆ ತೀರಿಸುತಲೇ, ಸಾಗುತಿರುವ ಬದುಕು ಅವಳದು.. ಆದರೂ ಇದ ಅರಿಯದ ಮಗ ಸಾಗುತಿರುವನೋ ಅರಿತು ಕೂಡ ಮರೆತು ಸಾಗುತಿಹನೊ ತಿಳಿಯದು ಬದುಕಲಿ.. ಸಿಗದ  ಒಲವ  ಇನ್ನೆಲ್ಲೋ ಕಾಣುವ ಜಿಜ್ಞಾಸೆ ಪ್...

Post has attachment
ನೆನಪೆ ಆಗುವುದಿಲ್ಲ..?!
ಹೆಂಡತಿಯ ಕಾಲಿಗೆ ಶೀತವೆಂದು ಬೇರೆ ಚಪ್ಪಲಿಯ ಕೊಡಿಸುವ ನಮಗೆ ಅಪ್ಪನ ಬರಿಗಾಲಿಗೆ ಚುಚ್ಚಿದ ಮುಳ್ಳು ನೆನಪೆ ಆಗುವುದಿಲ್ಲ... ತಮ್ಮ ವಿವಾಹ ಮಹೋತ್ಸವಕೆ ಚಿನ್ನದ ಉಡುಗರೆ ಹೆಂಡತಿಗೆ ಕೊಡುವಾಗಲೂ, ಅಮ್ಮನ ಕರಿಮಣಿ ಸರ ನೆನಪೆ ಆಗುವುದಿಲ್ಲ... ಸಮಯಕ್ಕೆ ಸರಿಯಾಗಿ ಹೋಗದಿದ್ದರೆ ಹೆಂಡತಿ ಒಬ್ಬಳೆ ಮನೆಯಲಿ ಇರುವಳು ಎಂದು ಮರುಗು...

Post has attachment
**
ಜೊತೆಗಿದ್ದ ಜೀವ ಜೇನು... ನನ್ನೊಳು ಕರಗಿದ ಭಾವ ನೀನು.. ಬರೆಯಲಾರದ ಕವಿತೆ ಮರೆಯಲಾರದ ಚರಿತೆ ಆಗಿ ಹೋದೆಯೇನು..? ...ರಾಮೇನಹಳ್ಳಿ ಜಗನ್ಮೂ ರ್ತಿ 

Post has shared content
Recent heavy rains in northern California have given new life to our reservoirs and painted the surrounding hills a vivid green.  Yesterday I spent time at one of my favorite local haunts in Nicasio, California.  While walking around on the shores of the reservoir overcast skies began to break up creating gorgeous textures and a beautiful reflection. It was a brilliant morning to say the least.

Nikon D800 / Nikkor 16-35 / Single Image

#photography #marincounty #sunrise #marin #naturephotography #nicasioreservoir #landscapephotography #landscape   #nicasio
Photo

Post has attachment

Post has attachment
ಮಡಿಲು...
ಕವಿತೆ ಹುಟ್ಟುವ ಪ್ರತಿ ಸಮಯದಲೂ ನಿನ್ನ ನೆನಪಿನ ಆಣಿಕಲ್ಲ(ಆಲಿಕಲ್ಲು) ಮಳೆ ಜೋರಿದೆ.. ನೆನಪ ಮೆಟ್ಟಿ ಹೊರ ಬರುವ ಪ್ರತಿ ಯತ್ನದಲ್ಲೂ ಸೋಲಿದೆ.. ಸೋಲೋ -ಗೆಲುವೋ ತರ್ಕಗಳಿಗೆ ಇಳಿಯದ ಮನಸಿನ ಜೊತೆಯಾಗಿ ಶರಾಬಿದೆ... ಕಟ್ಟಿಗೆಯೇ ಇರದೆ ಅಲೆಮಾರಿ ಎದೆ ಉರಿಯುತಿದೆ.. ಮತ್ತೆ-ಮತ್ತೆ ಸಾಲು-ಸಾಲು ಕವಿತೆ ಕಟ್ಟುತಿದೆ.. ಅಲಮಾರಿ...

Post has attachment

Post has attachment
(ಅ)ರಾಜಕೀಯ...
ಕೈ-ಕಮಲ ತೃಣಮೂಲ ಹುಡುಕ್ ಬೇಡಿ ಉಳಿದೋರ್ ಮೂಲ ನೂರಾರು ಪಾರ್ಟಿಗಳು ದೇಶದಗಲ ಮೇವು ಮೇದೋರ ಬಾಯಲ್ಲು ವೇದಾಂತ ಹೊರೆ ಹೊತ್ತೋರ ಬಾಯಲ್ಲು ಸಿದ್ಧಾಂತ ಇನ್ನ ಸಿಟಿ ತುಂಬ ಸ್ಟ್ಯಾಚುಗಳದ್ದೇ ರಾದ್ಧಾಂತ.... ಯೂತ್ ಲೀಡರ್ ಎಂಪವರ್ ಮೆಂಟು ಅಪ್ಪ-ಮಕ್ಕಳ ಸೆಂಟಿಮೆಂಟು ಸಂಘದೋರ ಸ್ಟೇಟ್ ಮೆಂಟು ಉಳಿದೋರ ಸೆಟಲ್ ಮೆಂಟು ಅಮ್ಮ ಕೂಡ ಪಿ...

(ಅ)ರಾಜಕೀಯ...
ಕೈ-ಕಮಲ ತೃಣಮೂಲ
ಹುಡುಕ್ ಬೇಡಿ ಉಳಿದೋರ್ ಮೂಲ
ನೂರಾರು ಪಾರ್ಟಿಗಳು ದೇಶದಗಲ
ಮೇವು ಮೇದೋರ ಬಾಯಲ್ಲು ವೇದಾಂತ
ಹೊರೆ ಹೊತ್ತೋರ ಬಾಯಲ್ಲು ಸಿದ್ಧಾಂತ
ಇನ್ನ ಸಿಟಿ ತುಂಬ ಸ್ಟ್ಯಾಚುಗಳದ್ದೇ ರಾದ್ಧಾಂತ....
ಯೂತ್ ಲೀಡರ್ ಎಂಪವರ್ ಮೆಂಟು
ಅಪ್ಪ-ಮಕ್ಕಳ ಸೆಂಟಿಮೆಂಟು
ಸಂಘದೋರ ಸ್ಟೇಟ್ ಮೆಂಟು
ಉಳಿದೋರ ಸೆಟಲ್ ಮೆಂಟು
ಅಮ್ಮ ಕೂಡ ಪಿ.ಎಮ್ ಕ್ಯಾಂಡಿಡೇಟು..!
ಬ್ಯುಸಿ-ಬ್ಯುಸಿ ಮೋದಿ ಡೇಟು
ಒಟ್ಟಾರೆ ಬರ್ಲಿ ಒಳ್ಳೇ ಗವರ್ನಮೆಂಟು...
2ಜಿ ರಾಜ ರಾಬಟ್ ವಾದ್ರಾ
ಡಿ.ಕೆ ಬ್ರದರ್ಸ್ ರೆಡ್ಡಿ ಬ್ರದರ್ಸ್ ಎಟ್ಸಟ್ರಾ..ಎಟ್ಸಟ್ರಾ..
ನೋಡಿ ನೋಡಿ ಸಾಕಾಗೋಗಿ
ಪೊರಕೆ ಹಿಡಿದ ಕೇಜ್ರಿನೂ ಗೆಲ್ಲಿಸಿದ್ದಾಯ್ತು ಡೆಲ್ಲಿಯಲ್ಲಿ
ಅದ್ರೆ..! ಕ್ರೇಜು ನೋಡಿ ಗೆಲ್ಲುಸ್ ಬಿಟ್ರಲ್ಲ ನಮ್ಮ ಮಂಡ್ಯದಲ್ಲಿ..
ವಸಿ ನೋಡ್ಕಂಡು ವತ್ರಣ್ಣ ಒಳ್ಳೇರ್ಗೇ ಇರೋರಲ್ಲಿ..
---ರಾಮೇನಹಳ್ಳಿ ಜಗನ್ನಾಥ
Wait while more posts are being loaded