Profile cover photo
Profile photo
Bidar City News
97 followers -
Tourist City
Tourist City

97 followers
About
Posts

Post has attachment
ಪತ್ರಿಕಾ ಪ್ರಕಟಣೆ
ಚಿಣ್ಣರ ಮನರಂಜಿಸಿದ ವಿಭಾಗ ಮಟ್ಟದ ನಾಟಕೋತ್ಸವ
ಬೀದರ, ಜ.30 (ಕ.ವಾ):-ನಿತ್ಯ ಒಂದಿಲ್ಲೊಂದು ಸಾಂಸ್ಕøತಿಕ ಕಾರ್ಯಕ್ರಮ ನಡೆಯುವ ರಂಗಮಂದಿರದ ಅಂಗಳದಲ್ಲಿ ಜ.30ರಂದು ನಾಟಕೋತ್ಸವ ಅದ್ಧೂರಿಯಾಗಿ ಆರಂಭಗೊಂಡಿತು.
ಮಕ್ಕಳು ಕಿಕ್ಕಿರಿದು ಸೇರಿ, ನಾಟಕ ನೋಡಿ ಸಂಭ್ರಮಿಸಿದರು. ನಾಟಕ ಬಾಳ ಚೆಂದ ಇತ್ತು ರಿ ಎಂದು ಹೇಳುತ್ತ ಮೆಚ್ಚುಗೆ ವ್ಯಕ್ತಪಡಿಸಿದರು.
ಚಿಣ್ಣರ ಚಿಲುಮೆ-ಮಕ್ಕಳ ನಾಟಕ ಯೋಜನೆಯಡಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಕಲಬುರಗಿ ವಿಭಾಗ ಮಟ್ಟದ ನಾಟಕೋತ್ಸವದಲ್ಲಿ ಮೊದಲ ದಿನ ಎರಡು ನಾಟಕಗಳು ಪ್ರದರ್ಶನಗೊಂಡವು.
ಬೆಳಗ್ಗೆ 11 ಗಂಟೆಗೆ ಸಿರಿಗೇರೆಯ ಧಾತ್ರಿ ರಂಗ ಸಂಸ್ಥೆ ವತಿಯಿಂದ “ಗೆಳೆತನ ಹೀಗಿರಬೇಕು” ಎಂಬ ನಾಟಕ ಪ್ರದರ್ಶನಗೊಂಡಿತು. ಮಹಮ್ಮದ ಯೂನಿಸ್ ನಿರ್ದೇಶನದಲ್ಲಿ, ಮಂಜು ಸಿರಿಗೆರೆ ಅವರ ಮಾರ್ಗದರ್ಶನದಲ್ಲಿ ಮಕ್ಕಳು ಉತ್ತಮ ಅಭಿನಯ ನೀಡಿದರು. ಈ ನಾಟಕವನ್ನು ರಕ್ಷಿತಾ ಹೂಲಿ ರಚಿಸಿದ್ದು, ವಿಜಯ ಬಡಿಗೇರ ಕಿ ಬೋರ್ಡ, ಮಹಾಂತೇಶ ಬಾಗಲಕೋಟೆ ತಬಲಾ ಸಾಥ್ ನೀಡಿದರು. ಮಣಿಕಂಠ ಸಿರಿಗೆರೆ ಸಂಗೀತ ಸಹಾಯ ಮಾಡಿದರು.
ಉತ್ತಮ ಸಂದೇಶ: ಒಳ್ಳೆಯ ಗೆಳತನ ಬದುಕಿನ ಹಾದಿಯನ್ನೇ ಬದಲಾಯಿಸುತ್ತದೆ ಎಂಬ ಸಂದೇಶವನ್ನು ಈ ನಾಟಕದಲ್ಲಿತ್ತು. ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಅತ್ಯಂತ ಮೋಜÐವಾಗಿ ಅಭಿನಯಿಸಿ ಎಲ್ಲರ ಮೆಚ್ಚುಗೆ ಗಳಿಸಿದರು. ನಾಟಕವು ಹರಿಯುವ ನೀರಿನಂತೆ. ಚಿಕ್ಕಹಳ್ಳಿಯಲ್ಲಿ ಉಯಿಸಿದ ಈ ಕಲಾ ತಂಡ ಇಂದು ಉತ್ತಮ ಸಂದೇಶದ ನಾಟಕ ಪ್ರದರ್ಶಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಕಲಬುರಗಿ ವಿಭಾಗ ಮಟ್ಟದ ಚಿಣ್ಣರ ಚಿಲುಮೆ ನಾಟಕ ಯೋಜನೆಯ ಸಂಚಾಲಕರಾದ ಪ್ರೋ.ಪ್ರಭಾಕರ ಸಾತಖೇಡ ತಿಳಿಸಿದರು.
ಮತ್ತೊಂದು ನಾಟಕ: ಮಧ್ಯಾಹ್ನ 3 ಗಂಟೆಗೆ ಕಮಲಾಪೂರದ ಅನನ್ಯ ಸ್ನೇಹಾ ಸಂಸ್ಥೆಯಿಂದ “ಸಮಾನತೆಯ ಸಾಧನೆ” ಎಂಬ ನಾಟಕ ಪ್ರದರ್ಶನವಾಯಿತು. ಜಯಶ್ರೀ ಮಾಲಿಪಾಟೀಲ ರಚನೆಯ, ರಾಘವೇಂದ್ರ ಹಳೇಪೇಟೆ ನಿರ್ದೇಶನದ ಈ ನಾಟಕದಲ್ಲಿ ಮಕ್ಕಳು ಮನಸೂರೆಗೊಳ್ಳುವಂತೆ ಪ್ರತಿಭಾ ಪ್ರದರ್ಶನ ಮಾಡಿದರು. ಹೆಣ್ಣು-ಗಂಡು ಎಂದು ಭೇದ-ಭಾವ ಮಾಡದೇ ಹೆಣ್ಣು ಮಕ್ಕಳಿಗೂ ಶಿಕ್ಷಣ ನೀಡಬೇಕು ಎನ್ನುವ ಸಂದೇಶವನ್ನು ಈ ನಾಟಕ ಸಾರಿತು.
ಈ ವೇಳೆ ಕರ್ನಾಟಕ ಜಾನಪದ ಅಕಾಡೆಮಿಯ ರಾಜ್ಯ ಸಮಿತಿ ಸದಸ್ಯರಾದ ವಿಜಯಕುಮಾರ ಸೋನಾರೆ, ಹೊಸ ತಲೆಮಾರಿನ ರಂಗ ಕಲಾವಿದ ಡಿಂಗ್ರಿ ನರೇಶ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಅಧಿಕಾರಿ ರಾಜಶೇಖರ ವಟಗೆ, ಸಾಹಿತಿಗಳಾದ ರಮೇಶ ಬಿರಾದಾರ, ಲೇಖಕಿ ಪಾರ್ವತಿ ಸೋನಾರೆ ಹಾಗೂ ಇತರರು ಇದ್ದರು. ಇಂದು ಪ್ರದರ್ಶನಗೊಂಡ ನಾಟಕಗಳನ್ನು ನಗರದ ಗುರುನಾನಕ್ ಪಬ್ಲಿಕ್ ಶಾಲೆ ಸೇರಿದಂತೆ ಇನ್ನೀತರ ಶಾಲೆಯ ವಿದ್ಯಾರ್ಥಿಗಳು ವೀಕ್ಷಿಸಿದರು.

--
for ads contact :
8748888100 , 9379888100 , 9590929311
www.facebook.com/BidarDistrict #BidarCityNews
PhotoPhotoPhoto
1/30/19
3 Photos - View album

Post has attachment
ಕರ್ನಾಟಕ ರಾಜ್ಯದಲ್ಲಿ ಶಿಕ್ಷಣದ ಪ್ರಮುಖ ಭಾಗವಾಗಿರುವ ಸರ್ಕಾರಿ ಹಾಸ್ಟೆಲ್‍ಗಳ ಸ್ಥಿತಿ ತೀರಾ ಶೋಚನೀಯವಾಗಿದೆ.ನಮ್ಮ ಹಿರಿಯರ ಸಾಮಾಜಿಕ ನ್ಯಾಯದ ಬದ್ದತೆ ಮತ್ತು ದೇಶದ ಭವಿಷತ್ತಿಗೆ ವಿದ್ಯಾರ್ಥಿ ಅವಶ್ಯಕತೆ ಅರಿತು ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ, ಅನ್ನ-ಅಕ್ಷರಗಳ ದಾಸೋಹಗಳಾಗಲೇಂದು ಪ್ರಾರಂಭಿಸಿದ ಹಾಸ್ಟೆಲ್‍ಗಳು ತೀವ್ರ ನೀಗಾ ಘಟಕಗಳನ್ನು ಸೇರಿ ದಶಕಗಳೆ ಕಳೆದಿವೆ, ರಾಜ್ಯದ ವಿದ್ಯಾರ್ಥಿಗಳಿಗೆ ಇಂದು ಶಿಕ್ಷಣದ ಗುಣಮಟ್ಟ, ಶಿಕ್ಷಣಕ್ಕೆ ಪ್ರೋತ್ಸಾಹದ ಬಗ್ಗೆ ನಂಬಿಕೆ ಇಲ್ಲದಂತಾಗಿದೆ. ಯಾವ ಸರ್ಕಾರ ವಿದ್ಯಾರ್ಥಿಗಳಿಗೆ ನೀಡಬೇಕಾದ ಸೌಲಭ್ಯಗಳ ಬಗ್ಗೆ ಚಿಂತಿಸಿ ಹೊಸ ಯೋಜನೆ ರೂಪಿಸಬೇಕು. ಅದನ್ನೆಲ್ಲ ಮರೆತು ಕೇವಲ ರಾಜಕೀಯ ಮಾಡುತ್ತಾ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಪ್ರಮುಖವಾಗಿ ರಾಜ್ಯದ ಎಸ್.ಸಿ/ಎಸ್.ಟಿ/ಓಬಿಸಿ ಸೇರಿದಂತೆ ಹಾಸ್ಟೆಲ್‍ಗಳ ಪರಿಸ್ಥಿತಿ ದುರಂತದ ಗೂಡಾಗಿದೆ ವಿದ್ಯಾರ್ಥಿಗಳಿಗೆ ಸಿಗಬೇಕಾದ ಸವಲತ್ತುಗಳು ಸಿಗದೆ ಒದ್ದಾಡುವಂತಾಗಿದೆ. ಶಿಕ್ಷಣ ಕ್ಷೇತ್ರದ ಬಗ್ಗೆ ಒಂದಿಷ್ಟು ಆಸಕ್ತಿ ವಹಿಸಿದ ರಾಜ್ಯ ಸರ್ಕಾರದ ನಡೆಯನ್ನು ಎಬಿವಿಪಿ ತೀವ್ರವಾಗಿ ಖಂಡಿಸುತ್ತದೆ.ಇದಕ್ಕೆ ಶಾಶ್ವತ ಪರಿಹಾರವನ್ನು ಒದಗಿಸಲು ರಾಜ್ಯ ಸರ್ಕಾರಕ್ಕೆ ಎಬಿವಿಪಿ ಆಗ್ರಹಿಸುತ್ತದೆ.
ಪತ್ರಿಕೆಯೊಂದರ ಇತ್ತೀಚಿನ ವರದಿ ರಾಜ್ಯದ ಹಾಸ್ಟೆಲ್‍ಗಳ ನಿಜ ಮುಖವಾಡವನ್ನು ಬಯಲು ಮಾಡಿದೆ. ಮೂಲಭೂತ ಸೌಕರ್ಯಗಳಿಲ್ಲದೆ, ಕೆಲವೊಂದು ಕಡೆಗಳಲ್ಲಿ ಸರಿಯಾದ ಕಟ್ಟಡಗಳೇ ಇಲ್ಲದೇ ವಿದ್ಯಾರ್ಥಿಗಳು ಹಾಸ್ಟೆಲ್‍ನಲ್ಲಿ ಉಳಿದುಕೊಂಡು ವ್ಯಾಸಂಗ ಮಾಡುತ್ತಿದ್ದಾರೆ. ಕೋಟ್ಯಂತರ ರೂಪಾಯಿಗಳನ್ನುಖರ್ಚು ಮಾಡಿ ಹಾಸ್ಟೆಲ್‍ವಾಸಿ ವಿದ್ಯಾರ್ಥಿಗಳಿಗೆ ಊಟನೀಡಬೇಕೆಂದು ಯೋಜನೆ ಜಾರಿಯಲ್ಲಿದ್ದರೂ, ಅನೇಕ ಹಾಸ್ಟೆಲ್‍ಗಳ ವಿದ್ಯಾರ್ಥಿಗಳು ಸರಿಯಾಗಿ ಊಟವಿಲ್ಲದೆ ಒದ್ದಾಡುತ್ತಿದ್ದಾರೆ.ಪೌಷ್ಟಿಕಾಂಶದ ಆಹಾರವನ್ನು ಕನಸು ಕಾಣುವಂತಾಗಿದೆ. ಕುಡಿಯಲು ನೀರಿಲ್ಲದೆಯು ಅನೇಕ ಹಾಸ್ಟೆಲ್‍ಗಳು ಇಂದು ನಡೆಯುತ್ತಿರುವುದು ಅತ್ಯಂತ ದುಃಖಕರ. ವಿದ್ಯಾರ್ಥಿಗಳಿಗಾಗಿ ಹಾಸಿಗೆ ದಿಂಬು ಖರೀದಿಸಿದೆ. ಕಳೆದ ರಾಜ್ಯ ಸರ್ಕಾರÀ ಇಲ್ಲಿಯವರೆಗೂ ಅದನ್ನೆಲ್ಲ ವಿದ್ಯಾರ್ಥಿಗಳಿಗೆ ತಲುಪಿಸಿ ಇದೆಯೋ ಇಲ್ಲವೋ ಎಂಬಂತೆ ಅನೇಕ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಅದನ್ನು ನೋಡುವ ಭಾಗ್ಯ ದೊರಕಲಿಲ್ಲ. ಹಾಸ್ಟೆಲ್ ನಡೆಸುವ ವಾರ್ಡನ್‍ಗಳಿಲ್ಲದೆ, ವಿದ್ಯಾರ್ಥಿನಿಯರ ಹಾಸ್ಟೆಲ್‍ಗಳಲ್ಲಿ ಪುರುಷ ವಾರ್ಡನ್‍ಗಳ ನಿರ್ವಹಣೆ ನೋಡುತ್ತಿದ್ದರೆ, ಸರ್ಕಾರಿ ಹಾಸ್ಟೆಲ್‍ಗಳಲ್ಲಿರುವ ವಿದ್ಯಾರ್ಥಿಗಳ ಬಗ್ಗೆ ಸರ್ಕಾರಕ್ಕಿರುವ ನಿರ್ಲಕ್ಷ್ಯ ಅರ್ಥವಾಗುತ್ತದೆ.ಹಾಸ್ಟೆಲ್‍ಗಳಲ್ಲಿ ಸ್ವಚ್ಛತೆಯು ದೂರದ ಮಾತು ಶೌಚಾಲಯಗಳಿಲ್ಲದೆ ಗುಣಮಟ್ಟದ ಆಹಾರ, ಕುಡಿಯಲು ನೀರಿಲ್ಲದೆ, ರಾಶಿ ವಿದ್ಯಾರ್ಥಿಗಳನ್ನು ಒಂದೆಡೆ ಕೂಡಿ ಹಾಕಿದ್ದ ರೀತಿ ಇದು ರಾಜ್ಯದ ಹಾಸ್ಟೆಲ್‍ಗಳು ಕೇಳುವವರೇ ಇಲ್ಲದೆ ಕಂಗೆಟ್ಟಿವೆ. ರಾಜ್ಯದ ಹಾಸ್ಟೆಲ್‍ಗಳುಶುದ್ಧ-ಸ್ವಚ್ಛ-ಸ್ವಾಸ್ಥ್ಯ ಹಾಸ್ಟೆಲ್‍ಗಳಾಗಬೇಕು. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗಿ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಕೂಡಲೇ ಸರ್ಕಾರ ಎಚ್ಚೆತ್ತು ರಾಜ್ಯದ ಹಾಸ್ಟೆಲ್‍ಗಳ ಸುಧಾರಣೆಗೆ ಗಂಭೀರ ಕ್ರಮ ಜರುಗಿಸಬೇಕೆಂದು ಅಭಾವಿಪ ರಾಜ್ಯ ಸರ್ಕಾರಕ್ಕೆ ಅನಿಸುತ್ತದೆ.
ಪ್ರಮುಖ ಬೇಡಿಕೆಗಳು:
1. ಬೀದರ ಸೇರಿದಂತೆ ರಾಜ್ಯದಲ್ಲಿರುವಂತಹ ಎಲ್ಲಾ ಸರ್ಕಾರಿ ಎಸ್.ಸಿ/ಎಸ್.ಟಿ/ಓ.ಬಿ.ಸಿ/ಅಲ್ಪಸಂಖ್ಯಾತ ಹಾಸ್ಟೆಲ್‍ಗಳಿಗೆ ಸ್ವಂತ ಕಟ್ಟಡಗಳನ್ನುತಕ್ಷಣವೇ ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು.
2. ವಿದ್ಯಾರ್ಥಿಗಳ ಆಹಾರ ವೆಚ್ಚವನ್ನು ತಿಂಗಳಿಗೆ ಸದ್ಯ ಇರುವ 1400 ರೂ.ಗಳನ್ನು 2000 ರೂಗಳಿಗೆ ಏರಿಸಬೇಕು.
3. ರಾಜ್ಯದಲ್ಲಿ ಈಗಿರುವ ಹಾಸ್ಟೆಲ್‍ಗಳ ಸಂಖ್ಯೆಯು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕಡಿಮೆ ಇರುವ ಕಾರಣ ಈವರ್ಷದಿಂದಲೇಹೆಚ್ಚಿನಹಾಸ್ಟೆಲ್‍ಗಳನ್ನುಪ್ರಾರಂಭಿಸಬೇಕು.
4. ನಿಲಯಪಾಲಕರು ಹಾಗೂ ಸಿಬ್ಬಂದಿಯ ಕೊರತೆಯು ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಸರ್ವೇ ಸಾಮಾನ್ಯವಾಗಿದೆ.ಆದಕಾರಣ ನಿಲಯಪಾಲಕರು ಹಾಗೂ ಸಿಬ್ಬಂದಿಯ ನೇಮಕಾತಿಯನ್ನು ಮಾಡಬೇಕು.
5. ಹಾಸ್ಟೆಲ್‍ಗಳಲ್ಲಿ ಮೂಲಭೂತ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ಪೌಷ್ಠಿಕ ಆಹಾರವನ್ನು ಒದಗಿಸಿ ಹಾಸ್ಟೆಲ್‍ಸುತ್ತಮುತ್ತಲೂ ಸ್ವಚ್ಛತೆಯನ್ನು ಕಾಪಾಡಬೇಕು.
6. ಕೆಲವೇ ಹಾಸ್ಟೆಲ್‍ಗಳಿಗೆ ಹಾಸಿಗೆ, ಹೊದಿಕೆ ಮತ್ತು ದಿಂಬುಗಳನ್ನು ಒದಗಿಸಿದ್ದು, ತಕ್ಷಣವೇ ಎಲ್ಲಾ ಹಾಸ್ಟೆಲ್‍ಗಳಿಗೆಇವುಗಳ ವ್ಯವಸ್ಥೆಯನ್ನು ಮಾಡಬೇಕು.
7. ರಾಜ್ಯದ ಹಾಸ್ಟೆಲ್‍ಗಳಲ್ಲಿ ಗ್ರಂಥಾಲಯಗಳು ಕೇವಲ ಗೋಡೆ ಬರಹಗಳಾಗಿದೆ. ಆದ್ದರಿಂದ ತಕ್ಷಣ ಹಾಸ್ಟೆಲ್‍ಗಳಿಗೆಬೇಕಾಗಿರುವ ಪುಸ್ತಕಗಳನ್ನು ಒದಗಿಸಬೇಕು.
8. ವಿದ್ಯಾರ್ಥಿ ನಿಲಯಗಳಿಗೆ ಕಡ್ಡಾಯವಾಗಿ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಬೇಕು. ವಿಶೇಷವಾಗಿ ಬಾಲಕಿಯರಹಾಸ್ಟೆಲ್‍ಗಳಿಗೆ ತಕ್ಷಣವೇ ಅಳವಡಿಸಬೇಕು.
9. ಹಾಸ್ಟೆಲ್ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿರುವಂತೆ ಮಾಡಬೇಕು. ಆಯ್ಕೆ ಆಗದೇ ಇರುವ ಎಲ್ಲಾ ವಿದ್ಯಾರ್ಥಿಗಳಿಗೂಕಾರಣವನ್ನು ಪತ್ರದ ಮೂಲಕ ಎಲ್ಲರಿಗೂ ತಲುಪಿಸಬೇಕು.
10. ಹಾಸ್ಟೆಲ್ ಆಯ್ಕೆ ಬಯಸಿ ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ವ್ಯವಸ್ಥೆ ಮಾಡಬೇಕು. ಇದು ಆಗದೆಇದ್ದಲ್ಲಿ ಉಳಿದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳಿಗೆ 2000 ರೂ.ಗಳಂತೆ ವರ್ಷಕ್ಕೆ 10 ತಿಂಗಳು ಸಹಾಯಧನನೀಡಬೇಕು.
11. ಈಗಾಗಲೇ ಸ್ವಂತ ಕಟ್ಟಡಗಳನ್ನು ಹೊಂದಿರುವ ಹಾಸ್ಟೆಲ್‍ಗಳಿಗೆ ಸರಿಯಾದ ಶೌಚಾಲಯ ಹಾಗೂ ಸ್ನಾನಗೃಹದಕೊರತೆ ಇದ್ದು, ತಕ್ಷಣ ಇವುಗಳನ್ನು ನಿರ್ಮಿಸಬೇಕು.
12. ಎಲ್ಲಾ ರಿತಿಯ ವಿದ್ಯಾರ್ಥಿ ವೇತನ (ಫೀ ಕನ್ಸಿಯಸನ್ ಹಾಗು ಫುಡ್ ಅಕುಮಡೇಸನ್) ನಿಡುವಲ್ಲಿ ಸಾಕಷ್ಟು ಭ್ರಷ್ಟಚಾರ್ಯ ನಡೆಯುತಿದ್ದು ಹಾಗಾಗಿ ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಎಲ್ಲಾ ರಿತಿಯ ವಿದ್ಯಾರ್ಥಿ ವೇತನ ನಿಡುವಂತಾಗಬೇಕು
13. ಹಾಸ್ಟೇಲಗಳಲ್ಲಿ ಇತ್ತಿಚಿಗೆ ಅತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತಿದ್ದು ಅಯಾ ಜಿಲ್ಲೆಯ ಜಿಲ್ಲಾಡಳಿತ ಇದನ್ನು ಗಂಬಿರವಾಗಿ ಪರಗಣಿಸಿ ಸೂಕ್ತ ತನಿಖೆ ನಡೆಸುವದರೊಂದಿಗೆ ಎಲ್ಲಾ ಹಾಸ್ಟೆಲಗಳಲ್ಲಿ ಜಾಗೃತಿ ಕಾರ್ಯಕ್ರಮಗಳು ಮಾಡುವಂತಾಗಬೇಕು.
ಈ ಸಂದರ್ಭದಲ್ಲಿ ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ರೇವಣಸಿದ್ದ ಜಾಡರ ಮಾತನಾಡಿ ಎಲ್ಲಾ ರಿತಿಯ ವಿದ್ಯಾರ್ಥಿ ವೇತನ (ಫೀ ಕನ್ಸಿಯಸನ್ ಹಾಗು ಫುಡ್ ಅಕುಮಡೇಸನ್) ನಿಡುವಲ್ಲಿ ಸಾಕಷ್ಟು ಭ್ರಷ್ಟಚಾರ್ಯ ನಡೆಯುತಿದ್ದು ಹಾಗಾಗಿ ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಎಲ್ಲಾ ರಿತಿಯ ವಿದ್ಯಾರ್ಥಿ ವೇತನ ನಿಡುವಂತಾಗಬೇಕು ಹಾಸ್ಟೇಲಗಳಲ್ಲಿ ಇತ್ತಿಚಿಗೆ ಅತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತಿದ್ದು ಅಯಾ ಜಿಲ್ಲೆಯ ಜಿಲ್ಲಾಡಳಿತ ಇದನ್ನು ಗಂಬಿರವಾಗಿ ಪರಗಣಿಸಿ ಸೂಕ್ತ ತನಿಖೆ ನಡೆಸುವದರೊಂದಿಗೆ ಎಲ್ಲಾ ಹಾಸ್ಟೆಲಗಳಲ್ಲಿ ಜಾಗೃತಿ ಕಾರ್ಯಕ್ರಮಗಳು ಮಾಡುವಂತಾಗಬೇಕು. ಇತ್ತಿಚಿಗೆ ಎಬಿವಿಪಿ ವತಿಯಿಂದ ಜಿಲ್ಲೇಯ ಹಾಸ್ಟೆಲಗಳ ಸಮಿಕ್ಷೆ ಕೈಗೊಳ್ಳಲಾಗಿತ್ತು ವ್ಯವಸ್ಥೆ ಸರಿಪಡಿಸುವಂತೆ ಮಾನ್ಯ ಜಿಲ್ಲಾ ಪಂಚಾಯತ ಮುಖ್ಯನಿರ್ವಾಹಣಾಧಿಕಾರಿ ಮಾಹಂತೇಶ ಬಿಳಗಿ ಅವರಿಗು ಮನವಿ ಸಲ್ಲಿಸಲಾಗಿತ್ತು ಅದರೆ ಇಲ್ಲಿಯವರೇಗು ಯಾವುದೆ ಪ್ರಯೊಜನವಾಗಿಲ್ಲಾ ಇದನ್ನು ಗಂಬಿರವಾಗಿ ಪರಗಣಿಸಿ ವಿದ್ಯಾರ್ಥಿಗಳಿಗೆ ನ್ಯಾಯ ವದಗಿಸುವಂತಾಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬೃಹತ ಪ್ರತಿಭಟನೆ ಕೈಗೊಳ್ಳಲಾಗುವದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಧನಜಯಾ , ರಾಜ್ಯ ಕಾರ್ಯಕಾರಣಿ ಸದಸ್ಯ ಅನಂದ ಡೋಬಾಳಿ , ಎಬಿವಿಪಿ ನಗರ ಉಪಧ್ಯಾಕ್ಷ ಚನ್ನಬಸಪ್ಪಾ ಬೀರಾದರ ವಿಭಾಗ ವಿದ್ಯಾರ್ಥಿನಿ ಪ್ರಮುಖ ಆಶಾರಾಣಿ ನಿರ್ಣೇಕರ , ಅರವಿಂದ ಸುಂದಳಕರ. ಸಾಯಿ ಮೂಲಗೆ , ಉಮೇಶ ಲಾಡಗೇರಿ,ಸಚಿನ ಸಜ್ಜನಶೇಟ್ಟಿ ನಿಖೀಲ ರೈಡರ, ಪವನ ,ಸಿದ್ದು ,ಅಕಾಶ ಮಾಹದೇವಿ ,ಸೂಜಾತ , ಲಕ್ಷಿಮಿ , ಆರುತಿ ಸೆರಿದಂತೆ ಲಕ್ಷ್ನಿಬಾಯಿ ಕಮಠಾಣೆ ಸೆರಿದಂತೆ ವಿವಿಧ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದರು
#BidarCityNews
#BidarDistrict
Photo
Photo
1/30/19
2 Photos - View album

www.facebook.com/BidarDistrict
PhotoPhotoPhoto
1/30/19
3 Photos - View album

Post has attachment
ಜಾನಪದ ಸಂಭ್ರಮದಲ್ಲಿ ತೇಲಿ ಹೋದ ಕಲಾಭಿಮಾನಿಗಳು
ಬೀದರ: ಭಾನುವಾರ ನಗರದ ರಂಗಮಂದಿರದಲ್ಲಿ ನಾಟ್ಯಶ್ರೀ ನೃತ್ಯಾಲಯದಿಂದ ಜರುಗಿದ ಕಲಾ ಸಂಭ್ರಮೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭರತ ನಾಟ್ಯದೊಂದಿಗೆ ಜಾನಪದ ಸಂಭ್ರಮ ಜರುಗಿತು.
ಅಂದು ಬೆಳಿಗ್ಗೆ ಭರತ ನಾಟ್ಯದೊಂದಿಗೆ ಆರಂಭವಾದ ಕಲಾ ಸಂಭ್ರಮವು ಸಂಜೆ ಜಾನಪದ ನೃತ್ಯದೊಂದಿಗೆ ಕೊನೆಗೊಂಡಿತು.
ನಾಡಿನ ದಕ್ಷಿಣ ಹಾಗೂ ಉತ್ತರದ ಕಲಾವಂತಿಕೆ ಒಂದೆ ವೇದಿಕೆಯಲ್ಲಿ ನಡೆದು ಏಕಿಕರಣ ಸಾರ್ಥಕಗೊಳಿಸಿತು. ಭರತ ನಾಟ್ಯ ಗುರುಗಳು ಹಾಗೂ ಜಾನಪದ ವಿದ್ವಾಂಸರು ಒಂದೇ ವೇದಿಕೆಯಲ್ಲಿ ಸೇರಿ ಸಾಂಸ್ಕøತಿಕ ವಿನಿಮಯ ಮಾಡಿರುವುದು ವಿಶೇಷವಾಗಿತ್ತು.
ಉದ್ಘಾಟನಾ ಸಮಾರಂಭದ ಬಳಿಕ ವಿಶೇಷ ಉಪನ್ಯಾಸ, ತದನಂತರ ಸಂಗೀತ ಲಹರಿ ಮೂಡಿಬಂತು. ಮೊದಲಿಗೆ ಶಂಭುಲಿಂಗ ವಾಲ್ದೊಡ್ಡಿ ಅವರ ‘ಎದೆ ತುಂಬಿ ಹಾಡಿದೆನೋ ಅಂದು ನಾನು’ ಎಂಬ ಜಿ.ಎಸ್ ಶಿವರುದ್ರಪ್ಪ ಅವರ ಭಾವಗೀತೆ ನೆರೆದವರ ಮನ ಕರಗುವಂತಿತ್ತು. ಜಾನಪದ ಕಲಾವಿದೆ ಮಹೇಶ್ವರಿ ಪಾಂಚಾಳ ಅವರು ರಥಸಪ್ತಮಿ ಚಿತ್ರದ ‘ಶಿಲೆಗಳು ಸಂಗೀತವಾ ಹಾಡಿದೆ’ ಹಾಗೂ ‘ಕನ್ನಡ ನಾಡಿನ ಜೀವನದಿ’ ಎಂಬ ಹಾಡುಗಳು ನೆರೆದವರಲ್ಲಿ ನಾಡಪ್ರೇಮ ನೆನೆಪಿಸುವಂತಿತ್ತು. ಬಾನುಪ್ರಿಯಾ ಅರಳಿ ಅವರು ಕುವೆಂಪು ರಚಿಸಿದ ಭಾವಗೀತೆ ‘ಕುಹು ಕುಹು ಕೋಗಿಲೆ’ ಹಾಗೂ ‘ದೂರ ಬಹು ದೂರ’ ಎಂಬ ಹಾಡುಗಳು ಮಂತ್ರಮುಗ್ದವನ್ನಾಗಿಸಿದವು. ಶೈಲಜಾ ದಿವಾಕರ ಹಾಗೂ ಭಾಗ್ಯ ಗುರುಮೂರ್ತಿ ಅವರು ಹಾಡಿದ ‘ಮಾಯದಂಥ ಮಳೆ ಮಂತಣ್ಣ’ ಹಾಗೂ ಪ್ರವಿಣಕುಮಾರ ತಂಡದವರಿಂದ ಮೂಡಿಬಂದ ವಚನ ನೃತ್ಯ ಕೇಳುಗರ ಮನ ಸೂರೆಗೊಂಡವು.
ಕರ್ನಟಕ ಕಲಾಶ್ರೀ ವಿದ್ವಾನ ಚಂದ್ರಶೇಖರ ನಾವಡ ಅವರ ಉಪನ್ಯಾಸದ ಬಳಿಕೆ ಸುಮಾರು ಎರಡು ಗಂಟೆಗಳ ಕಾಲ ನಿರಂತರವಾಗಿ ಜಾನಪದ ಸಂಭ್ರಮ ಜರುಗಿತು.
ಕು.ಶಾಂಭವಿ ಹಾಗೂ ತಂಡದವರಿಂದ ಹಾಗೂ ನಾಟ್ಯಶ್ರೀ ನೃತ್ಯಾಲಯದಿಂದ ರೂಪಕಗಳಾದ ಭೂಕೈಲಾಸ, ಜಂಬದ ಮುದುಕಿ, ಸಮೂಹ ನೃತ್ಯಗಳಾದ ವಚನ ನೃತ್ಯ, ದೇಶ ಭಕ್ತಿಗೀತೆ, ಮಕ್ಕಳ ಗೀತೆ, ಪರಿಸರ ಗೀತೆ. ಜಾನಪದ ನೃತ್ಯಗಳಾದ ರಾಜಸ್ಥಾನ ನೃತ್ಯ, ಮರಾಠಿ ನೃತ್ಯ, ಕೋಲಾಟ ಇತ್ಯಾದಿ ಜಾನಪದ ನೃತ್ಯಗಳು ಜರುಗಿಸಿದವು. ಒಟ್ಟಾರೆ ಸುಮಾರು 95 ಕಲಾಕುಡಿಗಳು ಭಾಗವಹಿಸಿ ನೋಡುಗರ ಹುಬ್ಬೇರಿಸುವಂತೆ ಮಾಡಿತು. ಇದೇ ವೇಳೆ ನಾಟ್ಯಶ್ರೀ ನೃತ್ಯಾಲಯದ ನಿರ್ದೇಶಕಿ ರಾಣಿ ಸತ್ಯಮೂರ್ತಿ ನೇತೃತ್ವದಲ್ಲಿ ಪಾಲಕರು ‘ಶಿವನು ಭಿಕ್ಷೆಕೆ ಬಂದು ನೋಡುಬಾರೆ’ ಎಂಬ ಸಾಮೂಹಿಕ ನೃತ್ಯದೊಂದಿಗೆ ಕಲಾ ಸಂಭ್ರಮೋತ್ಸವಕ್ಕೆ ಮುಕ್ತಾಯಗೊಂಡಿತು.

--
for ads contact
8748888100, 9379888100, 9590929311
#BidarDistrict
#BidarCITYnews
PhotoPhotoPhotoPhotoPhoto
1/30/19
5 Photos - View album

Post has attachment
ಪತ್ರಿಕಾ ಪ್ರಕಟಣೆ
ಸಾಂಸ್ಕøತಿಕ ಉತ್ಸವದಲ್ಲಿ ಮಹಿಳೆಯರ ಪ್ರತಿಭೆ ಅನಾವರಣ
ಬೀದರ, ಜ.28 (ಕ.ವಾ):- ರಂಗೋಲಿಯಲ್ಲಿ ಮೂಡಿ ಬಂದ ಬಣ್ಣ-ಬಣ್ಣದ ಚಿತ್ರಗಳು, ಕೈಯಿಂದ ತಯಾರಿಸಿದ ವೈವಿದ್ಯಮಯ ಆಟಿಕೆಗಳು, ಕಿವಿಗೆ ಮುದ ನೀಡುವ ಜಾನಪದ ಗೀತೆಗಳು, ಬಾಯಲ್ಲಿ ನೀರು ತರಿಸುವ ಖಾದ್ಯ ಪದಾರ್ಥಗಳು, ಜೀವನ ಪದ್ಧತಿ ತಿಳಿಸಿಕೊಡುವ ರೂಪಕಗಳು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಜ.28ರಂದು ನಗರದ ಜಿಲ್ಲಾ ರಂಗಮಂದಿರದಲ್ಲಿ ನಡೆದ ಮಹಿಳಾ ಸಾಂಸ್ಕøತಿಕ ಉತ್ಸವದಲ್ಲಿ ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ್ದ ಮಹಿಳೆಯರು ವೈವಿದ್ಯಮಯ ಕಲಾ ಪ್ರದರ್ಶನಗಳನ್ನು ನೀಡುವ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿದರು.
ರೇಖಾ ಸೌದಿ ಅವರ ಜಾನಪದ ಗಾಯನದ ಮೂಲಕ ಸಾಂಸ್ಕøತಿಕ ಕಾರ್ಯಕ್ರಮಗಳು ಆರಂಭಗೊಂಡವು. ಅವರ ಸುಮಧುರ ಕಂಠದಿಂದ ಹೊರಬಂದ ‘ಸೋಜುಗದ ಸೂಜಿಮಲ್ಲಿಗೆ, ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡುಮಲ್ಲಿಗೆ’, ‘ಯಾವ ದೇಶದ ರಮಣ ಬಂಧು ಏನ ಮೋಸವ ಮಾಡಿದೆ’, ‘ನಿಂಬಿಯಾ ಬನಾದ ಮ್ಯಾಗಳ ಚಂದ್ರಮಾ ಚಂಡಾಡಿದ’, ಕೋಡಗನಗ ಕೋಳಿ ನುಂಗಿತ್ತಾ’ ಎನ್ನುವ ಹಾಡುಗಳು ಸಭಿಕರ ಮನ ರಂಜಿಸಿದವು.
‘ಗಮಗಮ ಗಮಡಿಸ್ತಾವ ಮಲ್ಲಿಗಿ’ ಎನ್ನುವ ಸುಗಮ ಸಂಗೀತ ಗಾಯನ ಮಾಡಿದ ಕವಿತಾ ಮಠಪತಿ ಅವರು ಜನರನ್ನು ಸಂಗೀತ ಲೋಕದಲ್ಲಿ ತೇಲಾಡಿಸಿದರು. ವಿದ್ಯಾವತಿ ಪಾಂಚಾಳ ಅವರ ಶಾಸ್ತ್ರೀಯ ಸಂಗೀತ ಸಂಗೀತ ಪ್ರೀಯರನ್ನು ತಲೆದೂಗಿಸುವಂತಿತ್ತು. ಬೀದರ್‍ನ ವಚನ ಕಲಾ ಸಂಗಮದ ಜಯಶ್ರೀ ಸುಕಾಲೆ ಅವರು ರಚಿಸಿ, ನಿರ್ದೇಶಿಸಿರುವ ‘ಹಸುನಾದ ಬದುಕು ಕಲಸ್ಯಾರ’ ಎನ್ನುವ ರೂಪಕವು ಬೊಂತಾದೇವಿ, ಮಾದರ ಕೇತಯ್ಯ, ಹೂಗಾರ ಮಾದಯ್ಯ, ಬಹುರೂಪಿ ಚೌಡಯ್ಯ ಹೀಗೆ ನಾನಾ ವಚನಕಾರರ ಬದುಕನ್ನು ತಿಳಿಸಿಕೊಡುವಲ್ಲಿ ಯಶಸ್ವಿಯಾಯಿತು.
ಗೀತಾ ಪಾಟೀಲ್ ತಂಡ ಸುಗಮ ಸಂಗೀತ, ಪೂಜಾ ಚಿಮಕೋಡ ತಂಡ ವಚನ ಗಾಯನ, ಪವಿತ್ರಾ ವಿಶ್ವನಾಥ ತಂಡ ಶಾಸ್ತ್ರೀಯ ಸಂಗೀತ, ಸಂಗಮ್ಮ ತಂಡದ ಕಲಾವಿದರು ಸಂಪ್ರದಾಯಿಕ ಪದಗಳನ್ನು ಹಾಡಿದರು. ಸುವರ್ಣಾ ಎಂ.ವಾಲಿ ತಂಡ ಡೊಳ್ಳು ಕುಣಿತ, ಲಕ್ಷ್ಮೀಬಾಯಿ ತಂಡದ ಲಮಾಣಿ ನೃತ್ಯ, ಬಾಲಮ್ಮ ತಂಡ ಕೋಲಾಟ, ಪದ್ಮಾವತಿ ತಂಡ ವೀರಗಾಸೆ ಹಾಗೂ ಪ್ರಯಾಗಬಾಯಿ ಅವರ ತಂಡವು ಗಂಗಾಳ ಪದಗಳನ್ನು ಹಾಡುವ ಮೂಲಕ ಗ್ರಾಮೀಣ ಸೊಗಡನ್ನು ಕಣ್ಣೆದುರು ತಂದರು.
ಜಗದೇವಿ ತಂಡ ಕುಟ್ಟುವ ಪದಗಳು, ಸುನೀತಾ ತಂಡ ಬೀಸುವ ಪದಗಳು, ಮೀರಾ ತಂಡ ತೊಟ್ಟಿಲು ಪದಗಳು, ರಾಣಿ ಸತ್ಯಮೂರ್ತಿ ತಂಡ ಶಾಸ್ತ್ರೀಯ ನೃತ್ಯ, ಉಷಾ ಪ್ರಭಾಕರ ತಂಡ ಜಾನಪದ ನೃತ್ಯ, ವಿದ್ಯಾವತಿ ಬಲ್ಲೂರ ತಂಡ ಸಂಪ್ರಾದಾಯಕ ಪದಗಳು ಹಾಗೂ ಎಸ್ತರ ಅವರ ತಂಡ ಪ್ರದರ್ಶಿಸಿದ ಜಾನಪದ ಗಾಯನ ಮಹಿಳೆಯರೂ ಯಾರಿಗೂ ಕಮ್ಮಿಯಿಲ್ಲ ಎನ್ನುವಂತಿತ್ತು.
ಬಳಿಕ ಸ್ತ್ರೀಯರ ಸಮಸ್ಯೆಗಳ ಕುರಿತು ನಡೆದ ಕವಿಗೋಷ್ಠಿಯಲ್ಲಿ ಹಿರಿಯ ಸಾಹಿತಿ ರಜಿಯಾ ಬಳಬಟ್ಟಿ ಅವರು ವಿಶೇಷ ಉಪನ್ಯಾಸ ನೀಡಿದರು. ಪುಷ್ಪಾ ಕನಕ, ಸುನೀತಾ ಬಿರಾದಾರ, ಸಾರಿಕಾ ಗಂಗಾ, ಮೇನಕಾ ಪಾಟೀಲ್, ರೇಣುಕಾ ಮಠ, ಸುಮನ್ ಹೆಬ್ಬಾಳಕರ್, ಸಾಧನಾ ರಂಜೋಳಕರ್, ಕಾವ್ಯನಂದಿನಿ ಸಿಂಧೆ, ಪುಣ್ಯವತಿ ವಿಸಾಜಿ, ಚನ್ನಮ್ಮ ವಲ್ಲೆಪೂರೆ, ಕೃಷ್ಣಾಬಾಯಿ ಪವಾರ, ಕಲ್ಪನಾ ಶೀಲವಂತ, ಶ್ರೀದೇವಿ ಹೂಗಾರ ಅವರು ಸ್ತ್ರೀಯರ ಕುರಿತಾದ ಕವನಗಳನ್ನು ವಾಚಿಸಿದರು.
ಮಹಿಳೆಯರ ಪ್ರತಿಭೆಗೆ ಪ್ರೋತ್ಸಾಹ ಸಿಗಲಿ: ಶಾಲಿನಿರಾಜು ಚಿಂತಾಮಣಿ
ಬೀದರ, ಜ.28 (ಕ.ವಾ):- ಎಲ್ಲಾ ಹೆಣ್ಣು ಮಕ್ಕಳಲ್ಲಿ ಯಾವುದಾದರೊಂದು ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ ಎಂದು ಎಂದು ನಗರಸಭೆ ಅಧ್ಯಕ್ಷರಾದ ಶಾಲಿನಿರಾಜು ಚಿಂತಾಮಣಿ ಅವರು ತಿಳಿಸಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ಜ.28ರಂದು ನಗರದ ಜಿಲ್ಲಾ ರಂಗಮಂದಿರದಲ್ಲಿ ನಡೆದ ಮಹಿಳಾ ಸಾಂಸ್ಕøತಿಕ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲಿಯೂ ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮಹಿಳೆ ಅಬಲೆಯಲ್ಲ ಸಬಲೆ, ಎಲ್ಲಾ ರಂಗಗಳಲ್ಲಿ ಕೆಲಸ ಮಾಡಬಲ್ಲೆ ಎನ್ನುವದನ್ನು ಹಲವಾರು ಮಹಿಳೆಯರು ಸಾಧಿಸಿ ತೋರಿಸಿದ್ದಾರೆ. ಹಾಗಾಗಿ ಮಹಿಳೆಯರು ಕೇವಲ ಮನೆಗೆಲಸಗಳಿಗೆ ಮಾತ್ರ ಸೀಮಿತವಾಗದೇ ಸಾಹಿತ್ಯ, ಸಂಗೀತ, ನಾಟಕ ಇಂತಹ ಯಾವುದಾದರು ಸಾಂಸ್ಕøತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾಹಿತಿ ಪ್ರತಿಭಾ ಚಾಮಾ ಅವರು ಮಾತನಾಡಿ, ಹಲವು ಸಾಂಸ್ಕøತಿಕ ಕಲೆಗಳು ಗ್ರಾಮಗಳಲ್ಲಿ ಮಾತ್ರ ಜೀವಂತವಾಗಿವೆ. ಹಾಗಾಗಿ ಗ್ರಾಮಗಳನ್ನು ಅಭಿವೃದ್ಧಿಪಡಿಸಿದಲ್ಲಿ ಮಾತ್ರ ಕಲೆಗಳ ಬೆಳವಣಿಗೆ ಸಾಧ್ಯ ಎಂದು ತಿಳಿಸಿದರು.
ಬೆಂಗಳೂರು ಮಹಿಳಾ ಟಾಸ್ಕ್‍ಫೋರ್ಸ್‍ನ ಮಾಜಿ ಅಧ್ಯಕ್ಷರಾದ ಗುರಮ್ಮಾ ಸಿದ್ದಾರೆಡ್ಡಿ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ವಿಜಯಕುಮಾರ ಸೋನಾರೆ, ಹಿರಿಯ ಚಿತ್ರಕಲಾವಿದೆ ಶಾಂತಾ.ಕೆ.ಸೌದತ್ತಿ, ಸಾಹಿತಿಗಳಾದ ಭಾರತಿ ವಸ್ತ್ರದ, ಗಂಗಮ್ಮ ಫೂಲೆ, ಸಂಜೀವಕುಮಾರ ಅತಿವಾಳೆ ಹಾಗೂ ಇತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜಶೇಖರ ವಟಗೆ ಅವರು ಸ್ವಾಗತಿಸಿದರು. ಶ್ರೀದೇವಿ ಪಾಟೀಲ್ ನಿರೂಪಿಸಿದರು. ಪ್ರೀಯಾ ಲಂಜವಾಡಕರ್ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ರಂಗೋಲಿ, ಆಶುಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದವರು ಹಾಗೂ ಚಿತ್ರಕಲಾ ಶಿಬಿರ, ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆ, ಆಹಾರ ಮಳೆಗೆಯಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

--
for ads contact :
8748888100, 9379888100 , 9590929311
www.facebook.com/BidarDistrict #BidarCityNews
PhotoPhotoPhotoPhoto
1/29/19
4 Photos - View album

Post has attachment
70ನೇ ಗಣರಾಜ್ಯೋತ್ಸವ ಆಚರಣೆ”
ದೇಶ ಸೇವೆಯನ್ನು ಮೈಗೂಡಿಸಿಕೊಂಡು ಸಮಾಜ ಸೇವಕರಾಗಬೇಕು – ಮಹೇಶ ಹಿರೇಮಠ
ಬೀದರ ತಾಲೂಕಿನ ಆಣದೂರ ಗ್ರಾಮದ 26/01/2019 ರಂದು ಬೆಳಿಗ್ಗೆ 8:00 ಗಂಟೆಗೆ 70ನೇ ಗಣರಾಜೋತ್ಸವ ಧ್ವಜಾರೋಹಣ ಹಾಗೂ ವಿಜೇತರಿಗೆ ಬಹುಮಾನ ಸಮಾರಂಭ ಬಸವಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿತ್ತು.
ಮಹೇಶ ಹಿರೇಮಠ ಮುಖ್ಯ ಅತಿಥಿಗಳಾಗಿ ಆಗಮಿಸಿ, ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ – ಮಕ್ಕಳು ವಿವಿಧ ರೀತಿಯ ಕೌಶಲ್ಯವನ್ನು, ಕೌಶಲ್ಯ ವಸ್ತು ಪ್ರದರ್ಶನದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದು ಪ್ರಶಂಸನೀಯವಾದುದು. ಇಂತಹ ಪ್ರತಿಭೆಗಳು ದೇಶದ ಸಂಪತ್ತುಗಳಾಗಿದ್ದಾರೆ. ಇವರ ಪ್ರತಿಭೆಯನ್ನು ಬೆಳೆಸುವಲ್ಲಿ ಶಿಕ್ಷಕರು, ಗ್ರಾಮದ ಯುವ ಮುಖಂಡರಾದ ಶಿವಕುಮಾರ ಸ್ವಾಮಿ ನಿರಂತರವಾಗಿ ಪರಿಶ್ರಮ ಪಡುತ್ತಿದ್ದಾರೆ. ಮಕ್ಕಳು ಪ್ರತಿಭೆಯ ಜೊತೆಗೆ ದೇಶಾಭಿಮಾನ, ದೇಶ ಪ್ರೇಮ, ದೇಶ ಸೇವೆಯನ್ನು ಮೈಗೂಡಿಸಿಕೊಂಡು ದೇಶದ
ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ನುಡಿದರು. ಈ ಸಂಧರ್ಭದಲ್ಲಿ ಪ್ರಾಚಾರ್ಯರಾದ ರಾಜುಕುಮಾರ ಬಿರಾದರ , ಮತು ಶಾಲೆಯ ಸಿಬ್ಬಂದಿ ವರ್ಗದವರು, ಮಕ್ಕಳು ಹಾಗೂ ಗ್ರಾಮದ ಹಿರಿಯ ಮುಖಂಡರು ಉಪಸ್ಥಿತರಿದ್ದರು.

--
for ads & news contact :
8748888100 , 9379888100
www.facebook.com/BidarDistrict #BidarCityNEWS
PhotoPhotoPhoto
1/27/19
3 Photos - View album

Post has attachment
ಶಾಹೀನ್ ಪ್ರೌಢಶಾಲೆಯಲ್ಲಿ ಕೌಶಲ ಪ್ರಯೋಗ ಶಾಲೆ ಉದ್ಘಾಟನೆ
ಜಿಲ್ಲೆಯ ಕ್ರೀಡಾಪಟುಗಳಿಗೆ ಅಗತ್ಯ ನೆರವು: ರಹೀಂಖಾನ್
ಬೀದರ, ಜ. 27:- ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭಾ ಪ್ರದರ್ಶನಕ್ಕೆ ಜಿಲ್ಲೆಯ ಕ್ರೀಡಾಪಟುಗಳಿಗೆ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಂಖಾನ್ ಹೇಳಿದರು.
ಬೀದರ ನಗರದ ಶಹಾಪೂರ ಗೇಟ್ ಬಳಿಯ ಶಾಹೀನ್ ನಗರದಲ್ಲಿ ಇರುವ ಶಾಹೀನ್ ಪ್ರೌಢಶಾಲೆಯಲ್ಲಿ ಸೋಮವಾರ ಕೌಶಲ ಪ್ರಯೋಗ ಶಾಲೆ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲ ಬಗೆಯ ಕ್ರೀಡೆಗಳಿಗೆ ಉತ್ತೇಜನ ನೀಡಲಾಗುವುದು. ಕ್ರೀಡಾಪಟುಗಳಿಗೆ ಅಗತ್ಯ ಸೌಕರ್ಯ ಒದಗಿಸಲಾಗುವುದು ಎಂದು ತಿಳಿಸಿದರು.
ಈಜು, ಓಟ, ಚೆಸ್, ಫುಟ್‍ಬಾಲ್, ಕಬಡ್ಡಿ, ಕ್ರಿಕೆಟ್, ಕೊಕ್ಕೊ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಸಾಧನೆ ಮಾಡಲು ವಿಪುಲ ಅವಕಾಶಗಳು ಇವೆ ಎಂದು ತಿಳಿಸಿದರು.
ಶಾಹೀನ್ ಕಾಲೇಜು ಗುಣಮಟ್ಟದ ಶಿಕ್ಷಣದ ಮೂಲಕ ರಾಜ್ಯದಲ್ಲಿ ಹೆಸರು ಮಾಡಿದೆ. ಸರ್ಕಾರಿ ಕೋಟಾದ ವೈದ್ಯಕೀಯ ಸೀಟುಗಳನ್ನು ಪಡೆಯುವಲ್ಲಿ ಪ್ರತಿ ವರ್ಷ ಹೊಸ ದಾಖಲೆ ಸೃಷ್ಟಿಸುತ್ತಿದೆ. ಶಿಕ್ಷಣದ ಜತೆಗೆ ವಿವಿಧ ಚಟುವಟಿಕೆಗಳನ್ನು ನಡೆಸಿ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಶ್ರಮಿಸುತ್ತಿದೆ ಎಂದು ಶ್ಲಾಘಿಸಿದರು.
ಎರಡೂವರೆ ದಶಕದ ಹಿಂದೆ ಕೆಲವೇ ವಿದ್ಯಾರ್ಥಿಗಳಿಂದ ಆರಂಭವಾದ ಶಾಹೀನ್ ಸಂಸ್ಥೆ ಈಗ ರಾಜ್ಯದ ಪ್ರತಿಷ್ಠಿತ ಸಂಸ್ಥೆಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ. ಶಿಕ್ಷಣ ತಜ್ಞರೂ ಆದ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಖದೀರ್ ಅವರ ದೂರದೃಷ್ಟಿ ಹಾಗೂ ಅವಿರತ ಪರಿಶ್ರಮದಿಂದಾಗಿ ಇದು ಸಾಧ್ಯವಾಗಿದೆ ಎಂದು ಹೇಳಿದರು.
ಶಾಹೀನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಖದೀರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನ ಕೌಶಲ ಬೆಳೆಸಲು ಶಾಹೀನ್ ಪ್ರೌಢಶಾಲೆಯಲ್ಲಿ ಕೌಶಲ ಪ್ರಯೋಗ ಶಾಲೆ ಆರಂಭಿಸಲಾಗಿದೆ. ಇದರಲ್ಲಿ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಮೊದಲ ವರ್ಷದಲ್ಲಿ ನೀಡಲಾಗುವ ತಂತ್ರಜ್ಞಾನದ ಮಾಹಿತಿ ದೊರೆಯಲಿದೆ ಎಂದು ತಿಳಿಸಿದರು.
ರಾಜ್ಯ ಸಚಿವ ಸಂಪುಟದಲ್ಲಿ ಜಿಲ್ಲೆಯ ಮೂವರಿಗೆ ಸ್ಥಾನ ದೊರೆತದ್ದು ಜಿಲ್ಲೆಯ ಸೌಭಾಗ್ಯ. ರಹೀಂಖಾನ್ ಅವರಿಗೆ ಮಹತ್ವದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಲಭಿಸಿದೆ. ಅವರು ಜಿಲ್ಲೆಯ ಕ್ರೀಡಾಪಟುಗಳಿಗೆ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಸ್ಪರ್ಧೆಗಳಿಗೆ ಅಣಿಗೊಳಿಸಲು ಅಗತ್ಯ ಸೌಕರ್ಯಗಳನ್ನು ಒದಗಿಸುವ ಭರವಸೆ ನೀಡಿದ್ದಾರೆ. ಭವಿಷ್ಯದಲ್ಲಿ ರಾಷ್ಟ್ರ ಹಾಗೂ ವಿಶ್ವದ ಕ್ರೀಡಾನಕಾಶೆಯಲ್ಲಿ ಜಿಲ್ಲೆಯ ಕ್ರೀಡಾಪಟುಗಳೂ ಸ್ಥಾನ ಪಡೆಯುವ ವಿಶ್ವಾಸ ಇದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಅಬ್ದುಲ್ ಮನ್ನಾನ್ ಸೇಠ್, ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜು ಪ್ರಾಚಾರ್ಯ ಖಾಜಾ ಪಟೇಲ್, ಪ್ರೌಢಶಾಲೆ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.
ಇದಕ್ಕೂ ಮೊದಲು ಸಚಿವರಾದ ನಂತರ ಶಾಹೀನ್ ಕಾಲೇಜಿಗೆ ಪ್ರಥಮ ಬಾರಿಗೆ ಬಂದ ಕಾರಣ ವಿದ್ಯಾರ್ಥಿಗಳು ಪುಷ್ಪವೃಷ್ಟಿ ಮಾಡಿ ರಹೀಂಖಾನ್ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿ ಬರಮಾಡಿಕೊಂಡರು. ಆಡಳಿತ ಮಂಡಳಿ ವತಿಯಿಂದ ಸಚಿವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
=============================

ಪ್ರತಿಭಾವಂತ ಈಜುಪಟುವಿಗೆ ಸಚಿವರಿಂದ ಸನ್ಮಾನ
ಬೀದರ, ಜ. 27:- ಜಿಲ್ಲೆಯ ಪ್ರತಿಭಾವಂತ ಈಜು ಪಟು ರೇಣುಕಾಚಾರ್ಯ ಹೊಡಮನಿ ಅವರನ್ನು ಶಾಹೀನ್ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ರಹೀಂಖಾನ್ ಸನ್ಮಾನಿಸಿದರು.
ರೇಣುಕಾಚಾರ್ಯ ಅವರಲ್ಲಿ ಅಂತರರಾಷ್ಟ್ರೀಯ ಮಟ್ಟದ ಈಜುಗಾರರಿಗೆ ಸರಿಸಮನಾದ ಕೌಶಲ ಇದೆ. ಪರಿಶ್ರಮ ವಹಿಸಿದರೆ ಒಲಿಂಪಿಕ್ಸ್‍ನಲ್ಲಿ ಸಾಧನೆ ಮಾಡುವ ಎಲ್ಲ ಲಕ್ಷಣಗಳು ಇವೆ ಎಂದು ತಿಳಿಸಿದರು.

ರೇಣುಕಾಚಾರ್ಯ ಅವರ ಸಾಧನೆಗೆ ಸರ್ಕಾರ ಬೆಂಗಾವಲಾಗಿ ನಿಲ್ಲಲಿದೆ. ಅವರ ಈಜು ತರಬೇತಿಗೆ ಎಲ್ಲ ರೀತಿಯ ನೆರವು ನೀಡಲಾಗುವುದು. ಸರ್ಕಾರಿ ನೌಕರಿಯಲ್ಲಿ ಇರುವ ಅವರ ಪಾಲಕರಿಗೆ ಬೆಂಗಳೂರಿಗೆ ವರ್ಗಾವಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
--
for ads & news contact
8748888100 , 9590929311, 9379888100
#BidarDistrict
#BidarCityNews
Photo
Photo
1/27/19
2 Photos - View album

Post has attachment
ಗಣರಾಜ್ಯೋತ್ಸವದಲ್ಲಿ ಮಿಂಚಿದ ನವೀನ್ ಪಬ್ಲಿಕ್ ಶಾಲೆ ಪ್ರತಿಭೆಗಳು
ಬೀದರ: ತಾಲೂಕಿನ ಚಿಟ್ಟಾ ಗ್ರಾಮದಲ್ಲಿರುವ ನವೀನ್ ಪಬ್ಲಿಕ್ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ 70ನೇ ಗಣರಾಜ್ಯೋತ್ಸವ ದಿನ ಆಚರಿಸಲಾಯಿತು.
ಕಾಲೇಜಿನ ಅಧ್ಯಕ್ಷ ಕಾಮಶೆಟ್ಟಿ ಚಿಕಬಸೆ ಗಣರಾಜ್ಯೋತ್ಸವ ನಿಮಿತ್ಯ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಲ್ಲ ವರ್ಗಗಳ ಹಿತವನ್ನು ಗಮನದಲ್ಲಿರಿಸಿ ವಿಶ್ವ ಮೆಚ್ಚುವ ಸಂವಿಧಾನ ರಚಿಸಿ, ವಿಶ್ವರತ್ನರಾದವರು. ಅವರು ರಚಿಸಿದ ಈ ಸಂವಿಧಾನ ಜಾಗತಿಕ ಮಟ್ಟದಲ್ಲಿ ಶ್ರೇಷ್ಠ ಸಂವಿಧಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಸಾವಿರಾರು ಜಾತಿ, ಧರ್ಮದವರು ಒಂದೆ ನೆಲ, ಜಲ, ಭೂಮಿ, ಪರಿಸರದಲ್ಲಿ ಸೌಹಾರ್ದತೆಯಿಂದ ಬದುಕುವ ಜಗತ್ತಿನ ಎಕೈಕ ದೇಶ ನಮ್ಮದು. ಇದು ಯಾವತ್ತು ಕೊಡುವ ದೇಶವೇ ಹೊರತು, ಕಸಿದು ಕೊಳ್ಳುವ ದೇಶವಲ್ಲ. ಇಂಥ ಸಂಸ್ಕøತಿಯನ್ನು ಇಂದು ಜಗತ್ತು ಆರಾಧಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಾಟ್ಯಶ್ರೀ ನೃತ್ಯಾಲಯದ ಮುಖ್ಯಸ್ಥೆ ರಾಣಿ ಸತ್ಯಮೂರ್ತಿ ಅವರು ಗಣರಾಜ್ಯೋತ್ಸವ ನಿಮಿತ್ಯ ಎರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಸ್ಪರ್ಧೆಗಳಲ್ಲಿ ಸೋಲು, ಗೆಲುವು ಮುಖ್ಯವಲ್ಲ, ಭಾವಗಿಸುವುದು ಮುಖ್ಯ. ಇಂದು ಸೋತ ವ್ಯಕ್ತಿ ನಾಳೆ ಗೆದ್ದೆ ಗೆಲ್ಲುತ್ತಾನೆನ್ನುವುದಕ್ಕೆ ರಾಷ್ಟ್ರಪಿತ ಮಹತ್ಮ ಗಾಂಧಿ ಹಾಗೂ ಅಮೇರಿಕದ ಮಾಜಿ ರಾಷ್ಟ್ರಾಧ್ಯಕ್ಷ ಅಬ್ರಹಂ ಲಿಂಕನ್‍ರೆ ಸಾಕ್ಷಿ. ಅದಕ್ಕಾಗಿ ವಿದ್ಯಾರ್ಥಿಗಳು ಅಂಥವರ ತ್ಯಾಗ ಹಾಗೂ ದೇಶಭಕ್ತರ ಬಲಿದಾನ ಜೀವನದಲ್ಲಿ ಆರಾಧಿಸಿ ಅನುಕರಿಸಬೇಕೆಂದು ಸತ್ಯಮೂರ್ತಿ ಕರೆ ಕೊಟ್ಟರು.
ನವೀನ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಶೀಲಾ ಚಿಕಬಸೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ನಿರ್ದೇಶಕರಾದ ಬಸವರಾಜ ತಗಾರೆ, ಸಂತೋಷ ತಗಾರೆ, ಅಮೃತಾ ತಗಾರೆ ಸೇರಿದಂತೆ ಶಾಲೆಯ ಮುಖ್ಯ ಗುರುಗಳು, ಸಹ ಶಿಕ್ಷಕರು, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

--
For ads & news contact :
8748888100 , 9379888100 9590929311
www.facebook.com/BidarDistrict #BidarCityNews
PhotoPhotoPhoto
1/27/19
3 Photos - View album

Post has attachment
ಪತ್ರಿಕಾ ಪ್ರಕಟಣೆ

ಬ್ರಿಮ್ಸ್‍ನಲ್ಲಿ ಅಶುಚಿತ್ವ: ಅಸಮಾಧಾನ ವ್ಯಕ್ತಪಡಿಸಿದ ಸಚಿವರು
ಬೀದರ, ಜ.26 (ಕ.ವಾ):- ಸಹಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಂಡೆಪ್ಪ ಖಾಶೆಂಪೂರ ಅವರು ಜ.26ರಂದು ನಗರದ ಬ್ರಿಮ್ಸ್ ಗೆ ಭೇಟಿ ನೀಡಿ ಪರಿಶೀಲಿಸಿದರು.

ಶಸ್ತ್ರ ಚಿಕಿತ್ಸಾ ಘಟಕ ಹಾಗೂ ತುರ್ತು ನಿಗಾ ಘಟಕ ಸೇರಿದಂತೆ ನಾನಾ ವಾರ್ಡಗಳಿಗೆ ಸಂಚರಿಸಿ ಅಲ್ಲಿನ ವಸ್ತು ಸ್ಥಿತಿ ಖುದ್ದು ವೀಕ್ಷಿಸಿದರು.

ಬಳಿಕ ಸುದ್ದಿಗಾರದೊಂದಿಗೆ ಮಾತನಾಡಿದ ಸಚಿವರು, ಶುಚಿತ್ವ ಕಾಯ್ದುಕೊಳ್ಳುವ ವಿಷಯದಲ್ಲಿ ಗಮನಾರ್ಹ ಬದಲಾವಣೆ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಗ್ರೂಪ್ ಡಿ ನೌಕರರು, ಸಮರ್ಪಕ ವಿದ್ಯುತ್ ಸೌಕರ್ಯ, ಜನರೇಟರ್ ಸೇರಿದಂತೆ ಇನ್ನೀತರ ಸೌಕರ್ಯಗಳು ಆಸ್ಪತ್ರೆಗೆ ಲಭ್ಯವಾಗುವುದಕ್ಕೆ ಸಂಬಂಧಿಸಿದಂತೆ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು. ಆಸ್ಪತ್ರೆಯಲ್ಲಿನ ಕೊರತೆಗಳ ಬಗ್ಗೆ ಪಟ್ಟಿಯೊಂದನ್ನು ತಯಾರಿಸಿ ಕೂಡಲೇ ತೆಗೆದುಕೊಂಡು ಬರಲು ವೈದ್ಯಾಧಿಕಾರಿ ಡಾ.ಸಿ.ಎಸ್.ರಗಟೆ ಅವರಿಗೆ ಸಚಿವರು ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಭಾರತಬಾಯಿ ಶೆರಿಕಾರ, ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ, ಬೀದರ ನಗರಸಭೆ ಅಧ್ಯಕ್ಷೆ ಶಾಲಿನಿರಾಜು ಚಿಂತಾಮಣಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಹಾಗೂ ಇನ್ನಿತರ ವೈದ್ಯಾಧಿಕಾರಿಗಳು ಇದ್ದರು.

ಕರ್ನಾಟಕ ವಾರ್ತೆ

--
For Ads & News Contact :
8748888100 , 9379888100, 9590929311
#BidarCITYnews
#BidarDistrict
PhotoPhotoPhoto
1/26/19
3 Photos - View album

Post has attachment
** Corrupt Party & Leaders are Exposing there activities(working style) & telling people that how they are using powers to make people Confused or Divert there Mind from actual issues. * Vinay Biradar *

See How these Political Party & there Leaders are Diverting People Mind by raising noise other than actual issues of people & country.

Why they don't bring something strong policies for VOTING method where there should not be any issues related voting methodology.

BJP says EVM is good,
( but facts says something else ( like improper
EVM management in max. places. )
Opposition Says Bring Ballot system
( but Past Experience says something else [ like
Ballot Loot etc, ] )

When BJP & Opposition Party has not faith in these VOTING system then why not they bring NEW Election Voting System, where there should not be any issues to any Party & any Leader..

--
#Vinay Biradar [ Economist, Analyst & EPP President ]
http://www.facebook.com/vinay.bidar
Photo
Wait while more posts are being loaded