Profile cover photo
Profile photo
Raghunandan K Hegde
45 followers
45 followers
About
Raghunandan K's posts

Post has attachment
ಗರ್ಭ ಕೂಗಿನ ಋತುಗಾನ
ಕಾವ್ಯ ಲಹರಿ / / ರಘುನಂದನ ಕೆ . ಸ್ವಪ್ನ ಸಂತೆಯ ಬೀದಿಯಲ್ಲಿ ದ್ವೀಪದೂರಿನ ರಾಜಕುಮಾರ ಎದೆಯ ತುಡಿತದ ಬಿಗುವಲ್ಲಿ ಕುದುರೆ ಖುರಪುಟದ ನಾದ ದೇಹದೊಡಲ ಬಯಕೆ ವಸಂತಗಾನ ಹೊಕ್ಕುಳ ಸುಳಿಯ ತಿರುವಲ್ಲಿ ಹೊಸ ಹರೆಯ ಹೂ ಕಂಪನ ಅಂತರಾಳದಾಸೆ ಪಟಪಟಿಸಲು ಹಸಿ ನೆಲದ ಕನಸಿಗೂ ಹಸಿವು ರೆಕ್ಕೆ ಬಿಚ್ಚಿ ಹರೆಯ ತೆರೆಯಲು ಮೌನ ರಾಗದ ಬಯಕೆ ...

Post has attachment
ಯುಗಾದಿಯಂದು ಅವಧಿಯಲ್ಲಿ ಕಾವ್ಯ ಸಂಭ್ರಮ,
ಸು ರಂ ಎಕ್ಕುಂಡಿಯವರ ‘ಒಳಗೆ ಬಾ ಚೈತ್ರ’ ಕವಿತೆಯಲ್ಲಿ - ರೇಶಿಮೆಯ ರೆಕ್ಕೆಗಳ ಬಿಡಿಸಿದ ಪತಂಗದ ಎದುರಲ್ಲಿ ನಾವೆಲ್ಲ ಕಂಡ ಕನಸುಗಳ ಹುಡುಕುತ್ತ ವಸಂತನ ಸೊಬಗ ಸವಿಯ ಬೆಲ್ಲ,
ರಾಜಶೇಖರ ಬಂಡೆಯವರ ಕವನದಲ್ಲಿ – ಸತ್ತ ಹೂವಿನ ಗೋರಿಯ ಮಗ್ಗುಲ ಬೇವು

ಇವುಗಳೊಂದಿಗೆ ‘ಅವಧಿ’ಯ ಪುಟಗಳಲ್ಲಿ ಚೈತ್ರ ಚಿಗುರಿನ ಸಂಭ್ರಮದ ನನ್ನ ಕವನವೊಂದು ಪಲ್ಲವಿಸಿದೆ, 
ಹಂಚಿಕೊಳ್ಳುವ ಖುಷಿ ನನ್ನದು, ಓದುವ ಸುಖ ನಿಮ್ಮದಾಗಲಿ,
ಯುಗಾದಿಯ ಶುಭಾಶಯಗಳೊಂದಿಗೆ..

ಅಂತರಾಳದಾಸೆ ಪಟಪಟಿಸಲು
ಹಸಿ ನೆಲದ ಕನಸಿಗೂ ಹಸಿವು
ರೆಕ್ಕೆ ಬಿಚ್ಚಿ ಹರೆಯ ತೆರೆಯಲು
ಮೌನ ರಾಗದ ಬಯಕೆ ಬಿಸುಪು
ಕೊರಳ ಕೊಳಲಿಗೆ ತುಟಿ ಸೋಕಿ
ಸ್ವಪ್ನಲೋಕದ ತುಂಬ ಪಿಸುಮಾತು
ಬಯಕೆ ಹೂ ಗಂಧ; ಸುಡುವ ಬೆಳದಿಂಗಳು

Post has attachment
ಜ್ಞಾಪಕಗಳ ಚಿತ್ರಶಾಲೆಯಲ್ಲಿ ಕನಸುಗಳಿಲ್ಲ...!!
ಮೋಹಮತಿ ಕಥಾಮುಖಿ/ /ರಘುನಂದನ ಹೆಗಡೆ. ಪುಟ್ಟ
ಪೆಟ್ಟಿಗೆಯೊಳಗಿನ ಪುಟಾಣಿ ಮನೆಯ ಕಿಟಕಿಯಲ್ಲಿ ಸರಿದಾಡುವ ಸರಪರ ಸಡಗರದ ಬಾಲ್ಯದ ಒನಪು, ಪುಟ್ಟ
ಗೊಂಬೆಯ ಕಣ್ಣಲ್ಲಿ ಫಳಕ್ಕನೆ ಮಿಂಚುವ ಹೊಳಪು, ಯಾರೋ ಕೊಟ್ಟ ಉಡುಗೊರೆ ಕಾದಿಟ್ಟ ಕನಸು,
ಮನಸ್ಸಿನಲ್ಲಿ ಮಾನಸ ಸರೋವರದ ತಣ್ಣನೆಯ ಹಿಮರಾಶಿ. ಜಾರಬಹುದಾದ ದಾರಿಯೇ ಹಜಾರ್ ದೇತಾ ಹೈ...

Post has attachment
ಜ್ಞಾಪಕಗಳ ಚಿತ್ರಶಾಲೆಯಲ್ಲಿ ಕನಸುಗಳಿಲ್ಲ...!!
ಮೋಹಮತಿ ಕಥಾಮುಖಿ/ /ರಘುನಂದನ ಹೆಗಡೆ. ಪುಟ್ಟ
ಪೆಟ್ಟಿಗೆಯೊಳಗಿನ ಪುಟಾಣಿ ಮನೆಯ ಕಿಟಕಿಯಲ್ಲಿ ಸರಿದಾಡುವ ಸರಪರ ಸಡಗರದ ಬಾಲ್ಯದ ಒನಪು, ಪುಟ್ಟ
ಗೊಂಬೆಯ ಕಣ್ಣಲ್ಲಿ ಫಳಕ್ಕನೆ ಮಿಂಚುವ ಹೊಳಪು, ಯಾರೋ ಕೊಟ್ಟ ಉಡುಗೊರೆ ಕಾದಿಟ್ಟ ಕನಸು,
ಮನಸ್ಸಿನಲ್ಲಿ ಮಾನಸ ಸರೋವರದ ತಣ್ಣನೆಯ ಹಿಮರಾಶಿ. ಜಾರಬಹುದಾದ ದಾರಿಯೇ ಹಜಾರ್ ದೇತಾ ಹೈ...

Post has attachment
ಪ್ರಿಯತಮ, ನಿನ್ನ ನನ್ನ ಕಣ್ಣ ಕೊಳದೊಳಗೆ ಮುಳಗಿಸಿ ಕೊಲ್ಲಲು ಕಾಯುತ್ತಿರುವೆ,
ಬರದೆ ಇರಬೇಡ, ಕಣ್ಣು ಸೋಲುತ್ತಿದೆ.
ಕಿರುನಗೆಯ ತುತ್ತನಿಟ್ಟು ನಿನ್ನ ತುಟಿಗಳಿಂದ ಜಾರುವ ಮುತ್ತ ನುಂಗಲು ಹಸಿದು ಕಾದಿರುವೆ
ತಡಮಾಡಬೇಡ, ಕಿರುನಗೆ ಮಾಸುತ್ತಿದೆ.

ತಳವಿಲ್ಲದ ಆಳ ನಿನ್ನ ಕಣ್ಣು. ಆದರೂ ಹುಡುಕುತ್ತೇನೆ ಏನಾದರೂ ಸಿಕ್ಕೀತು, 
ಉಹೂಂ, ಮತ್ತೂ ಆಳಕ್ಕೆ ಸೆಳೆಯುತ್ತೀಯ. ಒಳಸುಳಿಯಲ್ಲಿ ನಾನೇ ಮುಳುಗಿ ಹೋಗುತ್ತೇನೆ.
ನನ್ನ ಆಳವನ್ನೆಲ್ಲ ಭೇದಿಸಿ ನನ್ನನ್ನ ಮುಳುಗಿಸುತ್ತೀಯ. ಆಳ ದಕ್ಕದೆ ನಾನಲ್ಲಿ ತೇಲುತ್ತೇನೆ. ಕಂಗಾಲಾಗುತ್ತೇನೆ.
ನನ್ನ ಬದುಕಿನಂತೆ ನಿನ್ನ ಕಣ್ಣುಗಳೂ, ಆಳ ತಳ ದಕ್ಕದು.

Post has attachment
ಕೊಳಲ ದನಿಯ ಉಂಗುರಗಳ ಹಾಡು ಕಾಡುವಾಗ
  ಸಾಗರ ಸಮ್ಮುಖ/ / ರಘುನಂದನ ಹೆಗಡೆ. ನಕ್ಕ   ಹಾಗೆ   ನಟಿಸಬೇಡ ,  ನಕ್ಕುಬಿಡು   ಸುಮ್ಮನೆ ; ಬೆಳಕಾಗಲಿ   ತಂಪಾಗಲಿ   ನಿನ್ನೊಲವಿನ   ಒಳಮನೆ ! ಅರೆ ,  ಅವಳ್ಯಾಕೆ   ನಕ್ಕ   ಹಾಗೆ   ನಟಿಸುತ್ತಿದ್ದಾಳೆ ,  ಅವಳ   ನಟನೆ   ಯಾರಿಗಾಗಿ ,  ಅವನದ್ಯಾಕೆ   ಸುಮ್ಮನೆ   ನಗು   ಎನ್ನುತ್ತಿದ್ದಾನೆ ,  ನಗುವನ್ನ   ಹುಟ...

Post has attachment
ಬದಲಾಗೋ ಬಣ್ಣಗಳ ಪವಾಡ - ಮುಖವಾಡ
ಕಾವ್ಯ ಲಹರಿ / / ರಘುನಂದನ ಕೆ . ಬದುಕ ಬವಣೆಯ ಬೀದಿಗಳಲ್ಲಿ ಹೆಜ್ಜೆಗೊಂದು ಮುಖವಾಡ ಸಿಕ್ಕು ನಂಬಿಸುತ್ತದೆ , ಕಥೆ ಹೇಳುತ್ತದೆ ತಾನಿಲ್ಲದ ಬದುಕು ಬಯಲಾಟ ಮುಚ್ಚಿಟ್ಟರಷ್ಟೆ ಚೆಲುವು ನೋಟ ಎಂದೆಲ್ಲ ಪಿಸುನುಡಿದು ಗಹಗಹಿಸುತ್ತದೆ   ಮುಖವಾಡಕ್ಕೆ ತಲೆಯಿಲ್ಲ , ಕಣ್ಣಿಲ್ಲ ಹಿಂದೆ ಅಡಗಿದ ಮುಖಕ್ಕೆ ನೆಲೆಯಿಲ್ಲ ಕಣ್ಣ ಓದಲು ಮ...

Post has attachment
ನೀನಿಲ್ಲದ ಗೋಕುಲದ ಬೇಸರ
ಕಾವ್ಯ ಲಹರಿ / / ರಘುನಂದನ ಕೆ . ನಿನ್ನ ತುಟಿಯಂಚಿನ ಕೊಳಲಾಗುವೆ ಬಿಸಿಯುಸಿರ ಪುಳಕದಿ ರಾಗವಾಗುವೆ ಅನುರಾಗದ ರವಳಿಯ ತೇಲಿ ಬಿಡು ಶ್ಯಾಮ ಯಮುನಾ ತೀರದಿ ಹಾಡಾಗಿ ಹರಿಯಲಿ ಪ್ರೇಮ ನನ್ನೆದೆಯ   ರಾಗ ಕೇಳು ಸಾಕು ಮಾಡೊ ವಿರಹಿ ಬಾಳು ನಿಂತೆ ಇದೆ ಜೀವ ಗೋಕುಲದಲ್ಲಿ ಜೀವಾಮೃತವಿದೆ ಎದೆಯಲ್ಲಿ ದ್ವಾರಕೆ , ಮಧುರೆಗಳು ಸಾಕು ಬಾ ...

Post has attachment
ಸೂರ್ಯ ಚಂದ್ರರ ಬೆಳಕ ಪಥದಲ್ಲಿ - ಬೆಳವಣಿಗೆಯ ಜಾಡು ಹಿಡಿದು
ಸಾಗರ ಸಮ್ಮುಖ/ /ರಘುನಂದನ
ಕೆ.    ಸೂರ್ಯ , ಅವ ಜಗದ ಒಡೆಯ , ಬೃಹ್ಮಾಂಡದಲ್ಲಿ ಅರಿವಿಗೆ ನಿಲುಕಿದ ಜೀವರಾಶಿಯ ಜೀವ ಆತ . ಭೂಮಿಗೆ ಅವನಿಂದಲೇ ಬೆಳಕು , ಬದುಕಿಗೆ ಕಾರಣಕರ್ತ , ಕಾಲದ ಗೆಳೆಯ . ಅವನ ಚಲನೆಯ ಕಾಲು ನಮಗೆ ಕಾಲ . ಅವ ಸ್ವಯಂ ಪೂರ್ಣ , ದೇಹದೊಳಗೆ ಅಗ್ನಿಯಾದವ , ಆತ್ಮದೊಳಗೆ ಜ್ಞಾನವಾಗಬಲ್ಲವ , ಭೂಮಿ , ಆಕಾಶ ...

Post has attachment
ಪ್ರಖರತೆ ಅವನ ಹಾಯ್ದು ಬರುವಾಗ ತಂಪು. ಮಾಧ್ಯಮವಾಗುವುದು ಸುಲಭವಲ್ಲ.
ತನ್ನದಲ್ಲದ್ದನ್ನ ಹಂಚುವುದೂ ಸಾಧನೆಯಲ್ಲದ್ದಲ್ಲ. ಎಲ್ಲ ಸೂರ್ಯರಾಗದಿರಬಹುದು, ಚಂದ್ರನಾಗುವುದು ಕಡಿಮೆಯದ್ದಲ್ಲ.
Wait while more posts are being loaded