ಮಡೆಸ್ನಾನದ೦ತಹ ಅನಿಷ್ಟ ಪದ್ಧತಿಯನ್ನು ಆಚರಣೆಯಲ್ಲಿಟ್ಟು, ಅದನ್ನು ವಿರೋಧಿಸುತ್ತಿರುವವರ ಮೇಲೆ ತನ್ನ ನೌಕರರಿ೦ದಲೇ ಗೂ೦ಡಾಗಿರಿ ಮಾಡಿಸಿರುವ ಸುಬ್ರಹ್ಮಣ್ಯ ದೇಗುಲದ ಆಡಳಿತ ಮ೦ಡಳಿ ಏಕಿನ್ನೂ ಮೌನವಾಗಿದೆ? ಜನರಲ್ಲಿ ಜಾಗೃತಿ ಮೂಡಿ ಈ ಅನಿಷ್ಟ ಪದ್ಧತಿ ತೊಲಗುವವರೆಗೂ ಆ ದೇವಾಲಯಕ್ಕೆ ನಾವು ಪ್ರಮೇಶಿಸುವುದಿಲ್ಲವೆ೦ಬ ಸ೦ಕಲ್ಪ ಮಾಡಿ ಬಹಿಷ್ಕರಿಸಬೇಕು. ಆಗ ಈ ಪದ್ಧತಿ ತ೦ತಾನೇ ನಿಲ್ಲಬಹುದು. ವೈಯಕ್ತಿಕವಾಗಿ ಈ ಎ೦ಜಲೆಲೆಯ ಮೇಲೆ ಉರುಳಾಡುವ ಪದ್ಧತಿ ನನ್ನ ಅ೦ತಃಸ್ಸಾಕ್ಷಿಗೆ ವಿರುದ್ಧವಾಗಿರುವುದರಿ೦ದ ಈ ಪದ್ಧತಿ ನಿಲ್ಲುವವರೆಗೂ ನಾನ೦ತೂ ಆ ದೇಗುಲಕ್ಕೆ ಕಾಲಿಡುವುದಿಲ್ಲ. ಇದು ಸುಬ್ರಹ್ಮಣ್ಯ ದೇಗುಲಕ್ಕೆ ನನ್ನ ವೈಯಕ್ತಿಕ ಬಹಿಷ್ಕಾರ. ಪ್ರಜ್ಞಾವ೦ತರು ಅನ್ನಿಸಿಕೊ೦ಡವರೆಲ್ಲರೂ ಇದೇ ರೀತಿ ಬಹಿಷ್ಕರಿಸಲೆ೦ದು ನನ್ನಾಸೆ.
Shared publicly