Profile cover photo
Profile photo
ಚೆನ್ನ ಬಸವರಾಜ್
33 followers
33 followers
About
ಚೆನ್ನ's interests
View all
ಚೆನ್ನ's posts

Post has attachment
ವೆರೈಟಿ_ವೆರೈಟಿ_ರಿಂಗ್_ಟೋನ್ಸ್
ರ್ರೀ.... ಅಳಿಯಂದ್ರೇ, ಅಳಿಯ ದೇವ್ರೂ ಅಯ್ಯೋ..... ನಿಮ್ ಮಕ್ಕೆ ದೋಸೆ ಹುಯ್ಯಾ ಆಗ್ಲಿಂದ ಒಂದೇ ಸಮ ರಿಂಗ್ ಆಗ್ತಿದೆ ಅದೇನ್ ನಿದ್ದೆಯೋ... ಅಥವಾ ಮೈ ಮರೆವೋ ನನ್ ಕೈಯಲ್ಲಂತೂ ಕೇಳಕ್ಕಾಗ್ತಿಲ್ಲ ಇನ್ನು ಅಕ್ಕಪಕ್ಕದವರು ಕೇಳಿಸಿಕೊಂಡ್ರೆ ನನ್ ಮುಖ ನೋಡಿ, ನೋಡಿ ನಗ್ತಾರಷ್ಟೆ ನೀವೋ... ನಿಮ್ ಇನ್ ಕಮ್ಮಿಂಗ್ ಕಾಲ್ಸೋ ನಿಮ್...

Post has attachment

ಯಾರ ನಿರ್ಧಾರ ಸರಿ...??
*****************
ನಿಮಗೇನೂ... ಗೊತ್ತಾಗದು, ಸುಮ್ಮನಿದ್ದು ಬಿಡಿ
ಏನೇನೋ ಹೇಳಿ ನನ್ನ ತಲೆಯ ಕೆಡಿಸದಿರಿ
ನನ್ನ ತಮ್ಮನಿಗಿಂತ ಒಳ್ಳೆ ಗಂಡು ಬೇಕೇನ್ರಿ ನಿಮಗೆ ?
ರೂಪದಲ್ಲೇನೋ... ಕಪ್ಪು ನಾ ಒಪ್ಪಿಕೊಳ್ಳುವೆ,
ವಯಸ್ಸು ಹೆಚ್ಚಿರಬಹುದು ಗಟ್ಟಿಮುಟ್ಟಾಗಿಲ್ಲವೆ ?
ಐಶ್ವರ್ಯ, ಅಂತಸ್ತಿನಲ್ಲಿ ಅವನಿಗೇನು ಕಡಿಮೆ ಇದೆ ಹೇಳಿ ?
ಕಲಿಯುಗದ ಕುಬೇರ ಕುಬೇರ ಕಾಣ್ರಿ ಅವನು
ಹತ್ತು ತಲೆಮಾರು ಕೂತು ತಿಂದರೂ ಕರಗದ ಆಸ್ತಿ 
ರಾಣಿ ರಾಣಿಯಂತೆ ಮೆರೆಯುವಳು ಆ ಮನೆಯಲ್ಲಿ
ನಿಮ್ಮಿಂದ ಗಂಡು ಹುಡುಕಿ, ಕೇಳಿದಷ್ಟು ವರದಕ್ಷಿಣೆ ಕೊಟ್ಟು
ಮದುವೆ ಮಾಡಿ ಕೊಡಲು ಸಾಧ್ಯವೇ ?
ಯಾರಾದರು ದಿಕ್ಕುದೆಸೆಯಿಲ್ಲದವನಿಗೆ ಕೊಡಬೇಕಷ್ಟೆ;
ನಿಮಗೇ... ಸಾಕಷ್ಟು ಹಣ ಕೊಟ್ಟು, ಹತ್ತೂರು ಮೆಚ್ಚುವಂತೆ
ಧಾಮ್ ಧೂಮ್ ಆಗಿ ಮದುವೆ ಮಾಡಿಕೊಳ್ಳುವ
ಸುಮ್ಮನೆ ಏನೇನೋ ಹೇಳದೆ ಒಪ್ಪಿಕೊಳ್ಳಿ
ನಿಮಗೂ... ಆಗ ರಾಜ ಮರ್ಯಾದೆ
ಅಬ್ಬಬ್ಬಾ ...!! ನೀ ಎಂಥಹ ಸ್ವಾರ್ಥ ತಾಯಿಯೆ ?
ನಿನ್ನ ತಮ್ಮನ ಕಲ್ಯಾಣ ಗುಣಗಳೆಲ್ಲ ಗೊತ್ತಿದ್ದೂ
ಮಗಳ ಬಾಳಿನ ಜೊತೆ ಆಟ ಆಡುವೆಯಲ್ಲಾ...
ನೀ ಒಪ್ಪಿದರೂ... ನಾನು ನನ್ನ ಮಗಳು ಒಪ್ಪಲಾರೆವು
ಮದುವೆಯಾದರೆ ಎಲ್ಲಾ ಸರಿ ಹೋಗುವುದು ಎನ್ನುವೆ
ನಾಯಿಯ ಬಾಲ ಎಂದಿದ್ದರೂ ಡೊಂಕು
ನಿನಗೋ... ಗಂಟೂ ಉಳಿಯಬೇಕು,
ಆಕಡೆ ನಂಟೂ ಉಳಿಯಬೇಕೆನ್ನುವ ಜಾಯಮಾನದವಳು ...
ಒಂದೇ... ಕಲ್ಲಿನಲಿ ಹೊಡೆವ ಏಟಿಗೆ ಎರಡೆರಡು ಪ್ರತಿಫಲ !
ತವರಿನಲ್ಲಿ ನೀ ಆಡಿಸಿದಂತೆ ಆಡುವ ಅಪ್ಪ, ಅಮ್ಮ
ಅಳಿಯ ( ತಮ್ಮ ) ಮಗಳಿದ್ದರೆ
ಆಗ ನಿನ್ನದೇ... ದರ್ಬಾರು, ಕಾರುಬಾರು ಅಲ್ಲವೆ ?
ನಮಗಿರುವ ಎರಡು ಮಕ್ಕಳಿಗೆ
ನಾನೇನೂ ಹಣ, ಆಸ್ತಿ, ಒಡವೆ ಸಂಪಾದಿಸಿ ಇಡಲಿಲ್ಲ ನಿಜ
ಒಳ್ಳೆಯ ವಿದ್ಯಾಭ್ಯಾಸ, ಮಾನವೀಯತೆಯ ಶಿಕ್ಷಣ;
ಎಲ್ಲೇ... ಹೋದರು ಕೈಚಾಚದೆ ದುಡಿದು ತಿನ್ನುವ
ಬದುಕಿನ ಪಾಠವ ಕಲಿಸಿರುವೆ ನನಗದಷ್ಟೇ...ಸಾಕು
ಶಿವಚೆನ್ನ ೨೫.೦೪.೧೫

Post has attachment
ಚೆನ್ನ ಬಸವರಾಜ್ commented on a post on Blogger.
ಹಹಹಹಾ ... ಏನ್ ಕಾಲ ಬಂತಪ್ಪಾ !!!

ಬೇಡ ಸ್ವಾಮಿ ನನ್ನ ಫಜೀತಿ
****************
ಅಬ್ಬಬ್ಬಾ....!! ಏನ್ ಸೂಪರ್ ಐಡಿಯ ರ್ರೀ ನಿಮ್ದು
ಅಲ್ಲಾ... ನೈತಿಕ ಪೊಲೀಸ್ ಗಿರಿ ಮಾಡೋರಿಗೆ ಗುದ್ದು
ನಿಮ್ಮಂತೋರ ಸಂಖ್ಯೆ ಮನೆಮನೆಗೂ ಹೆಚ್ಚಾಗ್ಬೇಕು ನೋಡಿ
ಆಗ್ಲೇ... ನಮ್ಮ ಸಮಾಜ, ಸಂಸ್ಕೃತಿ ಪ್ರಜ್ವಲಿಸೋದು
ಕದ್ದು ಮುಚ್ಚಿ ಪ್ರೀತ್ಸೋರಿಗೆ ನಿಜವಾದ ನೈತಿಕ ಬೆಂಬಲ
ಅಹ್ ಹಾ..!! ನನ್ಕೈಲಿ ಈಗ್ಲೇ ತಡಕೊಳ್ಳಕ್ಕಾಗ್ತಿಲ್ಲ
ಈ ಚುಮು ಚುಮು ಚಳಿಗೆ, ಅದಿರೋ ತುಟಿಗಳಿಗೆ
ಅದು ವೀಕೆಂಡಲ್ಲಿ ಒಬ್ಬರಿಗೊಬ್ಬರು ಕೊಡ್ತಿದ್ದರೆ ಮುತ್ತು....!!
ಸ್ವಲ್ಪ ಬಂದೆ ತಾಳಿ, ಕಣ್ಮುಚ್ಕೊಂಡು ಹಾಗೇ ಕೂತಿರಿ
ನನ್ನ ಅದರಗಳಿಗೆ ಸಿಹಿ ಜೇನ ಸವರಿ ಬರುವೆ...
ಲೆ ಪೆದ್ದೀ!! ಚೀಫ್ ಗೆಸ್ಟು ಯಾರು ಅಂತ ಗೊತ್ತೇನೆ ನಿನಗೆ?!
ನಾನು ಮತ್ತೇ... ಚಿತ್ರನಟಿ ಆ ವ್ಯಂಜನ ಗಾಂಧಿ ಕಾಣೆ
ತಗೊಳ್ರೀ.... Kiss of Love
ನಿಮ್ಮ ಜೀವನದಲ್ಲಿ ಎಂದೂ ಮರೀಬಾರದು ಅಹ್ ಅಹ್ ಹಾ...
ಅಯ್ಯಯ್ಯೋ....!! ಮುತ್ತು ಕೊಡ್ತೀನಿ ಅಂತ ಹೇಳಿ
ಮೊಗಚೊ ಕೈ ಬಿಸಿ ಮಾಡಿ ನನ್ನ ಮೂತಿಯಲ್ಲ ಸುಟ್ಯಲ್ಯೇ...!!
ನಾ ಹೇಗೇ... ಚೀಫ್ ಗೆಸ್ಟಾಗಿ ಹೋಗೋದು....


Post has attachment

ಛೆ...!! ಎಲ್ಲೇ ಹೋದರು ಈ ನಿಮ್ಮ ಕಾಟ ತಪ್ಪಿದ್ದಲ್ಲ ಬಿಡಿ,
ಒಂಚೂರು ಘನತೆ, ಗಾಂಭೀರ್ಯ ನಿಮಗಿದ್ದರೆ ತಾನೆ
ಎಲ್ಲರೆದಿರು ಹೀಗೆ, ರಾಜಾರೋಷವಾಗಿ ಊಸು ಬಿಡುವುದೆ
ನಾಚಿಕೆ ಪಾಚಿಕೆ ಮನೆಯಿಂದ ಆಚೆಗೆ ಎನ್ನುವ ಜನ ನೀವು
ಒಮ್ಮೆ ಸುತ್ತಲೂ ಕಣ್ಣಾಡಿಸಿ ಬಸ್ಸಲ್ಲಿರುವ ಜನರೆಲ್ಲಾ ಹೇಗೆ
ಮುಖ ಕಿವುಚಿ, ಮೂಗು ಮುಚ್ಚಿಕೊಂಡಿರುವರೋ....
ಹಾದಿ ಬದಿ, ಬೀದಿ ಬದಿಯಲೆಲ್ಲಾ... ಬಾಯಿ ಚಪಲಕ್ಕೆ
ಸಿಕ್ಕಿದ್ದೆಲ್ಲಾ... ತಿಂದರೆ ಅಜೀರ್ಣವಾಗದೆ ಇನ್ನೇನಾದೀತು
ಹೊಟ್ಟೆ ಕೆಟ್ಟು ಬರುವ ದುರ್ಗಂಧದ ವಾಸನೆಗೆ ಗಬ್ಬು ಗಬ್ಬು;
ಬೆಳ್ಳಂಬೆಳಿಗ್ಗೆ ಎದ್ದು ಟಾಯ್ಲೆಟ್ಗೆ ಹೋಗಿದಿದ್ದರೆ ಹೀಗಾಗುತ್ತಿತ್ತೆ ...
ಎಲ್ಲಾ .... ನನ್ನ ಕರ್ಮ ಕರ್ಮ !!
ನೀ ಮೆಲ್ಲಗೆ ಮಾತಾಡೇ... ಮಾರಾಯ್ತೀ ... ಜನ,
ನಾನೇ ... ಊಸು ಬಿಟ್ಟಿರುವವನೆಂದು ನೋಡಿ ನಕ್ಕಾರು
ನಾನೇನು ಬಿಟ್ಟಿದ್ದಲ್ಲವೆ ಯಾರೋ .. ಬಿಟ್ಟರೆ ನನ್ನೇ ದೂಷಿಸುವೆ
ನೋಡು ನೀನೇ.. ಎಲ್ಲರೆದಿರು ಮಾನ ಹರಾಜು ಹಾಕುವಂತಿದೆ
ಅದೇನು ಹೇಳಿ ಕೇಳಿ, ಸಮಯ, ಸಂದರ್ಭ ನೋಡಿ ಬರುವುದೆ ?
ಬಂದಾಗ ಬಿಟ್ಟರೆ ಬಿಟ್ಟವರಿಗೂ ಕೊಂಚ ನಿರಾಳ
ವಾಸನೆಯ ಸೇವಿಸಿದವರಿಗೆ ತಾನೆ ಪ್ರಾಣ ಸಂಕಟ !
ಅದಕ್ಕೇನು ನಾಚಿಕೆಯೇ...? ಅಥವಾ ಮೈಲಿಗೆಯೆ ?
ನೀ ಓದಿಲ್ಲವೇನೆ ... ಅಥವಾ ಕೇಳಿಲ್ಲವೇ...?
ಡರ್ರು ಬರ್ರು ಭಯಂ ನಾಸ್ತಿ, ಟೊಂಯ್ಯ ಟೊಸ್ಸು ಯಥಯಥಾ।
ಕೊಂಯ್ಯ ಕೊಟ್ರು ಭಯಂ ಕಿಂಚ್ಚತ್ತು,
ನಿಶ್ಯಬ್ಧಂ ಪ್ರಾಣ ಸಂಕಟಾ.... ॥
ಶಿವಚೆನ್ನ ೧೦.೧೦.೨೦೧೪

Post has attachment
ಇಂದಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ನನ್ನ ಬ್ಲಾಗ್ ಬರಹ.
Photo

" ಮಟನ್ ಗುನ್ಯ "
**********
ಎರಡು ಮೂರು ದಿನದಿಂದ ಮೈಸರಿಯಿರದೆ
ಮೈ, ಕೈಕಾಲು ನೋವು ನೋವು
ಚಳಿ ಜ್ವರಕ್ಕೆ ನಾನೀಗ ಮನೆಯಲ್ಲಿಯೇ ...
ಆಸ್ಪತ್ರೆಗೆ ಹೋಗಿ, ದುಡ್ಡು ಸುರಿದು ಬಂದಾಯ್ತು
ಆತ್ಮೀಯ ಮಿತ್ರರೆಲ್ಲರ ಶುಭ ಹಾರೈಕೆ
ಬೇಗ ಗುಣ ಮುಖರಾಗಿ, fbಗೆ ಹಾಜರಾತಿ ಹಾಕಿ ಒಬ್ಬೊಬ್ಬರದ್ದೂ.... ಒಂದೊಂದು ಸಲಹೆ, ಓಲೈಕೆ
ಏನು ಚಳಿ ಜ್ವರವೆ, ಈ ಕ್ಲೈಮೇಟೇ ಹಾಗೆ ಸ್ವಾಮಿ
ಮೊನ್ನೆ ಬಿದ್ದ ಮಳೆಗೆ ಎಲ್ಲೋ.... ನೆನೆದಿರಬೇಕು
ಆಗಲೇ .... ಒಂದು ನೈಂಟಿ ಹೊಡೆದಿದ್ದರೆ
ಈ ಕೆಮ್ಮು ದಮ್ಮು ,ಶೀತ ಗೀತ ಬರುತ್ತಿರಲಿಲ್ಲ ನೋಡಿ
ಹೋಗಲಿ ಡಾಕ್ಟರ್ ಬಳಿ ಹೋಗಿದ್ದಿರೋ... ಇಲ್ಲವೋ?
ಏನಂದರು ಚಿಕನ್ ಗುನ್ಯ, ಹೆಚ್1 ಎನ್1, ಮಲೇರಿಯ ಅದ್ಯಾವುದೋ .... ಹೊಸ ರೋಗವಂತೆ
ಬೆಂಗಳೂರಿನ ತುಂಬೆಲ್ಲಾ.... ಅದೇ ಸುದ್ದಿಯಂತೆ
ನನ್ನ ತಲೆಯೊಳಗೆ ಅನುಮಾನದ ಹುಳ ಬಿಟ್ಟು
ಯೋಚಿಸುವಂತೆ ಮಾಡಿ,
ಡಾಕ್ಟರ್ ಹೇಳಲಿಲ್ಲವೆ ನಿಮಗೆ? ಸರಿ ಹೋಯ್ತು ಬಿಡಿ
ನಾನೇ... ಗಾಭರಿಯಿಂದ ಯಾವ ರೋಗವಂತೆ
ಬೇಗ ಹೇಳಬಾರದೇ... " ಮಟನ್ ಗುನ್ಯ " ಎನ್ನಬೇಕೆ
ಆ ಸುಸ್ತಲ್ಲೂ.... ನಕ್ಕಿದ್ದೇ... ನಕ್ಕಿದ್ದು

Post has attachment
Wait while more posts are being loaded