Profile cover photo
Profile photo
Sri Vajreshwari Combines
About
Posts

Post has attachment
Add a comment...

Post has attachment
Aduva Gombe | ಆಡುವ ಗೊಂಬೆ | Song Making | Raghavendra Rajkumar

Direction: Dorai-Bhagavan
Add a comment...

Post has attachment
ಆಗದು ಎಂದು ಕೈಕಟ್ಟಿ ಕುಳಿತರೆ...
Photo
Add a comment...

Post has attachment
ರಥ ಸಪ್ತಮಿ ಚಿತ್ರ ಬಿಡುಗಡೆ (1986):
"ಪ್ರೀತಿಗೆ ಆಸ್ತಿ ಬೇಕಿಲ್ಲ, ಜಾತಿ ಮುಖ್ಯ ಅಲ್ಲ, ಅಂತಸ್ತಿನ ಅಂತರ ತಿಳಿದೇ ಇಲ್ಲ". ಪ್ರೀತಿಯ ಪ್ರಾರಂಭ ಜಗಳ ಎಂಬುದು ಓಬೀರಾಯರ ಕಾಲದ ಸತ್ಯ...ಕಾಲೇಜಿನ ಒಂದು ಸುಂದರ ಶ್ರೀಮಂತ ಹುಡುಗಿ, ಒಬ್ಬ ಬಡ ಪ್ರತಿಭಾವಂತ ಹುಡುಗ... ಇವರ ಇಬ್ಬರ ನಡುವೆ ಮೊದಲಿಗೆ ಜಗಳ, ನಂತರ ಸ್ಪರ್ಧೆ, ಮುಂದೆ ಹೊಡೆದಾಟ, ಕೊನೆಯಲ್ಲಿ ಪ್ರೀತಿ. ಹೀಗೆ ಶುರುವಾದ ಪ್ರೀತಿ ಹುಡುಗನ ಮರಣದೊಂದಿಗೆ ವಿರಾಮ... ಮುಂದೆ ಅದೇ ಹುಡುಗ ಬೇರೆ ಊರಿನಲ್ಲಿ ಬೇರೆ ಹೆಸರಿನೊಂದಿಗೆ ವಾಸ, ಹುಡುಗಿಯ ಸತತ ಪ್ರಯತ್ನದ ನಂತರ ಪ್ರೀತಿ ಒಪ್ಪಿಕೊಳ್ಳುವ ಹುಡುಗ. ಇದು 'ರಥ ಸಪ್ತಮಿ' ಎಂಬ ದೃಶ್ಯಕಾವ್ಯದ ಕಥಾ ಹಂದರ. ಡಾ. ಶಿವರಾಜ್ ಕುಮಾರ್ ರವರ ಎರಡನೇ ಸಿನೆಮಾ. 'ಆನಂದ್' ಯಶಸ್ಸಿನ ನಂತರ ಅವರಿಗೆ ದಕ್ಕಿದ ಮತ್ತೊಂದು ಭಾರೀ ಯಶಸ್ಸು. ಆಶಾರಾಣಿ ಯವರ ಮೊದಲನೇ ಚಿತ್ರ ಇದು.
ಪ್ರೀತಿಗೆ ಎಡರು ತೊಡರುಗಳು ಜಾಸ್ತಿ ಆದರೆ ಯಶಸ್ಸು ಖಂಡಿತ. ಕಾದಂಬರಿ ಆಧಾರಿತ ಸಿನೆಮಾಗಳಲ್ಲಿ ಮತ್ತೊಂದು ಅದ್ಬುತ ಸಿನೆಮಾ 'ರಥ ಸಪ್ತಮಿ'. ಶಿವಣ್ಣ ರವರ ಯಶಸ್ಸಿನ ಯಾತ್ರೆ ಮುಂದುವರೆಸಿದ ಈ ಸಿನೆಮಾದ ನಿರ್ದೇಶಕರು ರಾಜಶೇಕರ್ ರವರು ಹಾಗೂ ವಜ್ರೇಶ್ವರಿ ಯವರ ನಿರ್ಮಾಣ. ಅಂದಿನ ಯುವಕರ ಪಾಲಿನ ಪ್ರೇಮ ಕಾವ್ಯ 'ರಥ ಸಪ್ತಮಿ'.

Ratha Sapthami is a 1986 Kannada romance musical film directed by M. S. Rajashekar. The film starred Dr. Shivarajkumar in his second venture after Anand and debutant actress Asha Rani. The film had a musical score composed by Upendra Kumar while the lyrics, screenplay and dialogues were written by Chi. Udaya Shankar.
Photo
Add a comment...

Post has attachment
ಕೌಟುಂಬಿಕ ಭಾಂದವ್ಯ...
Photo
Add a comment...

Post has attachment
ಹೊಸಬೆಳಕು ಮೂಡುತಿದೆ...
Photo
Add a comment...

Post has attachment
ಗುರಿ ಚಿತ್ರ ಬಿಡುಗಡೆ (1986):
"ಗುರಿ ಇರಬೇಕು ಕಲಿಯಲು, ಗುರಿ ಇರಬೇಕು ಬದುಕಲು"... ನ್ಯಾಯವೇ ದೇವರು ಎಂದು ನಂಬಿದ ಒಬ್ಬ ಸಮರ್ಥ ಅಧಿಕಾರಿಗೆ ಬರೋ ಕಷ್ಟಗಳು, ಅದರಿಂದ ಆತ ಅನುಭವಿಸುವ ನೋವುಗಳು, ಇಷ್ಟಾದರೂ ಆತ ಛಲ ಬಿಡದೇ ತನ್ನ ನೋವಿಗೆ ಕಾರಣ ಆದವರ ಮೇಲೆ ಗುರಿ ಬಿಡದೇ ಸೇಡು ತೀರಿಸಿಕೊಳ್ಳುವ ಕಥಾ ಹಂದರ ಹೊಂದಿರುವ ಚಿತ್ರವೇ "ಗುರಿ". ಡಾ|| ರಾಜ್ ಕುಮಾರ್ ರವರ ಚಿತ್ರ ಬದುಕಿನಲ್ಲಿ ವಿಭಿನ್ನವಾದ ಕ್ಲೈಮಾಕ್ಸ್ ಹೊಂದಿರುವ ಚಿತ್ರ 'ಗುರಿ'. ಕಾಳಿಪ್ರಸಾದ್ ಪಾತ್ರದಲ್ಲಿ ಡಾ|| ರಾಜ್ ಹಾಗೂ ನಟಿ ಅರ್ಚನ ರವರ ಅಮೋಘ ಅಭಿನಯ ಮತ್ತು ಮುಖ್ಯಮಂತ್ರಿ ಚಂದ್ರು ಅವರು ಖಳನಟರಾಗಿ ತಮ್ಮ ಅಭಿನಯ ನೀಡಿದ್ದಾರೆ.
ಒಳ್ಳೆತನಕ್ಕೆ ಪರೀಕ್ಷೆಗಳು ಜಾಸ್ತಿ ಆದರೆ ಫಲ ಖಂಡಿತ. ಗುರಿ ಮುಟ್ಟಲು ಸಾಹಸಗಳನ್ನು ಮಾಡುವ ಪಾತ್ರದಲ್ಲಿ ಡಾ|| ರಾಜ್ ಕುಮಾರ್ ರವರು ಅಭಿನಯಿಸಿರುವ ಹಾಗೂ ಪಿ.ವಾಸು ರವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ವಜ್ರೇಶ್ವರಿಯವರ ಕೊಡುಗೆ.

Guri is a 1986 Kannada film, directed by P. Vasu. The film stars Dr. Rajkumar, Archana, Pandari Bai in guest appearance and Jai Jagadish in lead roles. The film had musical score by Rajan-Nagendra.
Photo
Add a comment...

Post has attachment
ಅಪ್ಪಾಜಿಯ ಮಮಕಾರ...
Photo
Add a comment...

Post has attachment
ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ ಹೊಸ ಹಕ್ಕಿಯ ನೋಡಿದೆ...
Photo
Add a comment...

Post has attachment
ಆನಂದ್ ಚಿತ್ರ ಬಿಡುಗಡೆ (1986):
'ಯುವ ಶಕ್ತಿಯ ಉತ್ಸಾಹದ ಮುಂದೆ ಸರ್ವ ಶಕ್ತಿಯು ನಿಲ್ಲಲು ಕಷ್ಟ'. ತನ್ನ ತಂದೆ ಯಾರು ಎಂದು ತಿಳಿಯದ ಒಬ್ಬ ಯುವಕ ತನ್ನ ತಾಯಿಯ ಪ್ರೀತಿಯಲ್ಲಿ ಬೆಳೆಯುತ್ತಿರುವಾಗ ತನ್ನ ತಂದೆ ಆ ಊರಿನ ಶ್ರೀಮಂತ ವ್ಯಕ್ತಿ ಎಂದು ತಿಳಿದು, ಆತನ ಅವಮಾನಗಳನ್ನು ಸಹಿಸಿಕೊಂಡು ಕೊನೆಗೆ ತನ್ನ ತಂದೆಯನ್ನು ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸುವ ಒಂದು ರೋಚಕ ಕಥೆಯೇ 'ಆನಂದ್'. ಡಾ. ಶಿವರಾಜ್ ಕುಮಾರ್ ಅವರ ಮೊದಲನೆಯ ಸಿನೆಮಾ... ಅವರ ಪಾಲಿಗೆ ಗೆಲುವಿನ ಮೆಟ್ಟಿಲಾಗಿ ಇಂದಿಗೂ ನೆನಪಿನಲ್ಲಿ ಉಳಿಯುವಂಥಹ ಸಿನೆಮಾ. ಸುಧಾರಾಣಿ, ರಾಜೇಶ್, ಜಯಂತಿಯವರ ಅಭಿನಯ ಅಮೋಘವಾಗಿ ಮೂಡಿ ಬಂದಿದೆ.
ಒಬ್ಬ ತಂದೆ ಯಾರು ಎಂದು ತಿಳಿಯದ ಹುಡುಗನ ಸ್ಥಿತಿ ಈ ಸಿನೆಮಾದಲ್ಲಿ ಅದ್ಭುತವಾಗಿ ಮೂಡಿ ಬಂದಿದ್ದು, ಡಾ. ಶಿವರಾಜ್ ಕುಮಾರ್ ಅವರು ಅಂದು ಆ ಪಾತ್ರಕ್ಕೆ ಜೀವ ತುಂಬಿ, ಕನ್ನಡಿಗರ ಮನದಲ್ಲಿ 'ಆನಂದ್' ಆಗಿ ಅಮರವಾಗಿ ಉಳಿದಿದ್ದಾರೆ. ಸಿಂಗೀತಂ ಶ್ರೀನಿವಾಸ ರಾವ್ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರವು ವಜ್ರೇಶ್ವರಿಯವರ ಕೊಡುಗೆ ಕನ್ನಡಿಗರ ಪಾಲಿಗೆ.

Anand is a 1986 Kannada film directed by Singeetham Srinivasa Rao. The film starred Dr. Shivrajkumar and Sudha Rani in lead roles with both making their debuts.
Photo
Add a comment...
Wait while more posts are being loaded