Profile

Cover photo
ಸಂಪದ Sampada Kannada
109 followers|24,540 views
AboutPostsPhotosVideos

Stream

 
“ಮಾಸ್ತಿ ಕನ್ನಡದ ಆಸ್ತಿ” ಎಂದೇ ಖ್ಯಾತರಾಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ಅಂದಿನ ಮೈಸೂರು ಸಂಸ್ಥಾನದಲ್ಲಿ ಅತ್ಯಂತ ಉನ್ನತ ಹುದ್ದೆಯನ್ನು ಅಲಂಕರಿಸಿದವರು. ಮೈಸೂರು ಸಂಸ್ಥಾನದ ದಿವಾನ ಪದವಿಗೆ ಆಯ್ಕೆಯಾಗ ಬೇಕಾಗಿದ್ದ ಅತ್ಯಂತ ದಕ್ಷ ಅಧಿಕಾರಿ ಶ್ರೀಯುತ ಮಾಸ್ತಿಯವರು ಅಧಿಕಾರದಲ್ಲಿ ಎಷ್ಟು ನಿಷ್ಠೆ, ಪ್ರಾಮಾಣಿಕತೆಯಿಂದ ಹೆಸರು ಮಾಡಿದ ಹಾಗೆಯೇ ಸಾಹಿತ್ಯ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದ್ದು ‘ಜ್ಞಾನ ಪೀಠ’ ಪ್ರಶಸ್ತಿ ಪಡೆದವರು.

#Kannada  #Sampada
 ·  Translate
“ಮಾಸ್ತಿ ಕನ್ನಡದ ಆಸ್ತಿ” ಎಂದೇ ಖ್ಯಾತರಾಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ಅಂದಿನ ಮೈಸೂರು ಸಂಸ್ಥಾನದಲ್ಲಿ ಅತ್ಯಂತ ಉನ್ನತ ಹುದ್ದೆಯನ್ನು ಅಲಂಕರಿಸಿದವರು. ಮೈಸೂರು ಸಂಸ್ಥಾನದ ದಿವಾನ ...
1
1
RAMA SWAMY's profile photo
 
Rare information thank u sir
Add a comment...
 
ಅನಂತ್​ ನಾಗ್. ಚಾರ್ಮಿಂಗ್ ಹೀರೋ. ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಬಲ್ಲ ಮಹಾನ್ ನಟ. ಈ ನಟ, ಹೊಸಬರ  ಪ್ರಾಯೋಗಿಕತೆಗೆ ತೆರೆದುಕೊಳ್ಳುತ್ತಾರೆ. ಪಾತ್ರದೊಳಗೇ ಪಾತ್ರವಾಗಿ ಅದಕ್ಕೇನೆ, ನೈಜತೆ ತಂದುಕೊಡ್ತಾರೆ. ನೋಡುಗ ಪ್ರೇಕ್ಷಕರಿಗೂ ಅನಂತ್​ ನಾಗ್ ಪಾತ್ರವಾಗಿ ಕಾಣಿಸುವುದಿಲ್ಲ. ಜೀವಂತ ವ್ಯಕ್ತಿತ್ವದಂತೆ ಮನಸ್ಸಿಗೆ ಇಳಿದು ಬಿಡ್ತಾರೆ. ಅದುವೇ ‘ಅನಂತ್’ ಶಕ್ತಿ...
#Kannada   #Sampada  
 ·  Translate
1
Add a comment...
 
ಎರಡು ಮೂರು ವರ್ಷಗಳಿಂದ, ಶಂಕರ ಜಯಂತಿಯಂದು ಶಂಕರಾಚಾರ್ಯರ ಯಾವುದಾದರೂ ಶ್ಲೋಕವನ್ನು ಓದಿ ಅನುವಾದ ಮಾಡುತ್ತ ಬಂದಿದ್ದೇನೆ. ಹಾಗಾಗಿ, ಈ ಸಲವೂ ಶಂಕರ ಜಯಂತಿಯಂದು ಒಂದು ಪ್ರಯತ್ನ. 
ಒಂದೇ ಪದ್ಯವನ್ನೇ ಎರಡು ರೀತಿಯಲ್ಲಿ  (ಒಂದು ಚೌಪದಿಯಲ್ಲಿ, ಪ್ರಾಸವಿಲ್ಲದೇ - ಮತ್ತೊಂದು ಭಾಮಿನಿ ಷಟ್ಪದಿಯಲ್ಲಿ) ಅನುವಾದ ಮಾಡಿದ್ದೇನೆ:
#Kannada  #Sampada
 ·  Translate
1
Add a comment...
 
ಎರಡನೆಯ ಸಲ ಮತ್ತೆ ಫೋನು ರಿಂಗಣಿಸಿದಾಗ ಮನಸ್ಸಿಲ್ಲದ ಮನಸ್ಸಿನಿಂದ ಕಿರಣ ಕರೆ ಸ್ವೀಕರಿಸಿ, "ಸಲೀಮ್, ನಾನು ಅರ್ಜೆಂಟ್ ಕೆಲಸದಲ್ಲಿದೀನಿ. ಆಮೇಲೆ ಮಾತಾಡ್ತೀನಿ" ಎಂದು ಫೋನ್ ಕಟ್ ಮಾಡಿದ. ಆದರೆ ಮತ್ತೆ ಫೋನು ರಿಂಗಣಿಸಿತು. ಸಲೀಮನೇ ಕರೆ ಮಾಡಿದ್ದ. ಕರೆ ಸ್ವೀಕರಿಸಿ ರೇಗಬೇಕೆಂದುಕೊಂಡವನಿಗೆ ಸಲೀಮನೇ, "ಹೋಲ್ಡಾನ್, ಗೆಳೆಯಾ ಹೋಲ್ಡಾನ್.  
#Kannada  #Sampada
 ·  Translate
1
Add a comment...
 
'ನಿನ್ನೆ ಕಾರ್ಯಕ್ರಮ ಎಷ್ಟು ಚೆನ್ನಾಗಿತ್ತು ಗೊತ್ತಾ? ನೀನು ಯಾಕೋ ಬರಲಿಲ್ಲ?' ಎಂಬ ಪ್ರಶ್ನೆಗೆ ಅವನು ಉತ್ತರಿಸಿದ್ದ, 'ಏನ್ ಮಾಡಲೋ? ನನಗಂತೂ ಒಂದ್ ನಿಮಿಷಾನೂ ಪುರುಸೊತ್ತೇ ಇರಲ್ಲ.' ಆದರೆ ನಿಜವಾದ ಸಂಗತಿಯೆಂದರೆ ಕಾರ್ಯಕ್ರಮ ನಡೆದ ಸಮಯದಲ್ಲಿ ಆತ ತನ್ನ ಗೆಳೆಯನೊಂದಿಗೆ ಬಾರಿನಲ್ಲಿ ಕುಡಿಯುತ್ತಾ ಕುಳಿತಿದ್ದ. ಹಾಗಾಗಿ ಅವನಿಗೆ ಪುರುಸೊತ್ತಿರಲಿಲ್ಲ. ಈ 'ಪುರುಸೊತ್ತಿಲ್ಲ' ಅನ್ನುವುದನ್ನು ಸಾಮಾನ್ಯವಾಗಿ ಎಲ್ಲರೂ ಬಳಸುತ್ತೇವೆ. ಅಷ್ಟಕ್ಕೂ ಈ 'ಪುರುಸೊತ್ತು' ಅಂದರೆ ಏನು? ಏನಾದರೂ ಮಾಡಲು ಅಗತ್ಯವಾದ ಸಮಯ ಅಷ್ಟೇ.  

#Kannada  #Sampada
 ·  Translate
1
Add a comment...
 
ಶಾಲೆಗೆ ಒಯ್ಯಲು ಬಸ್ಸು ಬರುವಾ ಹೊತ್ತು
ಬಾಗಿಲು ತೆರೆದು ನಿಂತಿದ್ದೆ ಸ್ವಲ್ಪೇ ಹೊತ್ತು

ಗೂಡು ಬಿಟ್ಟ ನನ್ನ ಹಕ್ಕಿ ಹೊರಟಿದ್ದನು ಬಸ್ಸಿನೆಡೆ
ಮರದಲ್ಲಿನ ಗೂಡಿನಲ್ಲಿ ಕೇಳಿತ್ತು ಕಲವರ ಇನ್ನೊಂದೆಡೆ

#Kannada   #Sampada  
 ·  Translate
ಶಾಲೆಗೆ ಒಯ್ಯಲು ಬಸ್ಸು ಬರುವಾ ಹೊತ್ತು ಬಾಗಿಲು ತೆರೆದು ನಿಂತಿದ್ದೆ ಸ್ವಲ್ಪೇ ಹೊತ್ತು. ಗೂಡು ಬಿಟ್ಟ ನನ್ನ ಹಕ್ಕಿ ಹೊರಟಿದ್ದನು ಬಸ್ಸಿನೆಡೆ ಮರದಲ್ಲಿನ ಗೂಡಿನಲ್ಲಿ ಕೇಳಿತ್ತು ಕಲವರ ...
2
Add a comment...
 
ಎಲೈ ಮರ್ಯಾದಾ ಪುರುಷೋತ್ತಮನೇ, ಒಂದಂತೂ ನಿಜ ಅಲ್ಲಲ್ಲ ಒಂದಂತೂ ಸೂರ್ಯ-ಚಂದ್ರರಿರುವಷ್ಟೇ ಸತ್ಯ ! ನೀನೊಬ್ಬ ಆದರ್ಶ ಪುರುಷ. ನಿನ್ನ ಗುಣಗಳನ್ನು ಮತ್ತು ಜೀವನವನ್ನು ಅನುಕರಣೆ ಮಾಡಿ ನೆಡೆಯುವವರಲ್ಲಿ ಕಲಿಯುಗದ ಮಾನವರು ಖಂಡಿತ ಹಿಂದೆ ಬಿದ್ದಿಲ್ಲ ಎಂದು ನಿನಗೆ ನಾ ಹೇಳಲು ಸಂತೋಷಿಸುತ್ತೇನೆ. ಕಾಲಕ್ಕೆ ತಕ್ಕಂತೆ ಸ್ವರೂಪ ಬದಲಾಗಿರಬಹುದು ಅಷ್ಟೇ !
#Kannada   #Sampada  
 ·  Translate
ಎಲೈ ಮರ್ಯಾದಾ ಪುರುಷೋತ್ತಮನೇ, ಒಂದಂತೂ ನಿಜ ಅಲ್ಲಲ್ಲ ಒಂದಂತೂ ಸೂರ್ಯ-ಚಂದ್ರರಿರುವಷ್ಟೇ ಸತ್ಯ ! ನೀನೊಬ್ಬ ಆದರ್ಶ ಪುರುಷ. ನಿನ್ನ ಗುಣಗಳನ್ನು ಮತ್ತು ಜೀವನವನ್ನು ಅನುಕರಣೆ ಮಾಡಿ ನೆಡೆಯುವವರಲ್ಲಿ ...
1
Add a comment...
 
ಹಾಸಿಗೆ ಮೇಲೆ ಅಡಿಯಿಂದ ಮುಡಿವರೆಗೂ ಪಾರದರ್ಶಕವಾದ ಹೊದಿಗೆಯನ್ನು ಮುಸುಕೆಳೆದು ಕೊಠಡಿಯ ಛಾವಣಿಯನ್ನೇ ದಿಟ್ಟಿಸುತ್ತಾ ಮಲಗಿದ್ದೆ. ನನ್ನವರು ಕೊಠಡಿಯ ಬಾಗಿಲ ಬಳಿ ಬಂದವರು ನನ್ನ ಕಡೆಗೊಮ್ಮೆ ದಿಟ್ಟಿಸಿ ನೋಡಿ ಅಡುಗೆಮನೆಯತ್ತ ಹೆಜ್ಜೆ ಹಾಕಿದರು. ಮನಸ್ಸಿನಲ್ಲಿ ಮನೆ ಮಾಡಿದ್ದ ಸಂಶಯಗಳೆಲ್ಲ ಹೊತ್ತಿ ಉರಿದು ಪರಾಕಾಷ್ಠೆ ತಲುಪಿ ಇದೀಗ ಶಾಂತವಾಗುತ್ತಿತ್ತು. ಚಿಕ್ಕಂದಿನಲ್ಲಿ ವಠಾರದ ಮಂದಿಯೆಲ್ಲ ಸೇರಿ ನಡೆಸುತ್ತಿದ್ದ ಕಾಮದಹನದ ದೃಶ್ಯ ನೆನಪಾಗುತ್ತಿತ್ತು. ಒಂದು ಹಂತದಲ್ಲಿ ಆತ್ಮಹತ್ಯೆಗೆ (ದೇಹ ಹತ್ಯೆ! ಆತ್ಮಕ್ಕೆ ಸಾವಿಲ್ಲವೆಂಬುದು ನನ್ನ ನಂಬಿಕೆ )  ತಯಾರಾಗಿದ್ದ ನನ್ನನ್ನು ಆ ಬೆಂಕಿಯ ಜ್ವಾಲೆ ಬಲಿ ತೆಗೆದುಕೊಳ್ಳಲ್ಲಿಲ್ಲ ! ಸದ್ಯ ಬಚಾವಾದೆ. ಇಲ್ಲವಾದಲ್ಲಿ ಎಂಥ ಅನಾಹುತ ಸಂಭವಿಸಿಬಿಡುತ್ತಿತ್ತು ? ಎರಡು ವರ್ಷದ ನನ್ನ ವಿಜಿ ತಾಯಿ ಇಲ್ಲದ ತಬ್ಬಲಿಯಾಗುತ್ತಿದ್ದ. ನನ್ನ ಎಷ್ಟೊಂದು ಪ್ರೀತಿಸುವ ಇವರೋ ಇಷ್ಟು ಚಿಕ್ಕ ವಯಸ್ಸಲ್ಲಿ ನನ್ನನ್ನು ಕಳೆದುಕೊಂಡು ಹೇಗೆ ತಾನೇ ಬದುಕಿರುತ್ತಿದ್ದರು?
#Kannada   #Sampada  
 ·  Translate
ಬಹಳ ದಿನಗಳ ನಂತರ ಸಂಪದದಲ್ಲಿ ಬರಹ ಪ್ರಕಟಿಸಲು ಸಂತಸವಾಗುತ್ತಿದೆ. "ಪಾಪ ಪ್ರಜ್ಞೆ" - ಕಥೆಯ ಎಂಟನೆಯ ಭಾಗ. ಮೊದಲ ಏಳು ಭಾಗಗಳನ್ನು ಏಳು ಬೇರೆ ಬೇರೆ ಲೇಖಕರು ಬರೆದಿದ್ದಾರೆ. ಆ ಬರಹಗಳೆಲ್ಲ ಅವರವರ ...
1
Add a comment...
 
ಇತ್ತೀಚೆಗೆ ಅಂದರೆ 2014ರ ಮೇ1 ರಿಂದ ಮೇ 3ರ ತನಕ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೊನ್ನೆಮರಡು ಶರಾವತಿ ಜಲಾನಯನ ಪ್ರದೇಶದ ಹಿನ್ನೀರಿನ ದಡದಲ್ಲಿ, ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಕಥಾ ಕಮ್ಮಟದಲ್ಲಿ ನಾಡಿನ ಬೇರೆ ಬೇರೆ ಜಿಲ್ಲೆಗಳಿಂದ ಉದಯೋನ್ಮುಖ ಕಥಾ ಲೇಖಕರು ಭಾಗವಹಿಸಿ ಹಿರಿಯ ಕಥೆಗಾರರಿಂದ ಸಾಕಷ್ಟು ಮಾಹಿತಿಗಳನ್ನು ಪಡೆದರು. ಮೇ3ರ ಶನಿವಾರ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಕವಿ ಸದಾನಂದರು ಅದೇತಾನೇ ಸ್ಥಳದಲ್ಲಿ ರಚಿಸಿದ ಮತ್ತೇಭವಿಕ್ರೀಡಿತ ವೃತ್ತದ ಎರಡು ಪದ್ಯಗಳನ್ನು ವಾಚಿಸಿ ಪ್ರಾರ್ಥನೆ ಮಾಡಿದರು. ಮೂರುದಿನಗಳ ಈ ಶಿಬಿರದಲ್ಲಿ ಹಾಜರಿದ್ದ ಕವಿ ಕಮ್ಮಟದ ಸಾರವನ್ನು ಯುವ ಬರೆಹಗಾರರಿಗೆ ಮಾರ್ಗಸೂಚಿಯಂತೆ ಛಂದೋಬದ್ಧವಾಗಿ ಅಪರೂಪವಾಗಿರುವ ವೃತ್ತದಲ್ಲಿ ನೀಡಿದ್ದಾರೆ.
#Kannada  
 ·  Translate
ಹೊನ್ನೆಮರಡಿನ ಕಥಾ ಕಮ್ಮಟದ ಸಾರ : ಇತ್ತೀಚೆಗೆ ಅಂದರೆ 2014ರ ಮೇ1 ರಿಂದ ಮೇ 3ರ ತನಕ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೊನ್ನೆಮರಡು ಶರಾವತಿ ಜಲಾನಯನ ಪ್ರದೇಶದ ಹಿನ್ನೀರಿನ ದಡದಲ್ಲಿ, ಶಿವಮೊಗ್ಗ ...
1
Add a comment...
 
ಇವತ್ತು ಯಾವುದೋ ಹಳೆಯ ಚಿತ್ರವೊಂದನ್ನು ಹುಡುಕುತ್ತಿರುವಾಗ ಯೂಟ್ಯೂಬಿನಲ್ಲಿ ॑ಗಂಧದಗುಡಿ॑ ಚಿತ್ರ ಕಂಡಿತು. ಗಂಧದಗುಡಿ ಚಿತ್ರದ "ನಾವಾಡುವ ನುಡಿಯೇ..." ಹಾಡು ಎಲ್ಲರಿಗೂ ಎಷ್ಟು ಚಿರಪರಿಚಿತ! ನನಗೆ ಇದು ನನ್ನ ಚಿಕ್ಕಂದಿನಲ್ಲಿ ನೋಡಿದ ಸಿನಿಮಾಗಳ ನೆನಪು ತಂದಿತು. ಗಂಧದಗುಡಿ, ನಾಗರಹಾವು, ಮಾನಸಸರೋವರ, ಸಂಪತ್ತಿಗೆ ಸವಾಲ್ - ಇವೆಲ್ಲ ದೂರದರ್ಶನದಲ್ಲಿ ಮತ್ತೆ ಮತ್ತೆ ಪ್ರಸಾರವಾಗುತ್ತಿದ್ದ ಚಿತ್ರಗಳು. ಸರಳವಾದ ಚಿತ್ರಕಥೆ, ಸರಳ ನಿರೂಪಣೆ ‍ ಎಷ್ಟು ಸಾರಿ ನೋಡಿದರೂ ಬೇಸರವಾಗದಂತಹ ಚಿತ್ರಗಳು ಇವು!  

#Kannada #Sampada
 ·  Translate
ಇವತ್ತು ಯಾವುದೋ ಹಳೆಯ ಚಿತ್ರವೊಂದನ್ನು ಹುಡುಕುತ್ತಿರುವಾಗ ಯೂಟ್ಯೂಬಿನಲ್ಲಿ ॑ಗಂಧದಗುಡಿ॑ ಚಿತ್ರ ಕಂಡಿತು. ಗಂಧದಗುಡಿ ಚಿತ್ರದ "ನಾವಾಡುವ ನುಡಿಯೇ..." ಹಾಡು ಎಲ್ಲರಿಗೂ ಎಷ್ಟು ಚಿರಪರಿಚಿತ!
1
Add a comment...
 
ಎತ್ತನೋಡಿರತ್ತ ಚಿಗುರನು ಹೊತ್ತು ಮರಗಳು ನಲಿದಿರೆ
ಮತ್ತೆ ಬಂದಿಹುದೀ ಯುಗಾದಿಯು ಹೊಸತು ವರ್ಷಕ್ಕಾದಿಯು

ಉಲಿವ ಕೋಗಿಲೆ ಚಿಗುರು ಮಾವೆಲೆ ನೀಲಿಬಣ್ಣದ ಆಗಸ
ಹುರುಪು ಹೆಚ್ಚಿಸುವಂಥ ಚೆಲುವಿದು ತಂತು ಮನದಲಿ ಸಂತಸ

ಮೂಡಣದ ಆಗಸದಿ ನೇಸರನ ಓಕುಳಿ
ಮನೆಮನೆಯ ಮುಂದೂ ರಂಗವಲ್ಲಿ
ಮಾಂದಳಿರ ತೋರಣವು ತೂಗಿ ಬಾಗಿಲಲಿ
ಹೊಸಕನಸ  ಚಿಮ್ಮಿಸುವುದೀ ಮನದಲಿ

#Kannada   #Sampada   #ugadi   #festival  
 ·  Translate
ಮತ್ತೆ ಬಂತು ಯುಗಾದಿ | ಸಂಪದ - Sampada
1
Add a comment...
Story
Tagline
ಹೊಸ ಚಿಗುರು ಹಳೆ ಬೇರು - Sampada Kannada Online Community
Introduction
Sampada is a community of people passionate about literary activities in Kannada. Sampada is one of the largest Kannada communities on the Internet.
ಸಂಪದ ಕನ್ನಡ ನಾಡು, ನುಡಿ, ಓದು ಸುತ್ತ ಆಸಕ್ತಿ ಇಟ್ಟುಕೊಂಡಿರುವವರ ಆನ್ಲೈನ್ ಸಮುದಾಯ ಹಾಗು ಕನ್ನಡದ ಮೊತ್ತ ಮೊದಲ ಆನ್ಲೈನ್ ಸಮುದಾಯಗಳಲ್ಲೊಂದು.
Links
Contact Information
Contact info
Email